ಲಕ್ನೋ: ಇದೇ 22ರಂದು ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಲ ಲ್ಲಾನ ಪ್ರಾಣಪ್ರತಿಷ್ಠೆ ನಡೆದ ಬಳಿಕವೇ ದೇಶಾ ದ್ಯಂತ ರಾಮನಿಗೆ ಭಕ್ತರು ಆರತಿ ಬೆಳಗಲಿ ಎಂದು ರಾಮ ಮಂದಿರ ಟ್ರಸ್ಟ್ ಕರೆ ನೀಡಿದೆ.
ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಈ ಕುರಿತು ಮಾಹಿತಿ ನೀಡಿದ್ದು, ಜ.22ರ ಮಧ್ಯಾಹ್ನ 12.20ಕ್ಕೆ ಪ್ರಾಣಪ್ರತಿಷ್ಠೆ ಜರಗಲಿದೆ. ಅನಂತರ ಭಕ್ತರು ಎಲ್ಲೆಡೆ ರಾಮನಿಗೆ ಆರತಿ ಬೆಳಗಬಹುದು, ರಾಮನ ಹೆಸರಿನಲ್ಲಿ ಪ್ರಸಾದ ವಿನಿಯೋಗ ಮಾಡುವ ಕೈಂಕರ್ಯ ಗಳನ್ನು ನಡೆಸ ಬಹುದೆಂದು ತಿಳಿಸಿದ್ದಾರೆ.
ಜತೆಗೆ ಸಂಜೆ ಸೂರ್ಯಾಸ್ತದ ಅನಂತರದಲ್ಲಿ ರಾಮಜ್ಯೋತಿ ಯನ್ನು ಬೆಳಗಿಸಿ ಎಂದು ರಾಯ್ ಕರೆ ನೀಡಿದ್ದಾರೆ.
ಅಯೋಧ್ಯೆಗೆ ಪಾದ ಯಾತ್ರೆ
ಒಡಿಶಾದ ಗಂಜಾಮ್ ಜಿಲ್ಲೆಯ ಚಂದಾ ಪುರ ನಿವಾಸಿಗಳಾದ ಕುರೇಶ್ ಬೆಹ್ರಾ ಹಾಗೂ ಸೋನು ಬಿಸೋಯ್ ಎಂಬ ಯುವಕರು ತಮ್ಮ ಊರಿನಿಂದ 1,400 ಕಿ.ಮೀ. ದೂರದ ರಾಮಮಂದಿರಕ್ಕೆ ರವಿ ವಾರ ಪಾದಯಾತ್ರೆ ಆರಂಭಿಸಿದ್ದಾರೆ. ದಿನಕ್ಕೆ 30ರಿಂದ 35 ಕಿ.ಮೀ. ನಡೆದು, ಒಂದು ತಿಂಗಳ ಒಳಗಾಗಿ ಅಯೋಧ್ಯೆ ತಲುಪುವ ಗುರಿ ಹೊಂದಿದ್ದಾರೆ.