Advertisement

ದಿಲ್ಲಿಯಲ್ಲಿ ಆಪ್‌ –ಅಧಿಕಾರಶಾಹಿ ನಡುವಿನ ಸಮರ ತಾರಕಕ್ಕೆ

03:32 PM Feb 20, 2018 | udayavani editorial |

ಹೊಸದಿಲ್ಲಿ : ದಿಲ್ಲಿ ಆಮ್‌ ಆದ್ಮಿ ಪಕ್ಷದ ಶಾಸಕರು ಮತ್ತು ಅಧಿಕಾರಶಾಹಿ ನಡುವಿನ ಸಮರ ಈಗ ತಾರಕಕ್ಕೇರಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ನಿವಾಸದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಅವರ ಮೇಲೆ ಶಾಸಕರು ಹಲ್ಲೆ ಮಾಡಿದರೆಂಬ ಆರೋಪ ಈಗ ಬೆಂಕಿಯಂತೆ ಭುಗಿಲೆದ್ದಿದೆ. 

Advertisement

ತಾಜಾ ವರದಿಗಳ ಪ್ರಕಾರ ಆಪ್‌ ನಾಯಕ ಆಶಿಶ್‌ ಖೇತಾನ್‌ ಅವರು ದಿಲ್ಲಿ ಮಂತ್ರಾಲಯದಲ್ಲಿ  ಮಂಗಳವಾರ ತನ್ನ ಮೇಲೆ ಹಲ್ಲೆ ನಡೆಯಿತೆಂದು ಹೇಳಿದ್ದಾರೆ.

ಆಪ್‌ ನಾಯಕ ಖೇತಾನ್‌ ಈ ಜಗಳದ ಪರಾಕಾಷ್ಠೆಯಲ್ಲಿ ದಿಲ್ಲಿ ಪೊಲೀಸ್‌ ಪಿಸಿಆರ್‌ ಗೆ ಫೋನ್‌ ಮಾಡಿದ್ದು ಪೊಲೀಸರು ತತ್‌ಕ್ಷಣವೇ ದಿಲ್ಲಿ ಮಂತ್ರಾಲಯಕ್ಕೆ ಧಾವಿಸಿ ಬಂದಿದ್ದಾರೆ. 

ದಿಲ್ಲಿ ಸರಕಾರದ ಅಧಿಕಾರಶಾಹಿ, ಈ ಅಹಿತಕರ ಪ್ರಕರಣಗಳನ್ನು ಆಪ್‌ ಸರಕಾರ ಇತ್ಯರ್ಥ ಪಡಿಸುವ ವರೆಗೆ ತಾವು ಕಚೇರಿ ಕೆಲಸಗಳನ್ನು ನಿರ್ವಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. 

ಐಎಎಸ್‌ ಸದಸ್ಯರು ಈ ಬಗ್ಗೆ  ಸಭೆಯೊಂದನ್ನು ನಡೆಸಿ ಆ ಬಳಿಕ ದಿಲ್ಲಿ ಲೆ. ಗವರ್ನರ್‌ ಅನಿಲ್‌ ಬೈಜಾಲ್‌ ಅವರನ್ನು ಭೇಟಿಯಾಗಿದ್ದಾರೆ.

Advertisement

ಎಲ್‌ಜಿ ಜತೆಗಿನ ಸಭೆಯ ಬಳಿಕ ಐಎಎಸ್‌ ಸಂಘದ ಕಾರ್ಯದರ್ಶಿ ಮನೀಷ್‌ ಸಕ್ಸೇನಾ ಅವರು ಮಾಧ್ಯಮದವರೊಂದಿಗೆ ಮಾತನಾಡಿ “ಈ ರೀತಿಯ ಘಟನೆಗಳು ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದು ಅನೇಕ ಅಧಿಕಾರಿಗಳನ್ನು ಅವಮಾನಿಸಲಾಗಿದೆ’ ಎಂದು ಹೇಳಿದ್ದಾರೆ. 

ಲೆ. ಗವರ್ನರ್‌ ಅವರು ಈ ಅಹಿತಕರ ಘಟನೆಗಳಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು; ಇದೊಂದು ಸಾಂವಿಧಾನಿಕ ಬಿಕ್ಕಟ್ಟು ಆಗಿದೆ; ಈ ರೀತಿಯ ಘಟನೆಗಳು ಹಿಂದಿನ ಸರಕಾರಗಳ ಅವಧಿಯಲ್ಲಿ ಅನೇಕ ವರ್ಷಗಳ ಕಾಲ ನಡೆದ ಉದಾಹರಣೆಯೇ ಇಲ್ಲ ಎಂದವರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next