Advertisement
ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಬುಧವಾರ ಆಯೋಜಿಸಲಾಗಿದ್ದ ಪ್ರಚಾರಸಭೆಯಲ್ಲಿ ಅವರು ಮಾತನಾಡಿದ್ದಾರೆ. ಎರಡೂ ಪಕ್ಷಗಳು ದೇಶ ಹಿತ ನಿಲುವುಗಳನ್ನು ವಿರೋಧಿಸುವಲ್ಲಿ ಸಮಾನ ಭಾಗೀದಾರಿಕೆ ಹೊಂದಿವೆ ಮತ್ತು ವೀರ ಯೋಧರ ಸಾಹಸ ಕಾರ್ಯಗಳಿಗೆ ಸಾಕ್ಷ್ಯ ಕೇಳಿದವರ ಸಾಲಿಗೆ ಸೇರಿದವರು ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.
Related Articles
Advertisement
ರವಿದಾಸ್ ದೇಗುಲದಲ್ಲಿ ಪೂಜೆಪಠಾಣ್ಕೋಟ್ಗೆ ತೆರಳುವುದಕ್ಕೆ ಮೊದಲು ಪ್ರಧಾನಿಯವರು ನವದೆಹಲಿಯ ಕರೋಲ್‌ಭಾಗ್‌ನಲ್ಲಿರುವ ಶ್ರೀ ಗುರು ರವಿದಾಸ್ ಅವರ ಮಂದಿರಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆಯ ಬಳಿಕ ಪ್ರಧಾನಿಯವರು ಅಲ್ಲಿ ಭಕ್ತಿಗೀತೆಗಳನ್ನು ಹಾಡುತ್ತಿದ್ದ ಮಹಿಳೆಯರ ನಡುವೆ ಕುಳಿತು ಕೆಲ ಕಾಲ ಅವರ ಜತೆಗೆ ವಿಶೇಷ ವಾದ್ಯವನ್ನು ನುಡಿಸಿದ್ದಾರೆ. ಅದರ ಫೋಟೋ ಮತ್ತು ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾನು ಭಯೋತ್ಪಾದಕನಂತೆ….
“ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ನನ್ನನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ. ನಾನು ಆ ರೀತಿ ಹೌದೋ ಅಲ್ಲವೋ ಎನ್ನುವುದು ಫೆ.20ರಂದು ಗೊತ್ತಾಗಲಿದೆ’ ಹೀಗೆಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಪಂಜಾಬ್‌ನ ಮೊಹಾಲಿಯಲ್ಲಿ ಮಾತನಾಡಿದ ಅವರು, ಆಡಳಿತರೂಡ ಕಾಂಗ್ರೆಸ್ ಉದ್ಯಮಿಗಳನ್ನು ಮತ್ತು ಜನಸಾಮಾನ್ಯರನ್ನು ಬೆದರಿಸುವಲ್ಲಿ ನಿರತವಾಗಿದೆ. ಯಾರಿಗೆ ಮತ ನೀಡುತ್ತೀರಿ ಎಂದು ಪತ್ರಕರ್ತರು ಜನಸಾಮಾನ್ಯರಿಗೆ ಪ್ರಶ್ನಿಸಿದರೆ, ಉತ್ತರಿಸಲೂ ಅವರು ಹೆದರುತ್ತಾರೆ ಎಂದರು. ಉದ್ಯಮಿಗಳ ವಿರುದ್ಧ ಕಾಂಗ್ರೆಸ್ ಸರ್ಕಾರ ಸುಳ್ಳು ಮೊಕದ್ದಮೆ ದಾಖಲಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದೂರಿದ್ದಾರೆ. ಮಾಫಿಯಾ ರಾಜ್ ನಿಯಂತ್ರಣ
ಉತ್ತರ ಪ್ರದೇಶದ ಸಿತಾಪುರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ “ರಾಜ್ಯದಲ್ಲಿನ ಯೋಗಿ ಆದಿತ್ಯನಾಥ್ ಸರ್ಕಾರ ಮಾಫಿಯಾ ರಾಜ್ ಮತ್ತು ಗೂಂಡಾ ರಾಜ್ ಅನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಹೇಳಿದ್ದಾರೆ. ಜನರಲ್ಲಿ ಇರುವ ಉತ್ಸಾಹ ನೋಡಿದಾಗ ಅವರ ಬೆಂಬಲ ಬಿಜೆಪಿ ಎನ್ನುವುದು ಸ್ಪಷ್ಟವಾಗಿ ಅರಿವಾಗುತ್ತದೆ. ಮುಂದಿನ ಐದು ಹಂತಗಳಲ್ಲಿ ಅದು ಮುಂದುವರಿಯಲಿದೆ ಎಂಬ ವಿಶ್ವಾಸವಿದೆ ಎಂದರು. ಫೆ.23ರಂದು ನಡೆಯುವ ನಾಲ್ಕನೇ ಹಂತದ ಚುನಾವಣೆಗಾಗಿ ಅವರು ಪ್ರಚಾರ ನಡೆಸಿದ್ದಾರೆ. ಎಸ್‌ಪಿ, ಬಿಜೆಪಿಗೆ ಅವಕಾಶ ಬೇಡ: ಮಾಯಾವತಿ
ಉತ್ತರ ಪ್ರದೇಶದಲ್ಲಿ ಬಿಜೆಪಿ ಅಥವಾ ಸಮಾಜವಾದಿ ಪಕ್ಷಕ್ಕೆ ಮತ ನೀಡಿ, ಅವರನ್ನು ಸರ್ಕಾರ ರಚನೆಗೆ ಅವಕಾಶ ನೀಡಬೇಡಿ. ಅವೆರಡೂ ಪಕ್ಷಗಳು ನಿಗದಿತ ಸಮುದಾಯಗಳ ಅಭಿವೃದ್ಧಿಗಾಗಿ ಮಾತ್ರ ಕೆಲಸ ಮಾಡುತ್ತವೆ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ. ಲಕ್ನೋದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಗೂಂಡಾಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಮಾಫಿಯಾ ರಾಜ್‌ಗಳು ಉತ್ತರ ಪ್ರದೇಶದ ಆಳ್ವಿಕೆಯ ಚುಕ್ಕಾಣಿ ಹಿಡಿದು, ಲೂಟಿಯಲ್ಲಿ ತೊಡಗಿದ್ದರು ಎಂದು ದೂರಿದ್ದಾರೆ ಬಿಎಸ್‌ಪಿ ನಾಯಕಿ. ಅಭಿವೃದ್ಧಿ ಕಾಮಗಾರಿಗಳು ಜಾರಿಯಾಗುತ್ತಿದ್ದರೂ, ನಿಗದಿತ ಸಮುದಾಯಗಳನ್ನು ಗುರಿಯಾಗಿರಿಸಿ ಇರುತ್ತಿತ್ತು ಎಂದು ಟೀಕಿಸಿದ್ದಾರೆ. ಬಿಜೆಪಿ ಧರ್ಮದ ಹೆಸರಿನಲ್ಲಿ ದ್ವೇಷ ಮತ್ತು ಬಿಗುವಿನ ವಾತಾವರಣ ಉಂಟಾಗಲು ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರ ಬಂಡವಾಳಶಾಹಿ ನಿಲುವುಗಳನ್ನು ಜಾರಿಗೊಳಿಸುವುದರಲ್ಲಿ ನಿರತವಾಗಿದೆ. ಜತೆಗೆ ಆರ್‌ಎಸ್‌ಎಸ್‌ನ ಸಂಕುಚಿತ ಮನಃಸ್ಥಿತಿಯ ಬುದ್ಧಿಯ ಅಜೆಂಡಾಗಳನ್ನು ಜಾರಿ ಮಾಡುತ್ತಿದೆ ಎಂದರು. ಲಖೀಂಪುರಖೇರಿ ಗಲಭೆಕೋರರ ಜೈಲಿಗೆ ಕಳಿಸುವೆ: ಅಖಿಲೇಶ್
ಲಖೀಂಪುರಖೇರಿಯಲ್ಲಿ ಗಲಭೆಗೆ ಕಾರಣರಾದವರು ಮತ್ತು ಅವರ ರಕ್ಷಕರನ್ನು ಜೈಲಿಗೆ ಕಳುಹಿಸುವೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಎಚ್ಚರಿಕೆ ನೀಡಿದ್ದಾರೆ. ಉ.ಪ್ರ.ದ ಅರಾರಿಯಾದಲ್ಲಿ ಮಾತನಾಡಿದ ಅವರು, ಹಿಂಸೆಯ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ ಕುಮಾರ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾಗೆ ಜಾಮೀನು ನೀಡಿದ್ದು ಸರಿಯಲ್ಲವೆಂದರು. ಸಮಾಜವಾದಿ ಪಕ್ಷದ ಸರ್ಕಾರ ಬಂದರೆ ಗಲಭೆಕೋರರನ್ನು ಮತ್ತು ಅವರ ಬೆಂಬಲಿಗರನ್ನು ಜೈಲಿಗೆ ಕಳುಹಿಸುವ ವಾಗ್ಧಾನ ಮಾಡಿದ್ದಾರೆ. ತಮ್ಮ ಮೇಲೆ ದಾಖಲಾಗಿರುವ ಕೇಸುಗಳನ್ನು ವಾಪಸ್ ಪಡೆದ ದೇಶದ ಏಕೈಕ ಮುಖ್ಯಮಂತ್ರಿ ಎಂದರೆ ಯೋಗಿ ಆದಿತ್ಯನಾಥ್ ಎಂದು ಕುಟುಕಿದ್ದಾರೆ ಅಖಿಲೇಶ್. ಜತೆಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕೈಗೆತ್ತಿಕೊಳ್ಳುವವರು ತಮ್ಮ ಪಕ್ಷಕ್ಕೆ ಮತ ನೀಡಬೇಕಾದ ಅಗತ್ಯವಿಲ್ಲ ಎಂದೂ ಹೇಳಿದ್ದಾರೆ.