Advertisement

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

03:16 PM Nov 21, 2024 | Team Udayavani |

ನವದೆಹಲಿ: ಆಮ್ ಆದ್ಮಿ ಪಕ್ಷವು 2025ರ ದೆಹಲಿ ವಿಧಾನಸಭಾ ಚುನಾವಣೆಗೆ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ(ನ.21) ಬಿಡುಗಡೆ ಮಾಡಿದೆ.

Advertisement

ರಾಜಕೀಯ ವ್ಯವಹಾರಗಳ ಸಮಿತಿಯ (ಪಿಎಸಿ) ಸಭೆಯನ್ನು ಗುರುವಾರ ಕರೆದಿದ್ದು ಈ ಸಭೆಯಲ್ಲಿ ನಡೆಸಿದ ಚರ್ಚೆಯ ಬಳಿಕ ಹನ್ನೊಂದು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.

ಆಮ್ ಆದ್ಮಿ ಪಕ್ಷವು ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡವರ ಹೆಸರುಗಳಿಗೆ ಮೊದಲ ಆದ್ಯತೆ ನೀಡಿದ್ದು ಅದರಂತೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿಯ ಮಾಜಿ ನಾಯಕರಾದ ಬ್ರಹ್ಮ್ ಸಿಂಗ್ ತನ್ವಾರ್, ಅನಿಲ್ ಝಾ ಮತ್ತು ಬಿಬಿ ತ್ಯಾಗಿ ಹಾಗೂ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಕಾಂಗ್ರೆಸ್‌ನ ಮಾಜಿ ನಾಯಕರಾದ ಚೌಧರಿ ಜುಬೇರ್ ಅಹ್ಮದ್, ವೀರ್ ದಿಂಗನ್ ಮತ್ತು ಸುಮೇಶ್ ಶೋಕೀನ್ ಹೆಸರು ಸೇರ್ಪಡೆಗೊಂಡಿದೆ.

ಆಮ್ ಆದ್ಮಿ ಪಕ್ಷ ಬಿಡುಗಡೆಗೊಳಿಸಿದ ಮೊದಲ ಪಟ್ಟಿಯಲ್ಲಿ ಯಾರಿಗೆ ಯಾವ ಕ್ಷೇತ್ರದಲ್ಲಿ ಸ್ಥಾನ ಲಭಿಸಿದೆ ಎಂಬುದನ್ನು ನೋಡುವುದಾದರೆ ಬ್ರಹ್ಮ್ ಸಿಂಗ್ ತನ್ವಾರ್ (ಛತ್ತರ್ಪುರ್) ,ಅನಿಲ್ ಝಾ (ಕಿರಾರಿ), ದೀಪಕ್ ಸಿಂಘ್ಲಾ (ವಿಶ್ವಾಸ್ ನಗರ), ಸರಿತಾ ಸಿಂಗ್ (ರೋಹ್ತಾಸ್ ನಗರ), ಬಿಬಿ ತ್ಯಾಗಿ (ಲಕ್ಷ್ಮಿ ನಗರ), ರಾಮ್ ಸಿಂಗ್ ನೇತಾಜಿ (ಬದರ್ಪುರ್), ಚೌಧರಿ ಜುಬೇರ್ ಅಹ್ಮದ್ (ಸೀಲಂಪುರ್), ವೀರ್ ಸಿಂಗ್ ದಿಂಗನ್ (ಸೀಮಾಪುರಿ), ಗೌರವ್ ಶರ್ಮಾ (ಘೋಂಡಾ), ಮನೋಜ್ ತ್ಯಾಗಿ (ಕರವಾಲ್ ನಗರ) ಹಾಗೂ ಸುಮೇಶ್ ಶೋಕೀನ್ (ಮಟಿಯಾಲ)

Advertisement

ಆಮ್ ಆದ್ಮಿ ಪಕ್ಷದ ಪ್ರಮುಖ ಸದಸ್ಯ ಕೈಲಾಶ್ ಗಹ್ಲೋಟ್ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಚುನಾವಣೆಯ ಸಿದ್ದತೆಯನ್ನು ಮಾಡಿಕೊಂಡಿದ್ದು ಅದರಂತೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next