ಮುಂಬಯಿ : ಮಿಸ್ಟರ್ ಫರ್ಫೆಕ್ಷನಿಷ್ಟ್ ಎನಿಸಿಕೊಂಡಿರುವ ಬಾಲಿವುಡ್ ದಿಗ್ಗಜ ಅಮೀರ್ ಖಾನ್ ಅವರು ಪುತ್ರಿ ಇರಾಳೊಂದಿಗಿನ ಚಿತ್ರವೊಂದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿರುವುದು ಭಾರೀ ಟ್ರೋಲ್ ಆಗಿದೆ.
ಮಗಳಾದರೇನು, ರಮ್ಜಾನ್ ತಿಂಗಳಿನಲ್ಲಿ ಯಾರೂ ಈ ರೀತಿಯ ಭಂಗಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹಲವರು ಬರೆದಿದ್ದಾರೆ. ಹಲವರು ತೀರಾ ಅಸಹ್ಯಕಾರಿಯಾಗಿಯೂ ಪ್ರತಿಕ್ರಿಯೆಗಳನ್ನು ಬರೆದಿದ್ದಾರೆ. ಸಾವಿರಾರು ಮಂದಿ ಟೀಕೆ ಮಾಡಿದ್ದು, ಫೋಟೋ ವೈರಲ್ ಆಗಿದೆ.
ಹಲವರು ಅಮೀರ್ ಪರ ವಹಿಸಿ ಬರೆದಿದ್ದು ಮಗಳೆನ್ನುವ ಭಾವವೇ ಮುಖ್ಯ , ಭಂಗಿಯಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಅಮೀರ್ ಖಾನ್ ಅವರು ಕುಟುಂಬ ಸದಸ್ಯರೊಂದಿಗೆ ಗುರುವಾರ ತಮಿಳುನಾಡಿನ ಕುನೂರ್‌ನಲ್ಲಿ ಸಂಬಂಧಿ ಮನ್ಸೂರ್ ಖಾನ್ ಅವರ 60 ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ ಪುತ್ರಿ ತಮ್ಮ ಮೈಮೇಲೆ ಕುಳಿತಿರುವ ಚಿತ್ರ ಸಹಿತ ಹಲವು ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದರು.
ಇರಾ ಮತ್ತು ಪುತ್ರ ಜುನೈದ್ ಅಮೀರ್ ಅವರ ವಿಚ್ಛೇಧಿತ ಪತ್ನಿ ರೀನಾ ದತ್ತಾ ಅವರ ಮಕ್ಕಳಾಗಿದ್ದರೆ. 2005 ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾಗಿರುವ ಅಮೀರ್ 2011 ರಲ್ಲಿ ಅಜಾದ್ ಎನ್ನುವ ಪುತ್ರನನ್ನು ಪಡೆದಿದ್ದಾರೆ.