Advertisement
ಅಂತೆಯೇ ಆರುಷಿ ಮತ್ತು ಮನೆ ಕೆಲಸದಾಳು ಹೇಮರಾಜ್ ಅವಳಿ ಕೊಲೆ ಪ್ರಕರಣದಲ್ಲಿ ರಾಜೇಶ್ ಮತ್ತು ನೂಪುರ್ ತಲ್ವಾರ್ ದಂಪತಿಯನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ.
Related Articles
Advertisement
ಒಂಬತ್ತು ವರ್ಷಗಳ ಹಿಂದೆ ನಡೆದಿದ್ದ 14 ವರ್ಷ ಪ್ರಾಯದ ಆರುಷಿ ತಲ್ವಾರ್ ಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ ಇಂದು ಗುರುವಾರ ತೀರ್ಪು ನೀಡಿತು. 2008ರಲ್ಲಿ ನೋಯ್ಡಾದಲ್ಲಿನ ತನ್ನ ನಿವಾಸದಲ್ಲಿ ಆರುಷಿ ಸತ್ತು ಬಿದ್ದಿರುವುದು ಪತ್ತೆಯಾಗಿತ್ತು.
ಆರುಷಿ ಮತ್ತು ಮನೆ ಕೆಲಸದಾಳು ಹೇಮರಾಜ್‌ನನ್ನು ಹತ್ಯೆಗೈದ ಅಪರಾಧಕ್ಕಾಗಿ ಉತ್ತರ ಪ್ರದೇಶ ನ್ಯಾಯಾಲಯ ಆರುಷಿಯ ಹೆತ್ತವರಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.
ಗಾಜಿಯಾಬಾದ್‌ನ ಸಿಬಿಐ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯ ತೀರ್ಪನ್ನು ಪ್ರಶ್ನಿಸಿ ಆರುಷಿ ಹೆತ್ತವರು ಅಲಹಾಬಾದ್ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ಸೆಪ್ಟಂಬರ್‌ನಲ್ಲಿ ಜಸ್ಟಿಸ್ ಬಿ ಕೆ ನಾರಾಯಣ ಮತ್ತು ಜಸ್ಟಿಸ್ ಎ ಕೆ ಮಿಶ್ರಾ ಅವರನ್ನು ಒಳಗೊಂಡ ಪೀಠವು ಈ ಪ್ರಕರಣದ ಮೇಲಿನ ತೀರ್ಪನ್ನು ಕಾದಿರಿಸಿತ್ತು.