Advertisement

ʼದಂಗಲ್‌ʼ ನಟಿಯೊಂದಿಗೆ ಪಿಕಲ್‌ಬಾಲ್ ಆಡಿದ ಆಮಿರ್‌: ʼLove birdsʼ ಎಂದ ನೆಟ್ಟಿಗರು

11:19 AM May 24, 2023 | Team Udayavani |

ಮುಂಬಯಿ: ಮಿಸ್ಟರ್ ಪರ್ಫೆಕ್ಟ್ ಆಮಿರ್‌ ಖಾನ್‌ ʼಲಾಲ್‌ ಸಿಂಗ್‌ ಚಡ್ಡಾʼ ಬಳಿಕ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ. ʼದಂಗಲ್‌ʼ ಸಿನಿಮಾದಲ್ಲಿ ನಟಿಸಿದ್ದ ಫಾತಿಮಾ ಸನಾ ಶೇಕ್‌ ಮತ್ತೆ ಆಮಿರ್‌ ಅವರೊಂದಿಗೆ ಕಾಣಿಸಿಕೊಂಡಿದ್ದು ನೆಟ್ಟಿಗರ ಭಿನ್ನ ಚರ್ಚೆಗೆ ಕಾರಣವಾಗಿದೆ.

Advertisement

ಆಮಿರ್‌ ಪತ್ನಿ ಕಿರಣ್ ರಾವ್ ಗೆ ವಿಚ್ಛೇದನ ಕೊಟ್ಟು ದೂರವಾಗಿರುವುದು ಗೊತ್ತೇ ಇದೆ. ದೂರವಾಗಿದ್ದರು ಇಬ್ಬರು ಈಗ ಸ್ನೇಹಿತರಾಗಿದ್ದಾರೆ.

ನಿತೇಶ್ ತಿವಾರಿ ಅವರ ʼದಂಗಲ್‌ʼ ಸಿನಿಮಾದ ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟ ಫಾತಿಮಾ ಸನಾ ಶೇಕ್‌ ಆ ಬಳಿಕ ಅನೇಕ ಸಿನಿಮಾದಲ್ಲಿ ನಟಿಸಿ ಬಿಟೌನ್‌ ಬೆಡಗಿ ಆಗಿ ಮಿಂಚಿದ್ದಾರೆ. ಆಮಿರ್‌ ಖಾನ್‌ ಅವರ ಮತ್ತೊಂದು ಸಿನಿಮಾ ʼ ಥಗ್ಸ್ ಆಫ್ ಹಿಂದೂಸ್ತಾನ್ʼ ಚಿತ್ರದಲ್ಲೂ ಫಾತಿಮಾ ನಟಿಸಿದ್ದಾರೆ.

ಇದನ್ನೂ ಓದಿ: Television: ಖ್ಯಾತ ನಟಿ ಬಳಿಕ ಮತ್ತೋರ್ವ ನಟ ನಿಧನ; 3 ದಿನದಲ್ಲಿ ಮೂರು ಸಾವು ಕಂಡ ಕಿರುತೆರೆ

ಆಮಿರ್‌ ಹಾಗೂ ಫಾತಿಮಾ ಆಗಾಗ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರ ಬಗ್ಗೆ ಕೆಲ ಗಾಸಿಪ್‌ ಗಳು ಹರಿದಾಡಿತ್ತು. ಇಬ್ಬರು ಡೇಟಿಂಗ್‌ ನಲ್ಲಿದ್ದಾರೆ ಎನ್ನುವ ಬಗ್ಗೆ ಸುದ್ದಿ ಹರಿದಾಡಿತ್ತು.ಇದೀಗ ಫಾತಿಮಾ ಆಮಿರ್‌ ಅವರೊಂದಿಗೆ ಮತ್ತೆ ಕಾಣಿಸಿಕೊಂಡಿದ್ದಾರೆ.

Advertisement

ಆಮಿರ್‌ ಹಾಗೂ ಫಾತಿಮಾ ಜೊತೆಯಾಗಿ ʼ ಪಿಕಲ್‌ಬಾಲ್ʼ ಆಟವನ್ನು ಆಡುತ್ತಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ಇಬ್ಬರ ಆತ್ಮೀಯತೆಯನ್ನು ನೋಡಿ ನೆಟ್ಟಿಗರು ನಾನಾ ರೀತಿ ಕಮೆಂಟ್‌ ಮಾಡಿದ್ದಾರೆ.

ಇವರು ʼಲವ್‌ ಬರ್ಡ್ಸ್‌ʼ ಎಂದು ನೆಟ್ಟಿಗರೊಬ್ಬರು ಕರೆದಿದ್ದಾರೆ. ಮೂರನೇ ಅಮ್ಮ ಬರಲಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next