Advertisement

ರಾಘವ್‌ ಛಡಾ ಹೋದಲ್ಲೆಲ್ಲಾ ಬರುತ್ತಿದೆ ಮದುವೆ ಪ್ರಸ್ತಾಪ!

10:13 AM Feb 07, 2020 | Hari Prasad |

ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ತುಸು ಹಚ್ಚೇ ಉತ್ಸಾಹಿಯಂತೆ ಕಾಣುತ್ತಿರುವ ಎಎಪಿ ಅಭ್ಯರ್ಥಿ ರಾಘವ್‌ ಛಡಾ (31) ಅವರಿಗೆ ಸಾಲು ಸಾಲು ಮದುವೆ ಪ್ರಸ್ತಾವನೆಗಳು ಬರುತ್ತಿವೆ ಎನ್ನಲಾಗಿದೆ. ಕಳೆದ 15 ದಿನಗಳಲ್ಲಿ 12 ಮದುವೆ ಪ್ರಸ್ತಾವನೆಗಳು ಬಂದಿವೆಯಂತೆ.

Advertisement

ರಾಜಿಂದರ್‌ ನಗರ ಕ್ಷೇತ್ರದ ಅಭ್ಯರ್ಥಿ ರಾಘವ್‌ ಎಎಪಿಯ 39 ಸ್ಟಾರ್‌ ಪ್ರಚಾರಕರಲ್ಲಿ ಒಬ್ಬರು. ಅವರಿಗೆ ಸಾಮಾಜಿಕ ಜಾಲತಾಣಗಳಲ್ಲೂ ಮದುವೆ ಪ್ರಸ್ತಾವನೆಗಳು ಬರುತ್ತಲೇ ಇವೆ ಎಂದು ಅವರ ಸಾಮಾಜಿಕ ಜಾಲತಾಣ ತಂಡ ತಿಳಿಸಿದೆ.

ಇತ್ತೀಚೆಗಷ್ಟೇ ಯುವತಿಯೊಬ್ಬಳು ಟ್ವಿಟರ್‌ನಲ್ಲಿ ತನ್ನನ್ನು ಮದುವೆಯಾಗುವಂತೆ ನಿವೇದನೆ ಮಾಡಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಛಡಾ, ಈಗ ಆರ್ಥಿಕತೆ ಕುಸಿದಿರುವ ಕಾರಣ ಮದುವೆಯಾಗಬಾರದು ಎಂದಿದ್ದರು ಎಂದು ಅವರ ತಂಡ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next