Advertisement

ಕುಷ್ಟಗಿ: ಎಬಿ ನೆಗೆಟಿವ್ ರಕ್ತದಾನ ಮಾಡಿ ತಾಯಿ-ಮಗು ಜೀವ ಉಳಿಸಿದ ಯುವಕ

07:47 PM Oct 13, 2022 | Team Udayavani |

ಕುಷ್ಟಗಿ: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೆಗ್ಗಿನ ಓಣಿಯ ಮಹಿಳೆಗೆ ಎಬಿ ನೆಗೆಟಿವ್ ಮಾದರಿ ರಕ್ತ ತುರ್ತು ಅಗತ್ಯವಾಗಿತ್ತು. ಈ ಸಂಧರ್ಭದಲ್ಲಿ ಕೊಪ್ಪಳದ ಗ್ಯಾರೇಜ್ ನಲ್ಲಿ ಕೆಲಸ ಮಾಡುವ ಯುವಕನೊಬ್ಬ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ, ತಾಯಿ ಮಗುವಿನ ಜೀವ ಉಳಿಸಿ ಮಾನವೀಯತೆ ಮೆರೆದ ಪ್ರಸಂಗ ನಡೆದಿದೆ.

Advertisement

ಕುಷ್ಟಗಿಯ ತೆಗ್ಗಿನ ಓಣಿಯ ನಿವಾಸಿ ಖಾಜಾಬಿ ಕನಕಗಿರಿ ಅವರಿಗೆ ಹೆರಿಗೆಯಾಗಿದ್ದು ಅವರಿಗೆ ಎಬಿ ನೆಗೆಟಿವ್ ರಕ್ತ ಅಗತ್ಯವಾಗಿತ್ತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಬಾನಿ ಆರ್.ಟಿ. ಅವರು ಸಾಮಾಜಿಕ ಜಾಲತಾಣದಲ್ಲಿ ರಕ್ತದ ಅಗತ್ಯತೆ ಬಗ್ಗೆ ಪೋಸ್ಟ್ ಮಾಡಿದ್ದರು. ಇದಕ್ಕೆ ಸ್ಪಂಧಿಸಿದ  ಕೊಪ್ಪಳದಲ್ಲಿ ಗ್ಯಾರೇಜ್ ಕೆಲಸ ಮಾಡುವ ಮರ್ದಾನ್ ಕೂಡಲೇ ಕೊಪ್ಪಳಕ್ಕೆ ದೌಡಾಯಿಸಿ ರಕ್ತದಾನ ಮಾಡಿ ತಾಯಿ, ಮಗುವಿನ ಜೀವ ಉಳಿಸಲು ನೆರವಿಗೆ ಬಂದಿದ್ದಾನೆ. ಈ ಯುವಕನ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಷ್ಟಗಿಯ ಮಹಿಳೆಗೆ ಎಬಿ ನೆಗೆಟಿವ್ 2 ಪಾಯಿಂಟ್ ರಕ್ತ ತುರ್ತು ಅಗತ್ಯವಿತ್ತು. ‌ಒಂದು ಪಾಯಿಂಟ್ ರಕ್ತ ಲಭ್ಯವಾಗಿತ್ತು ಇನ್ನೊಂದು ಪಾಯಿಂಟ್  ಎಲ್ಲಿಯೂ ಲಭ್ಯ ಇರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ರಕ್ತದ ಅವಶ್ಯಕತೆಯ ಬಗ್ಗೆ ಪ್ರಸ್ತಾಪಿಸಿದ ಸಂದರ್ಭದಲ್ಲಿ ಕೊಪ್ಪಳದಲ್ಲಿ ಗ್ಯಾರೇಜ್ ನಲ್ಲಿ‌ ಕೆಲಸ ಮಾಡುವ ಯುವಕ ಮರ್ದಾನ್ ಗಮನಿಸಿ ಸ್ವಯಂ‌ಪ್ರೇರಿತರಾಗಿ ಜಿಲ್ಲಾಸ್ಪತ್ರೆಗೆ ಆಗಮಿಸಿ ರಕ್ತದಾನ ಮಾಡಿದ್ದಾನೆ. ಎಬಿ ನೆಗೆಟಿವ್ ರಕ್ತ ಅಪರೂಪ ಇಂತಹ ಸಂದಿಗ್ದ ಸ್ಥಿತಿಯಲ್ಲಿ ಯುವಕ‌ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾನೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next