Advertisement

ಶೀರೂರು ಸ್ವಾಮೀಜಿ ಆರಾಧನೆ, ವೃಂದಾವನ ಪ್ರತಿಷ್ಠೆ

08:49 AM Aug 08, 2019 | Team Udayavani |

ಉಡುಪಿ: ಶೀರೂರು ಮೂಲಮಠದಲ್ಲಿ ಬುಧವಾರ ಕಳೆದ ವರ್ಷ ಅಸ್ತಂಗತರಾದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪ್ರಥಮ ಆರಾಧನೋತ್ಸವ ಮತ್ತು ವೃಂದಾವನ ಪ್ರತಿಷ್ಠಾ ಕಾರ್ಯಕ್ರಮ ಜರುಗಿತು.

Advertisement

ವೈದಿಕರು ವಿರಜಾ ಹೋಮ, ಪವಮಾನ ಹೋಮವನ್ನು ಮತ್ತು ಶೀರೂರು ಮಠದ ಪ್ರತಿಮೆಗಳಿಗೆ ವಿಶೇಷ ಅಭಿಷೇಕಗಳನ್ನು ನಡೆಸಿದರು. ಹೋಮದ ಸಂದರ್ಭ ಪೂಜಿಸಲಾದ ಕಲಶದ ತೀರ್ಥವನ್ನು ವೃಂದಾವನಕ್ಕೆ ಹಾಕಿ ಪೂಜೆ ಸಲ್ಲಿಸಲಾಯಿತು. ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ವೇದಮೂರ್ತಿ ಪಾಡಿಗಾರು ಶ್ರೀನಿವಾಸ ತಂತ್ರಿಗಳು ವಹಿಸಿದ್ದರು.


ಬಂದ ಭಕ್ತರಿಗೆ ಔಷಧೀಯ ಸಸ್ಯಗಳನ್ನು ವಿತರಿಸಲಾಯಿತು. ನವಗ್ರಹ ವನ ಮತ್ತು ಶ್ರೀಗಂಧ ವನಗಳನ್ನು ನಿರ್ಮಿಸಲು ಚಾಲನೆ ನೀಡಲಾಯಿತು. ಶ್ರೀಕೃಷ್ಣಮಠದಲ್ಲಿಯೂ ಆರಾಧನೆ ಪ್ರಯುಕ್ತ ರಾಜಾಂಗಣದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

2018ರ ಜು. 19ರಂದು ಸ್ವಾಮೀಜಿ ನಿಧನ ಹೊಂದಿದ್ದರು. ತಿಥಿ ಪ್ರಕಾರ ಬುಧವಾರ ಆರಾಧನೋತ್ಸವವನ್ನು ನಡೆಸಲಾಯಿತು. ಉಡುಪಿ ಮಠಗಳ ಸಂಪ್ರದಾಯದಂತೆ ಸ್ವಾಮೀಜಿ ನಿಧನರಾದಾಗ ಸಮಾಧಿ ಮಾಡಿ ಮೊದಲ ವರ್ಷದ ಆರಾಧನೋತ್ಸವದ ವೇಳೆ ವೃಂದಾವನ ನಿರ್ಮಿಸುತ್ತಾರೆ. ಅದರಂತೆ ಸುಮಾರು ಮೂರು ಅಡಿ ಎತ್ತರದ ನೂತನ ವೃಂದಾವನವನ್ನು ಸುಮಾರು ನಾಲ್ಕು ತಿಂಗಳ ಪರಿಶ್ರಮದಲ್ಲಿ ನಿರ್ಮಿಸಲಾಗಿದೆ. ಮಂಗಳವಾರ ರಾತ್ರಿ ವೃಂದಾವನಕ್ಕೆ ವಾಸ್ತುಪೂಜೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next