Advertisement

“ಆರುಷಿ ಕೇಸ್‌ನಲ್ಲಿ ಜಡ್ಜ್ “ಚಿತ್ರ ನಿರ್ದೇಶಕ’ರಂತೆ ವರ್ತಿಸಿದರು’

11:42 AM Oct 14, 2017 | Team Udayavani |

ಅಲಹಾಬಾದ್‌: ಆರುಷಿ ತಲ್ವಾರ್‌ ಹತ್ಯೆ ಪ್ರಕರಣದ ತೀರ್ಪು ನೀಡುವಾಗ ವಿಚಾರಣಾ ನ್ಯಾಯಾಲಯದ ಜಡ್ಜ್ ಒಂದು ಕಾಲ್ಪನಿಕ ಸನ್ನಿವೇಶವನ್ನು ಸೃಷ್ಟಿಸುವಂಥ ಸಿನಿಮಾ ನಿರ್ದೇಶಕರಂತೆ ವರ್ತಿಸಿದ್ದಾರೆ. ದಾರಿ ತಪ್ಪಿಸುವ ದೃಷ್ಟಾಂತಗಳನ್ನು ಬಳಸಿಕೊಳ್ಳುವ ಮೂಲಕ ಕಾನೂನಿನ ಮೂಲ ಮೌಲ್ಯವನ್ನೇ ಗಾಳಿಗೆ ತೂರಿದ್ದಾರೆ.’ ಇದು ರಾಜೇಶ್‌ ಹಾಗೂ ನೂಪುರ್‌ ತಲ್ವಾರ್‌ ನಿರ್ದೋಷಿಗಳು ಎಂದು ತೀರ್ಪು ನೀಡುವ ವೇಳೆ ಅಲಹಾಬಾದ್‌ ಹೈಕೋರ್ಟ್‌ನ ನ್ಯಾ. ಬಿ.ಕೆ.ನಾರಾಯಣ ಹಾಗೂ ಎ.ಕೆ.ಮಿಶ್ರಾ ಅವರು ಆಡಿರುವ ಮಾತುಗಳು.

Advertisement

ತಲ್ವಾರ್‌ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯವು ಮಾಡಿರುವ ಲೋಪಗಳು, ಇಟ್ಟ ತಪ್ಪು ಹೆಜ್ಜೆಗಳನ್ನು ಒಂದೊಂದಾಗಿಯೇ ಹೈಕೋರ್ಟ್‌ ಬಿಡಿಸಿಟ್ಟಿತು. “ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ವೇಳೆ ನ್ಯಾಯಸಮ್ಮತ ಹಾಗೂ
ಪಾರದರ್ಶಕವಾಗಿರಬೇಕು. ಅವರು ಚಿತ್ರ ನಿರ್ದೇಶಕರಂತೆ ವರ್ತಿಸಬಾರದು. ಇಲ್ಲದಿದ್ದರೆ ಎಲ್ಲ ಪ್ರಕ್ರಿಯೆಯೂ ಕಾನೂನಿನ ಅಪಹಾಸ್ಯದಂತಾಗುತ್ತದೆ’ ಎಂದು ಪೀಠ ಹೇಳಿದೆ. ಇದೇ ವೇಳೆ, ಆದೇಶದ ಪ್ರತಿ ಜೈಲು ಅಧಿಕಾರಿಗಳ ಕೈಸೇರದ ಕಾರಣ, ಸೋಮವಾರ ತಲ್ವಾರ್‌ ದಂಪತಿ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next