ಮುಂಬೈ: ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರು ಸದ್ಯ ತನ್ನ ಬ್ಯಾಟಿಂಗ್ ನಲ್ಲಿ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ಕಳೆದ ಕೆಲವು ಇನ್ನಿಂಗ್ಸ್ ಗಳಲ್ಲಿ ರಾಹುಲ್ ಬ್ಯಾಟಿನಿಂದ ಉತ್ತಮ ರನ್ ಬಂದಿಲ್ಲ. ಆಸೀಸ್ ವಿರುದ್ಧದ ಬಾರ್ಡರ್- ಗಾವಸ್ಕರ್ ಟ್ರೋಫಿಯ ಮೊದಲೆರಡು ಪಂದ್ಯಗಳಲ್ಲಿ ವಿಫಲರಾದ ಬಳಿಕ ಮುಂದಿನ ಎರಡು ಪಂದ್ಯಗಳಿಗೆ ಜಾಗ ಸಿಗುವುದು ಕಷ್ಟ ಎನ್ನಲಾಗಿದೆ.
ಈ ನಡುವೆ ಭಾರತೀಯ ಅಭಿಮಾನಿಗಳಿಂದ ರಾಹುಲ್ ಬಾರೀ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ ಮಾಜಿ ವೇಗಿ ಕರ್ನಾಟಕದವರೇ ಆದ ವೆಂಕಟೇಶ್ ಪ್ರಸಾದ್ ಅವರು ಪ್ರತಿದಿನ ರಾಹುಲ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಮಾಜಿ ಆಟಗಾರ ಆಕಾಶ್ ಚೋಪ್ರಾ ಅವರು ಈ ಹಿಂದೆ ಪ್ರಸಾದ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡುತ್ತಾ ರಾಹುಲ್ ಗೆ ಬೆಂಬಲ ಸೂಚಿಸಿದ್ದರು. ಈ ಸರಣಿ ಮುಗಿಯುವ ಮೊದಲೇ ರಾಹುಲ್ ಬಗ್ಗೆ ಕಾಮೆಂಟ್ ಮಾಡುವುದು ಬೇಡ ಎಂದೆಲ್ಲಾ ಹೇಳಿದ್ದರು. ಇದೀಗ ಮತ್ತೆ ರಾಹುಲ್ ಬೆಂಬಲಕ್ಕೆ ಚೋಪ್ರಾ ಬಂದಿದ್ದಾರೆ.
ಇದನ್ನೂ ಓದಿ:ಅಂಕಪಟ್ಟಿ ಕೊಡಲು ವಿಳಂಬ…ಪ್ರಾಂಶುಪಾಲರಿಗೆ ಬೆಂಕಿ ಹಚ್ಚಿದ ಹಳೆ ವಿದ್ಯಾರ್ಥಿ; ಆರೋಪಿ ಸೆರೆ
2020-23ರ ನಡುವೆ ಸೆನಾ ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ) ಭಾರತೀಯ ಬ್ಯಾಟರ್ ಗಳ ಸಾಧನೆಯ ಪಟ್ಟಿಯನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ರಾಹುಲ್ ಮೂರನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಕೊಹ್ಲಿ, ಪೂಜಾರಗಿಂತ ಮುಂದಿದ್ದಾರೆ.
Related Articles
“ಆಯ್ಕೆದಾರರು/ಕೋಚ್/ನಾಯಕರು ರಾಹುಲ್ ರನ್ನು ಬೆಂಬಲಿಸುತ್ತಿರುವುದಕ್ಕೆ ಇದೇ ಕಾರಣವಾಗಿರಬಹುದು. ಈ ಅವಧಿಯಲ್ಲಿ ಅವರು ತವರಿನಲ್ಲಿ ಎರಡು ಟೆಸ್ಟ್‌ಗಳನ್ನು ಆಡಿದ್ದಾರೆ (ಸದ್ಯ ಆಸೀಸ್ ಸರಣಿ. ನನಗೆ ಆಯ್ಕೆದಾರ/ಕೋಚ್ ಆಗಿ ಬಿಸಿಸಿಐನಲ್ಲಿ ಹುದ್ದೆಯ ಅಗತ್ಯವಿಲ್ಲ, ನನಗೆ ಯಾವುದೇ ಐಪಿಎಲ್ ತಂಡದಲ್ಲಿ ಯಾವುದೇ ಮಾರ್ಗದರ್ಶಕರ ಅಗತ್ಯವಿಲ್ಲ, ಕೋಚಿಂಗ್ ಹುದ್ದೆಯೂ ಬೇಕಾಗಿಲ್ಲ” ಎಂದು ಚೋಪ್ರಾ ಕುಟುಕಿದ್ದಾರೆ.
ರಾಹುಲ್ ಅವರ ಮಾವ ಆಗಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಚೋಪ್ರಾ ಅವರ ಟ್ವೀಟ್ ಅನ್ನು ಲೈಕ್ ಮಾಡಿದ್ದಾರೆ.