ಅಮೃತ್ ಸರ್: 2022ರ ಪಂಜಾಬ್ ವಿಧಾನಸಭಾ ಚುನಾವಣೆ ಮೇಲೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ದೃಷ್ಟಿ ನೆಟ್ಟಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿಖ್ ಸಮುದಾಯದ ವ್ಯಕ್ತಿ ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲಿದ್ದಾರೆ ಎಂದು ಕೇಜ್ರಿವಾಲ್ ಸೋಮವಾರ(ಜೂನ್ 21) ಘೋಷಿಸಿದ್ದಾರೆ.
ಇದನ್ನೂ ಓದಿ:ಆನ್ ಲೈನ್ ತರಗತಿಗೆ ನೆಟ್ ವರ್ಕ್ ಸಮಸ್ಯೆ:ಪರಿಹಾರ ಕಂಡುಕೊಳ್ಳಲು ಸಿಎಂಗೆ ಸುರೇಶ್ ಕುಮಾರ್ ಮನವಿ
ಸಿಖ್ ಸಮುದಾಯದ ವ್ಯಕ್ತಿ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ. ಇದು ಸಿಖ್ ಸಮುದಾಯದ ಹಕ್ಕು. ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ನಂತರ ಚರ್ಚಿಸಲಾಗುವುದು, ಆದರೆ ಅದು ಯಾರೇ ಆಗಿರಲಿ ಅವರು ಸಿಖ್ ಸಮುದಾಯದ ವ್ಯಕ್ತಿಯೇ ಆಗಿರುತ್ತಾರೆ. ಆ ವ್ಯಕ್ತಿಯ ಬಗ್ಗೆ ಪಂಜಾಬ್ ಹೆಮ್ಮೆ ಪಡಲಿದೆ ಎಂದು ಹೇಳಿದರು.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಇನ್ನಷ್ಟು ಬಲ ನೀಡುವ ನಿಟ್ಟಿನಲ್ಲಿ ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಇಂದು ಕೇಜ್ರಿವಾಲ್ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಕುನ್ವರ್ ವಿಜಯ್ ಪ್ರತಾಪ್ ರಾಜಕಾರಣಿ ಅಲ್ಲ, ಅವರನ್ನು ಆಮ್ ಆದ್ಮಿ ಕಾ ಪೊಲೀಸ್ ವಾಲಾ ಎಂದು ಕರೆಯುತ್ತೇನೆ. ನಾವೆಲ್ಲರೂ ರಾಷ್ಟ್ರ ಸೇವೆ ಮಾಡಲು ಇಲ್ಲಿದ್ದೇವೆ. ಈ ಮನೋಭಾವದಿಂದ ಅವರು ಇಂದು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಮಾಜಿ ಐಪಿಎಸ್ ಅಧಿಕಾರಿ ವಿಜಯ್ ಪ್ರತಾಪ್ ಸೇರ್ಪಡೆ ನಂತರ ಕೇಜ್ರಿವಾಲ್ ಮಾತನಾಡುತ್ತ ತಿಳಿಸಿದ್ದಾರೆ.