ರಾಂಚಿ: “ಎಬಿ ಡಿವಿಲಯರ್ಸ್ ಅವರು ನನ್ನ ವೃತ್ತಿಜೀವನದಲ್ಲಿ ಭಾರಿ ಪ್ರಭಾವ ಬೀರಿದ್ದಾರೆ. ನಾನು ಯಾವಾಗಲೂ ಅವರ ಅಭಿಯಾನಿಯಾಗಿದ್ದೇನೆ” ಎಂದು ಹರ್ಷಲ್ ಪಟೇಲ್ ಹೇಳಿದರು.
ಭಾರತ ಟಿ20 ತಂಡಕ್ಕೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಹರ್ಷಲ್ ಪಟೇಲ್ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
” ಐಪಿಎಲ್‌ನ ಯುಎಇ ಲೆಗ್ ಮೊದಲು ನಾನು ನನ್ನ ದೊಡ್ಡ ಓವರ್‌ಗಳನ್ನು ಹೇಗೆ ಕಡಿಮೆ ಮಾಡಬಹುದು ಎಂದು ನಾನು ಅವರನ್ನು ಕೇಳಿದೆ. ನಾನು ಐಪಿಎಲ್‌ನಲ್ಲಿ ಒಂದು ಓವರ್‌ನಲ್ಲಿ 30 ರನ್‌ಗಳನ್ನು ಸಹ ಬಿಟ್ಟುಕೊಟ್ಟಿದ್ದೇನೆ. ಅದಕ್ಕೆ ಅವರು ನನ್ನ ಉತ್ತಮ ಎಸೆತಗಳಲ್ಲಿ ಬ್ಯಾಟ್ಸ್‌ಮನ್ ಹೊಡೆದಾಗ ನನ್ನ ತಂತ್ರಗಳನ್ನು ಬದಲಾಯಿಸಬಾರದು ಎಂದು ನನಗೆ ಹೇಳಿದರು” ಹರ್ಷಲ್ ಹೇಳಿದರು.
ಇದನ್ನೂ ಓದಿ:ಅಶ್ಲೀಲ ಸಂದೇಶ ಪ್ರಕರಣ: ಆಸೀಸ್ ಟೆಸ್ಟ್ ನಾಯಕತ್ವ ಬಿಟ್ಟ ಪೇನ್
ಎಬಿ ಡಿವಿಲಿಯರ್ಸ್ ಅವರು ಐಪಿಎಲ್ ಸೇರಿ ಎಲ್ಲಾ ಮಾದರಿ ಕ್ರಿಕೆಟ್ ಗೆ ಶುಕ್ರವಾರ ವಿದಾಯ ಘೋಷಿಸಿದ್ದಾರೆ. ಅವರು 2011ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುತ್ತಿದ್ದಾರೆ.
ಹರ್ಷಲ್ ಪಟೇಲ್ ಅವರು ಆರ್ ಸಿಬಿ ತಂಡದ ಪರವಾಗಿ ಐಪಿಎಲ್ ನಲ್ಲಿ ಆಡಿದ್ದರು. ಈ ಬಾರಿ ಅತೀ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದರು. ನ್ಯೂಜಿಲ್ಯಾಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ಅವರು ಎರಡು ವಿಕೆಟ್ ಕಿತ್ತರು.