Advertisement

ಆಜ್‌ ಫಿರ್‌ ಜೀನೇ ಕಿ ತಮನ್ನಾ ಹೈ; ತಮ್ಮ ಹಾಡುಗಳನ್ನು ತಾವೇ ಕೇಳುತ್ತಿರಲಿಲ್ಲ!

12:02 PM Feb 07, 2022 | Team Udayavani |
ವಸಂತ ನಾಡಿಗೇರಲತಾ ಮಂಗೇಶ್ಕರ್‌ ಮೊದಮೊದಲು ಅವಕಾಶಕ್ಕಾಗಿ ಹೋರಾಟ ಮಾಡುತ್ತಿದ್ದರು. ಆದರೆ ಒಂದೊಮ್ಮೆ ನೆಲೆ ನಿಂತ ಮೇಲೆ ಕಲಾವಿದರ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದರು. ಇದಕ್ಕೆ ಅವರ ತಂದೆಯೇ ಕಾರಣ ಇರಬಹುದು. ಏಕೆಂದರೆ, "ನಿನ್ನ ಆತ್ಮಸಾಕ್ಷಿಗೆ ಮಾತ್ರ ಹೆದರು. ನಿನಗೆ ಸರಿ ಎಂದು ಕಂಡುಬಂದರೆ ಮರು ಆಲೋಚಿಸದೆ ಮುಂದಡಿ ಇಡು' ಎಂಬುದು ತಂದೆಯ ಸಲಹೆಯಾಗಿತ್ತು. ಅದನ್ನು ಕೊನೆಯವರೆಗೂ ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಆಗೆಲ್ಲ ಹಾಡಿನ ಕ್ಯಾಸೆಟ್‌ಗಳ ಮೇಲೆ ಗಾಯಕರ ಹೆಸರು ಹಾಕುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಲತಾ ಇದರ ವಿರುದ್ದ ದನಿ ಎತ್ತಿದರು. 'ಚೋರಿ ಚೋರಿ' ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಬಂದಾಗ ಅದರಲ್ಲಿ ಸಂಗೀತ ನಿರ್ದೇಶಕರ ಹೆಸರು ಮಾತ್ರ ಇತ್ತು. ಚಿತ್ರದ 'ರಸಿಕ ಬಲಮಾ' ಹಾಡು ಹಾಡಲು ಲತಾ ನಿರಾಕರಿಸಿದರು. ಮುಂದಿನ ವರ್ಷ ಈ ನಿಯಮ ಬದಲಾಯಿಸಲಾಯಿತು. ರಾಯಲ್ಟಿ ವಿಚಾರದಲ್ಲೂ ಲತಾ ಸತತವಾಗಿ ಹೋರಾಟ ಮಾಡುತ್ತಿದ್ದರು...
Now pay only for what you want!
This is Premium Content
Click to unlock
Pay with

ಲತಾ 36 ಭಾಷೆಗಳಲ್ಲಿ 36000 ಹಾಡು ಹಾಡಿದ್ದಾರೆ. ಖ್ಯಾತಿ ಬಂದ ಮೇಲೂ ಅವರು ದಿನನಿತ್ಯದ ರಿಯಾಜ್‌, ಅಂದರೆ ಸಂಗೀತ ಅಭ್ಯಾಸವನ್ನು ಬಿಡುತ್ತಿರಲಿಲ್ಲ. “ತಾನು ಇಂದಿಗೂ ಸಂಗೀತದ ವಿದ್ಯಾರ್ಥಿನಿ’ ಎನ್ನುತ್ತಿದ್ದ ಅವರು ಕೆಲವು ಉಚ್ಚಾರ ಸರಿಮಾಡಿಕೊಳ್ಳಲು ಉರ್ದು ಕಲಿತರು. ಸಂಸ್ಕೃತವನ್ನೂ ಕಲಿತರು. ಇಂಥ ಸಮರ್ಪಣಾಭಾವದಿಂದಲೇ ಲತಾ ವಿಭಿನ್ನ ಸಾಧಕಿಯಾಗಿ ಎದ್ದು ನಿಲ್ಲುತ್ತಾರೆ. “ಗೈಡ್‌’ ಚಿತ್ರದ “ಆಜ್‌ ಫಿರ್‌ ಜೀನೇ ಕಿ ತಮನ್ನಾ ಹೈ’ ಹಾಡಿನ ಸಾಲಿನ ಅರ್ಥದಂತೆ, ತಮ್ಮ ಹಾಡುಗಳನ್ನು ಕೇಳುವ ಚಿತ್ರರಸಿಕರ ಮನದಲ್ಲಿ “ಮತ್ತೂಮ್ಮೆ ಜೀವಿಸುವ ಉಮೇದು’ ತುಂಬುತ್ತಲೇ ಇರುತ್ತಾರೆ.

Advertisement

ಯಶಸ್ಸು ಸಿಕ್ಕೊಡನೆ ಅದರ ಮದ ತಲೆಗೇರಿ ಬಿಡುತ್ತದೆ. ಅವರ ಕಾಲುಗಳು ನೆಲದಲ್ಲೇ ನಿಲ್ಲುವುದಿಲ್ಲ ಎಂಬುದು ಬಹಳಷ್ಟು ಜನರ ವಿಷಯದಲ್ಲಿ ಅರಿವಿಗೆ ಬಂದಿರುವ ಸಂಗತಿ. ಆದರೆ ಇದಕ್ಕೆ ಅಪವಾದ ಎಂಬಂತೆ ಬಾಳಿ, ತನ್ಮೂಲಕ ಒಂದು ಆದರ್ಶವನ್ನು ಬಿಟ್ಟು ಹೋದವರು ಲತಾ ಮಂಗೇಶ್ಕರ್‌. ಏಕೆಂದರೆ ಸಂಗೀತ ಕ್ಷೇತ್ರದಲ್ಲಿ ಅವರೇರಿದ ಎತ್ತರ ಅಸಾಧಾರಣ. ಅದರೆ ‘ತುಂಬಿದ ಕೊಡ ತುಳುಕುವುದಿಲ್ಲ’ ಎಂಬ ಮಾತಿಗೆ ರೂಪಕವಾಗಿದ್ದವರು. ಏಕೆಂದರೆ ಸಂಗೀತ ಸರಸ್ವತಿ, ಸ್ವರಸಾಮ್ರಾಜ್ಞಿ, ಸಂಗೀತ ರಾಯಭಾರಿಯಾಗಿದ್ದರೂ ಅದಕ್ಕಿಂತ ಮಿಗಿಲಾಗಿ ಲತಾ ಜನಪ್ರಿಯವಾಗಿದ್ದು, ಗೌರವಾದರಕ್ಕೆ ಪಾತ್ರವಾಗಿದ್ದು ಅವರ ಸರಳತೆಗೆ, ಸಜ್ಜನಿಕೆಗೆ. ಅಸಾಮಾನ್ಯ ಸಾಧನೆ ಮಾಡಿ ಖ್ಯಾತಿಯನ್ನು ಪಡೆದರೂ ಸಾಮಾನ್ಯರಂತೆ ಬದುಕು ಸಾಗಿಸುವುದು ಸುಲಭ ಸಾಧ್ಯವಲ್ಲ. ಅದಕ್ಕೂ ವಿಶೇಷವಾದ ಸಾಧನೆಯೇ ಬೇಕು.

ಯಾರೇ ಎದುರಾದರೂ- ಅವರು ಹಿರಿಯರಲಿ, ಕಿರಿಯರಿರಲಿ-ವಿನಯದಿಂದ, ವಿಧೇಯತೆಯಿಂದ ಕತ್ತು ಬಗ್ಗಿಸಿ ನಮಸ್ಕಾರ ಹೇಳುತ್ತಿದ್ದರು. ಉಮ್ರಾವ್‌ ಜಾನ್‌ ಚಿತ್ರಕ್ಕಾಗಿ ಗೀತ ರಚನೆಕಾರ ಖಯ್ನಾಮ್‌ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ಒಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ಅವರ ಮನೆಯಕರೆಗಂಟೆಯ ಸದ್ದಾಗುತ್ತದೆ. ಬಾಗಿಲು ತೆಗೆದು ನೋಡಿದರೆ ಅಲ್ಲಿ ಲತಾ ಮಂಗೇಶ್ಕರ್‌! ಅವರ ಕೈಯಲ್ಲೊಂದು ಹೂದಂಡೆ. ಅಭಿನಂದನೆ ಹೇಳಲುಮನೆಗೆ ಬಂದಿದ್ದರು. ಇದನ್ನು ನೋಡಿ ಸ್ವತಃ ಖಯ್ನಾಮ್‌ಗೆ ತಮ್ಮ ಕಣ್ಣನ್ನು ತಾವೇ ನಂಬದಿರುವಂಥ ಪರಿಸ್ಥಿತಿ.

ಆದರೆ ಇದು ಲತಾ ಮಂಗೇಶ್ಕರ್‌ ಅವರ ಸರಳತೆ, ದೊಡ್ಡತನ. ಲತಾ 36 ಭಾಷೆಗಳಲ್ಲಿ 36000 ಹಾಡು ಹಾಡಿದ್ದಾರೆ. ಅಂದರೆ ಅವರಿಗೆ ಹಾಡುವುದು ನೀರು ಕುಡಿದಂತೆ, ಲೀಲಾಜಾಲ. ಆದರೆ ಅಷ್ಟೆಲ್ಲ ಖ್ಯಾತಿ ಬಂದ ಮೇಲೂ ಅವರು ದಿನನಿತ್ಯದ ರಿಯಾಜ್‌, ಅಂದರೆ ಸಂಗೀತ ಅಭ್ಯಾಸವನ್ನು ಬಿಡುತ್ತಿರಲಿಲ್ಲ. “ತಾನು ಇಂದಿಗೂ ಸಂಗೀತದ ವಿದ್ಯಾರ್ಥಿ’ ಎಂದು ಅವರು ಹೇಳುತ್ತಿದ್ದರು. ಕೆಲವು ಉಚ್ಚಾರ ಸರಿಮಾಡಿಕೊಳ್ಳಲು ಉರ್ದು ಕಲಿತರು. ಸಂಸ್ಕೃತವನ್ನೂ ಕಲಿತರು. ಕೆಲಸದಲ್ಲಿ ಸ್ವಲ್ಪ ಅನುಭವ ಬಂದ ಮೇಲೆ, ಒಂದಷ್ಟು ಹಣ ಹೆಸರು ಮಾಡಿದ ಮೇಲೆ, ತಾನು ಇನ್ನು ಕಲಿಯುವುದೇನೂ ಇಲ್ಲ ಎಂದು ಭಾವಿಸುವವರೇ ಹೆಚ್ಚು.

ಅಂಥವರಲ್ಲಿ ಲತಾ ವಿಭಿನ್ನವಾಗಿ ಎದ್ದು ನಿಲ್ಲುತ್ತಾರೆ. ಆದರೆ ಇದೆಲ್ಲ ಲತಾಗೆ ಸುಲಭವಾಗಿ ದಕ್ಕಿದ್ದಲ್ಲ. ಪ್ರವರ್ಧಮಾನಕ್ಕೆ ಬರುವ ಮೊದಲು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಕಷ್ಟ, ಅವಮಾನ, ಹಿನ್ನಡೆ, ಸೋಲು ಕಂಡಿದ್ದಾರೆ. ಆದರೆ ಇವೇ ಅವರನ್ನು ಇನ್ನಷ್ಟು ಗಟ್ಟಿಗೊಳಿಸಿದ್ದು. ಸೋಲೇ ಗೆಲುವಿನ ಸೋಪಾನ ಎಂಬುದಕ್ಕೆ ಲತಾ ಸೊಗಸಾದ ಉದಾಹರಣೆ.

Advertisement

ಹಾಗೆ ನೋಡಿದರೆ ಲತಾ ಮಂಗೇಶ್ಕರ್‌ ಅವರದು ಸಂಗೀತಗಾರರ ಕುಟುಂಬವೇ. ತಂದೆ ದೀನಾನಾಥ ಮಂಗೇಶ್ಕರ್‌ ಅವರು ಸ್ವತಃ ಸಂಗೀತಗಾರರು. ಹೀಗಾಗಿ ಅವರಿಗೆ ಮೊದಲಿನಿಂದಲೂ ಸಂಗೀತದ ಅಭ್ಯಾಸ ದೊರಕಿತ್ತು. ಆದರೆ ಅವರ ಮೊದಲ ಪ್ರದರ್ಶನ ಒಂದು ವಿಚಿತ್ರ ಸನ್ನಿವೇಶದಲ್ಲಿ ಆಯಿತು. ದೀನಾನಾಥರು ತಮ್ಮ ಕಂಪನಿ ನಾಟಕಕ್ಕಾಗಿ ಊರೂರಿಗೆ ಹೋಗಬೇಕಾಗುತ್ತಿತ್ತು. ಒಮ್ಮೆ ಅವರ ಇಡೀ ಕುಟುಂಬದವರು ಮಹಾರಾಷ್ಟ್ರದ ಮನ್ಮಾಡ್‌ಗೆ ಸುಭದ್ರಾ ನಾಟಕ ಪ್ರದರ್ಶನಕ್ಕೆ ತೆರಳಿದ್ದರು. ಒಂದು ದಿನ, ನಾರದ ಪಾತ್ರ ನಿರ್ವಹಿಸಬೇಕಿದ್ದ ನಟರಿಗೆ ಅನಾರೋಗ್ಯ ಕಾಡಿತು. ಈ ದಿನದ ಪ್ರದರ್ಶನ ಹೇಗೆ ಎಂಬ ಚಿಂತೆಯಲ್ಲಿದ್ದರು. ಆದರೆ ಆಗ ಏಳು ವರ್ಷದ ಬಾಲಕಿಯಾಗಿದ್ದ ಲತಾ,’ ನನಗೆ ಈ ನಾಟಕದ ಎಲ್ಲ ಸಂಬಾಷಣೆ, ಹಾಡು ಕಂಠಪಾಠವಾಗಿದೆ. ಅನುಮತಿ ಕೊಟ್ಟರೆ ನಾನೇ ನಾರದನ ಪಾತ್ರ ನಿರ್ವಹಿಸುತ್ತೇನೆ ಎಂದರು. ಅಪ್ಪನಿಗೆ ಅಚ್ಚರಿ. ಆದರೆ ಆತಂಕ. ಆದರೂ ಅನಿವಾರ್ಯತೆಯಿಂದಾಗಿ ನೋಡೇಬಿಡುವ ಎಂದು ಅವಕಾಶ ಕೊಟ್ಟರು. ನಾಟಕ ಆರಂಭವಾಗುತ್ತಲೇ ನಾರದನ ಪಾತ್ರ ಬರುತ್ತಿದ್ದಂತೆ, ಲತಾ ಎಲ್ಲೂ ತಪ್ಪಿಲ್ಲದೆ ಸರಾಗವಾಗಿ ನಿರ್ವಹಿಸಿದಳು.

ಹೀಗೆ ಲತಾ ರಂಗಪ್ರವೇಶ ಆಗಿದ್ದು ಇಂಥ ಅನಿವಾರ್ಯ ಸಂದರ್ಭದಲ್ಲಿ. ಮುಂದೆ ಸಾರ್ವಜನಿಕ ಪ್ರದರ್ಶನಗಳು ಮುಂದುವರಿದವು. ಲತಾ ಮಂಗೇಶ್ಕರ್‌ಗೆ ನಟಿಯಾಗಬೇಕೆಂಬ ಆಸೆ ಇತ್ತು. ಮೊದಲು ಅವರು ಹಲವು ಮರಾಠಿ ನಾಟಕ ಮತ್ತು ಚಿತ್ರಗಳಲ್ಲಿ ನಟಿಯಾಗಿ ಪಾತ್ರ ನಿರ್ವಹಿಸಿದರು ಕೂಡ. ಆದರೆ ಮತ್ತೆ ವಿಧಿ ತನ್ನ ಕೈಚಳಕ ತೋರಿಸಿತು. ಲತಾ 13 ವರ್ಷದವಳಾಗಿದ್ದಾಗ ಅವರ ತಂದೆ ನಿಧನರಾದರು. ಆಗ ಅವರಿಗೆ ಬಡತನ. ಅಂತ್ಯ ಸಂಸ್ಕಾರ ಮಾಡಲೂ ಆಗದಂಥ ದುರ್ಭರ ಪರಿಸ್ಥಿತಿ. ಈ ಹೊತ್ತಿನಲ್ಲಿ ತಾಯಿ, ಮೂವರು ಸೋದರಿಯರು ಹಾಗೂ ಸೋದರನನ್ನು ಪಾಲಿಸಬೇಕಾದ ಸ್ಥಿತಿ. ಆಗ ಅವರು ನಟನೆಯನ್ನು ಬಿಟ್ಟು ಗಾಯಕಿಯಾಗಿ ಮುಂದುವರಿಯಲು ನಿರ್ಧರಿಸಿದರು. ಆದರೆ ಆರಂಭದ ದಿನಗಳು ಹೂವಿನ ಹಾಸಿಗೆಯಾಗಿರಲಿಲ್ಲ. ನಿಮ್ಮ ಧ್ವನಿ ತೆಳುವಾಗಿದೆ ಎಂದು ತಿರಸ್ಕರಿಸಿದವರೇ ಹೆಚ್ಚು. ಒಂದೊಮ್ಮೆ ಅವಕಾಶಗಳು ಸಿಕ್ಕ ಮೇಲೆ ಯಶಸ್ಸಿನ ಒಂದೊಂದೇ ಮೆಟ್ಟಿಲು ಏರಿದರು. ಮುಂದಿನದು ಇತಿಹಾಸ.

ಲತಾ ಮಂಗೇಶ್ಕರ್‌ ಅವರದ್ದು ಹೋರಾಟದ ಬದುಕು
ಲತಾ ಮಂಗೇಶ್ಕರ್‌ ಮೊದಮೊದಲು ಅವಕಾಶಕ್ಕಾಗಿ ಹೋರಾಟ ಮಾಡುತ್ತಿದ್ದರು. ಆದರೆ ಒಂದೊಮ್ಮೆ ನೆಲೆ ನಿಂತ ಮೇಲೆ ಕಲಾವಿದರ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದರು. ಇದಕ್ಕೆ ಅವರ ತಂದೆಯೇ ಕಾರಣ ಇರಬಹುದು. ಏಕೆಂದರೆ, “ನಿನ್ನ ಆತ್ಮಸಾಕ್ಷಿಗೆ ಮಾತ್ರ ಹೆದರು. ನಿನಗೆ ಸರಿ ಎಂದು ಕಂಡುಬಂದರೆ ಮರು ಆಲೋಚಿಸದೆ ಮುಂದಡಿ ಇಡು’ ಎಂಬುದು ತಂದೆಯ ಸಲಹೆಯಾಗಿತ್ತು. ಅದನ್ನು ಕೊನೆಯವರೆಗೂ ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಆಗೆಲ್ಲ ಹಾಡಿನ ಕ್ಯಾಸೆಟ್‌ಗಳ ಮೇಲೆ ಗಾಯಕರ ಹೆಸರು ಹಾಕುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಲತಾ ಇದರ ವಿರುದ್ದ ದನಿ ಎತ್ತಿದರು. ‘ಚೋರಿ ಚೋರಿ’ ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಬಂದಾಗ ಅದರಲ್ಲಿ ಸಂಗೀತ ನಿರ್ದೇಶಕರ ಹೆಸರು ಮಾತ್ರ ಇತ್ತು. ಚಿತ್ರದ ‘ರಸಿಕ ಬಲಮಾ’ ಹಾಡು ಹಾಡಲು ಲತಾ ನಿರಾಕರಿಸಿದರು. ಮುಂದಿನ ವರ್ಷ ಈ ನಿಯಮ ಬದಲಾಯಿಸಲಾಯಿತು. ರಾಯಲ್ಟಿ ವಿಚಾರದಲ್ಲೂ ಲತಾ ಸತತವಾಗಿ ಹೋರಾಟ ಮಾಡುತ್ತಿದ್ದರು. ಕ್ಯಾಸೆಟ್‌ ಬಿಡುಗಡೆಯಾದಾಗ ನಾಯಕ, ನಾಯಕಿಗೆ ರಾಯಲ್ಟಿ ಕೊಡುತ್ತಿದ್ದರು. ಆದರೆ ಗಾಯಕ ಗಾಯಕಿಯರಿಗೆ ಆ ಭಾಗ್ಯ ಇರಲಿಲ್ಲ. ಇದರ ವಿರುದ್ಧವೂ ಹೋರಾಟ ಮಾಡಿದರು. ತಮ್ಮ ಜತೆ ಕೈಜೋಡಿಸದಿರುವ ಕಾರಣಕ್ಕೆ ಮೊಹಮ್ಮದ್‌ ರಫಿ ಜತೆ ಹಾಡುವುದನ್ನು ನಿಲ್ಲಿಸಿದರು. ಇದೇ ವಿಷಯಕ್ಕಾಗಿ ರಾಜ್‌ ಕಪೂರ್‌ ಜತೆಗೂ ಜಿದ್ದಿಗೆ ಬಿದ್ದರು. ಕಲಾವಿದರ ಹಕ್ಕಿಗಾಗಿ ಹೋರಾಡುವುದು ತಮ್ಮ ಕರ್ತವ್ಯ ಎಂಬುದು ಅವರ ಪ್ರತಿಪಾದನೆಯಾಗಿತ್ತು.

ಭಾರತ ರತ್ನರಾದ ಎರಡನೇ ಗಾಯಕಿ
ಲತಾ ಮಂಗೇಶ್ಕರ್‌ ಅವರಿಗೆ ಭಾರತ ರತ್ನ ಪಡೆದ ಎರಡನೇ ಗಾಯಕಿ ಎಂಬ ಹೆಗ್ಗಳಿಕೆಯಿದೆ. ಭಾರತೀಯ ಶಾಸ್ತ್ರೀಯ ಸಂಗೀತಜ್ಞೆ ಹಾಗೂ ಗಾಯಕಿಯಾದ ಎಂ.ಎಸ್‌. ಸುಬ್ಬಲಕ್ಷಿ$¾ಯವರಿಗೆ 1998ರಲ್ಲಿ ಭಾರತ ರತ್ನ ಗೌರವ ಸಂದಿತ್ತು. 2001ರಲ್ಲಿ ಲತಾ ಮಂಗೇಶ್ಕರ್‌ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗಿತ್ತು.

ದೀದಿ ಹೆಸರಲ್ಲಿ ಸುಗಂಧದ್ರವ್ಯ
ಲತಾ ಮಂಗೇಶ್ಕರ್‌ ಅವರ ಹೆಸರಿನಲ್ಲಿ ಬಾಲಿವುಡ್‌ನ‌ ಫೈನಾನ್ಶಿಯರ್‌ ಭರತ್‌ ಶಾ, ಲತಾ ಎಯು ಡಿ ಫರ್ಫ್ಯೂಮ್ ಎಂಬ ಸುಗಂಧ ದ್ರವ್ಯವನ್ನು 2013ರಲ್ಲಿ ಮಾರುಕಟ್ಟೆಗೆ ಪರಿಚಯಿ ಸಿದ್ದರು. ಅವರ ಹೆಸರಿನಲ್ಲಿ ತಯಾರಿಸಲಾದ ಈ ಸುಗಂಧ್ರದ್ರವ್ಯದ ಮೊದಲ ಪುಟ್ಟ ಬಾಟಲಿಯನ್ನು ಹರಾಜಿಗಿಡಲಾಗಿತ್ತು. ಆ ಹರಾಜಿನಲ್ಲಿ 3.5 ಲಕ್ಷ ರೂ. ಬಂದಿತ್ತು. ಆಗಲೇ, 60 ಮಿ.ಲೀಟರ್‌ನಷ್ಟಿದ್ದ ಆ ಬಾಟಲಿಯ ಬೆಲೆ 1,700 ರೂ. ಆಗಿತ್ತು. ಈಗ ಇಬೇ ಆನ್‌ ಲೈನ್‌ ಸ್ಟೋರ್‌ನಲ್ಲಿ 60 ಎಂ.ಎಲ್‌. ಬಾಟಲಿಗೆ 17,900 ರೂ. ಬೆಲೆಯಿದೆ.

ತಮ್ಮ ಹಾಡುಗಳನ್ನು ತಾವೇ ಕೇಳುತ್ತಿರಲಿಲ್ಲ!
50 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗಿರುವ ಲತಾ ಅವರು ವಿಶೇಷ ಅಭ್ಯಾಸವೊಂದನ್ನು ರೂಢಿ ಮಾಡಿಕೊಂಡಿದ್ದರು. ಒಮ್ಮೆ ಹಾಡು ಹೇಳಿದ ನಂತರ
ಅದರತ್ತ ತಲೆಯನ್ನೇ ಹಾಕುತ್ತಿರಲಿಲ್ಲವಂತೆ. ತಾವು ಹಾಡಿದ ಹಾಡನ್ನು ತಾವೇ ಕೇಳುತ್ತಿರಲಿಲ್ಲವಂತೆ. ಈ ಬಗ್ಗೆ ಅವರು 2020ರಲ್ಲಿ ಸಂದರ್ಶನವೊಂದರಲ್ಲಿ
ಮಾತನಾಡುವಾಗ ಹೇಳಿಕೊಂಡಿದ್ದರು. “ನಾನು ನನ್ನ ಹಾಡನ್ನು ಕೇಳಿದೆನೆಂದರೆ ನನಗೆ ಅದರಲ್ಲಿ ನೂರಾರು ತಪ್ಪು ಕಾಣುತ್ತದೆ. ಹಾಗಾಗಿ ನಾನು ನನ್ನ ಹಾಡನ್ನ
ಕೇಳುವುದೇ ಇಲ್ಲ. ಒಮ್ಮೆ ರೆಕಾರ್ಡಿಂಗ್‌ ಆಯಿತೆಂದರೆ ಮುಗಿಯಿತು. ಅಷ್ಟೇ’ ಎಂದು ಹೇಳಿದ್ದರು. ನಿಮ್ಮಂತೆ ಬೇರೆ ಯಾವ ಗಾಯಕರೂ ಇಲ್ಲ ಎಂದು ಹೇಳುವ ಮಾತಿಗ ಬಗ್ಗೆ ಬೇಸರ ಹೊರಹಾಕಿದ್ದ ಅವರು, “ನನಗೂ ಮೊದಲು ಹಾಗೂ ನಂತರ ಅದೆಷ್ಟೋ ಗಾಯಕರು ಅತ್ಯಂತ ಸುಂದರವಾಗಿ ಹಾಡುವವರಿದ್ದಾರೆ.’ ಎಂದು ಹೇಳಿದ್ದರು.

ಈ ಹಾಡು ಚಂದವೋ, ಆ ಹಾಡು ಇಷ್ಟವೋ
ಲತಾ ಮಂಗೇಶ್ಕರ್‌ ಸಾವಿರಾರು ಸಂಖ್ಯೆಯ ಹಾಡುಗಳನ್ನು ಹಾಡಿದ್ದಾರೆ. ಈ ಪೈಕಿ ಅತ್ಯುತ್ತಮ ಹಾಡುಗಳನ್ನು ಹೆಕ್ಕುವುದು ಕಷ್ಟವೇ. ಆದರೂ ಒಂದಷ್ಟು ಹಾಡುಗಳು ಇಲ್ಲಿವೆ.
● ದಿಲ್‌ ಕಾ ಖೀಲೋನಾ ಹಾಯೆ ಟೂಟ್‌ ಗಯೆ (ಗೂಂಜ್‌ ಉಠಿ ಶಹನಾಯಿ)
● ಆಪ್‌ ಕೀ ನಜರೋನೆ ಸಮ್‌ಝಾ (ಅನ್‌ಪಢ್‌)
● ಆಜ್‌ ಫಿರ್‌ ಜಿನೇ ಕಿ ತಮನ್ನಾ (ಗೈಡ್‌)
● ಬಿಂದಿಯ ಚಮಗೇಗಿ (ದೋ ರಾಸ್ತೆ)
● ಇನ್ಹಿ ಲೋಗೋಂನೆ (ಪಾಕೀಜಾ)
● ದಿಲ್‌ ತೊ ಹೈ ದಿಲ್‌ (ಮುಕದ್ದರ್‌ ಕಾ ಸಿಕಂದರ್‌)
● ರಿಮ್‌ ಜಿಮ್‌ ಗಿರೆ ಸಾವನ್‌ (ಮಂಜಿಲ್‌)
● ಸೋಲಾ ಬರಸ್‌ ಕಿ (ಏಕ್‌ ದೂಜೆ ಕೇ ಲಿಯೆ)
● ಹೋಗಯಾ ತೂ ದಿಲ್‌ ಸೆ (ದಿಲ್‌ವಾಲೆ ದುಲ್ಹನಿಯಾ..)
● ಜಿಯಾ ಜಲೆ ಜಾನ್‌ ಜಲೆ (ದಿಲ್‌ ಸೆ) ಆದರೆ ಅಂದಾಜ್‌ ಚಿತ್ರದ ಉಠಾಯೆ ಜಾ ಉಸ್‌ ಕೆ ಸಿತಮ್‌.. ಹಾಡು ಇಷ್ಟ ಎಂದೂ ಹೇಳಲಾಗುತ್ತಿದೆ.

ಫಿಲ್ಮ್ ಫೇರ್ ಪ್ರಶಸ್ತಿ ಬೇಡ..
1958 ರಿಂದ 6 ಬಾರಿ ಲತಾಗೆ ಫಿಲ್ಮ್ ಫೇರ್ ಪ್ರಶಸ್ತಿ ಬಂದಿದೆ. ಆದರೆ ಇತರರಿಗೂ ಅವಕಾಶ ಸಿಗಲಿ ಎಂಬ ಕಾರಣಕ್ಕೆ ತಾವು ಇನ್ನು ಮುಂದೆಫಿಲ್ಮ್ ಫೇರ್ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಘೋಷಿಸಿದರು.

ಪ್ರೇಮಪತ್ರಕ್ಕೆ ಅಚ್ಚುಮೆಚ್ಚು
ಲತಾ ಅವರ ಒಂದೊಂದು ಹಾಡುಗಳು ಒಂದೊಂದು ರೀತಿಯ ಭಾವನೆಗಳನ್ನು ಉಂಟು ಮಾಡುತ್ತವೆ. ಫೂಲ್ ತುಮ್ಹೆ ಭೇಜಾ ಖತ್ ಮೆ’ ಹಾಡು ಪ್ರೇಮಪತ್ರ ಬರೆಯುವವರ ಪಾಲಿಗೆ ಇಂದಿಗೂ ಅಚ್ಚುಮೆಚ್ಚು.

ಪರಿಪೂರ್ಣ ಧ್ವನಿ
ಲಂಡನ್ನಿನ ರಾಯಲ್‌ ಆಲ್ಬರ್ಟ್‌ ಹಾಲ್‌ ಸಂಸ್ಥೆಯ ಪ್ರಕಾರ, ಲತಾ ಮಂಗೇಶ್ಕರ್‌ ಅವರ ಧ್ವನಿ ಜಗತ್ತಿನಲ್ಲೇ ಅತ್ಯಂತ ಪರಿಪೂರ್ಣವಾದುದಂತೆ. ಲತಾ ಮಂಗೇಶ್ಕರ್‌ ಶಾಲೆಗೆ ಹೋಗಿದ್ದು ಒಂದೇ  ದಿನ. ಆದರೆ 6 ವಿವಿಗಳ ಗೌರವ ಡಾಕ್ಟರೇಟ್‌ ಪದವಿ ದೊರೆತಿದೆ.

ಲತಾ ಫೇವರಿಟ್‌ ಇವು
*ಸಾಹಿತ್ಯ : ಖಲೀಲ್‌ ಗಿಬ್ರಾನ್‌, ಚೆಕೊವ್‌, ಟಾಲ್‌ ಸ್ಟಾಯ್‌
*ಶಾಸ್ತ್ರೀಯ ಸಂಗೀತಗಾರರು: ಉಸ್ತಾದ್‌ ಬಡೇ ಗುಲಾಂ ಅಲಿ ಖಾನ್‌, ಉಸ್ತಾದ್‌ ಅಮೀರ್‌ ಖಾನ್‌
*ಹಿನ್ನೆಲೆ ಗಾಯಕರು: ಕೆ ಎಲ್‌ ಸೈಗಲ್‌, ನೂರ್‌ ಜಹಾನ್‌
*ನಿರ್ಮಾಪಕರು: ಗುರುದತ್‌, ಬಿಮಲ್‌ ರಾಯ್‌, ಸತ್ಯಜಿತ್‌ ರೇ
*ಚಿತ್ರಗಳು: ಪಡೋಸನ್‌, ಗಾನ್‌ ವಿತ್‌ ದ ವಿಂಡ್‌, ಲೈಮ್‌ಲೈಟ್‌, ಟೈಟಾನಿಕ್‌
*ಗೀತ ರಚನೆಕಾರರು: ಶೈಲೇಂದ್ರ, ಸಾಹಿರ್‌ ಲುಧಿಯಾನವಿ, ನೀರಜ್‌
*ಸಂಗೀತ ನಿರ್ದೇಶಕರು : ಮದನ್‌ ಮೋಹನ್‌, ಸಲೀಲ್‌ ಚೌಧರಿ, ಜೈದೇವ್‌
*ಕ್ರೀಡೆಗಳು: ಕ್ರಿಕೆಟ್‌, ಫ‌ುಟ್ಬಾಲ್‌, ಟೆನಿಸ್‌
*ಹವ್ಯಾಸಗಳು: ಛಾಯಾಗ್ರಹಣ, ಅಡುಗೆ
*ಬಣ್ಣ: ಬಿಳಿ
*ಒಡವೆ: ವಜ್ರ
*ಹಬ್ಬ: ದೀಪಾವಳಿ

*ವಸಂತ ನಾಡಿಗೇರ

Advertisement

Udayavani is now on Telegram. Click here to join our channel and stay updated with the latest news.