Advertisement

ಎಎಪಿ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ: ಬಾಟಿ

07:54 PM Mar 26, 2021 | Girisha |

ಸಿಂದಗಿ : ಸಿಂದಗಿ ಉಪ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿ ವತಿಯಿಂದ ಅಭ್ಯರ್ಥಿ ಕಣಕ್ಕಿಳಿಸಲು ಕಾರ್ಯಕರ್ತರೊಂದಿಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಉಸ್ತವಾರಿ ರೋಮಿಯೊ ಬಾಟಿ ಹೇಳಿದರು.

Advertisement

ಪಟ್ಟಣದ ಆಮ್‌ ಆದ್ಮಿ ಪಾರ್ಟಿ ತಾಲೂಕು ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬರುವ ತಾಪಂ-ಜಿಪಂ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಆಮ್‌ ಆದ್ಮಿ ಪಾರ್ಟಿ ಜಾತ್ಯತೀತ ಹಾಗೂ ಪ್ರಾಮಾಣಿಕ ಪಕ್ಷ. ಅಭಿವೃದ್ಧಿ ಮಂತ್ರದೊಂದಿಗೆ ದೆಹಲಿಯಲ್ಲಿ ಪಕ್ಷದ ಆಡಳಿತ ನಡೆಸುತ್ತಿದ್ದು, 2.37 ಕೋಟಿ ಜನರಿಗೆ ದಿನಕ್ಕೆ ಒಂದು ಕುಟುಂಬಕ್ಕೆ ಎರಡು ಸಾವಿರ ಲೀಟರ್‌ ನೀರು ಉಚಿತವಾಗಿ ನೀಡಲಾಗುತ್ತಿದೆ. ಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕೆ ಆಗಮಿಸಲು ಸರ್ವರಿಗೂ ಸ್ವಾಗತ. ಆದ್ದರಿಂದ ಪಕ್ಷದ ಹೆಲ್ಪ್ಲೈನ್‌ 7669400410 ನಂಬರ್‌ ಬಿಡುಗಡೆ ಮಾಡಲಾಗಿದೆ.

ಈ ನಂಬರ್‌ ನಿಂದ ಸಹಾಯ ಪಡೆಯಬಹುದು ಎಂದರು. ಇದೇ ಸಂದರ್ಭದಲ್ಲಿ ಆಮ್‌ ಆದ್ಮಿ ಪಾರ್ಟಿಯ ಹೆಲ್ಪ್ಲೈನ್‌ 7669400410 ನಂಬರ್‌ ಅನಾವರಣಗೊಳಿಸಲಾಯಿತು. ರಾಜ್ಯ ಸಂಘಟನಾ ಕಾರ್ಯದರ್ಶಿ ದರ್ಶನ್‌ ಜೈನ್‌, ವಿ. ಗೋಪಾಲ ಮಾತನಾಡಿದರು. ಆಮ್‌ ಆದ್ಮಿ ಪಾರ್ಟಿ ಜಿಲ್ಲಾಧಕ್ಷ ರೋಹನ್‌ ಐನಾಪುರ ಮಾತನಾಡಿ, ಆಮ್‌ ಆದ್ಮಿ ಪಾರ್ಟಿ ತತ್ವ-ಸಿದ್ಧಾಂತಗಳು, ಅಭಿವೃದ್ಧಿ ಕಾರ್ಯ ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ. ರಾಜ್ಯಾದ್ಯಂತ ಸಂಚರಿಸಿ ಪಕ್ಷಕ್ಕೆ ಶಕ್ತಿ ತುಂಬಲಾಗುತ್ತಿದೆ.

ಪ್ರತಿಯೊಬ್ಬರಿಗೂ, ಪ್ರತಿ ಪಕ್ಷದವರಿಗೂ ಪಕ್ಷ ಸೇರ್ಪಡೆಗೆ ಸ್ವಾಗತವಿದೆ ಎಂದರು. ಈ ವೇಳೆ ಆಮ್‌ ಆದ್ಮಿ ಪಾರ್ಟಿ ತಾಲೂಕು ಅಧ್ಯಕ್ಷ ಶಬ್ಬೀರಪಟೇಲ ಬಿರಾದಾರ, ತಾಲೂಕು ವಕ್ತಾರ ಜಗದೀಶ ಕಲಬುರ್ಗಿ, ತಾಲೂಕು ಕಾರ್ಯಕಾರಿಣಿ ಸದಸ್ಯ ಅಶೋಕ ಕೊರಳ್ಳಿ, ಸಿದ್ದರಾಮ ವರಕೇರಿ, ಹಣಮಂತ್ರಾಯಗೌಡ ಬಿರಾದಾರ ಬಂದಾಳ, ಸದಾನಂದ ಧರಿಕರ, ಪರಶುರಾಮ ಉಣ್ಣಿಜಾಡಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next