Advertisement
ಆರಂಭದಲ್ಲಿ ಕಾಪು ಪೇಟೆಯ ಅನಂತ ಮಹಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನಸ್ನೇಹಿ ಕೇಂದ್ರ ಬಳಿಕ ಕಾಪು ಬಂಗ್ಲೆ ಮೈದಾನದಲ್ಲಿದ್ದ ಪ್ರವಾಸಿ ಬಂಗಲೆಗೆ ಸ್ಥಳಾಂತರಗೊಂಡಿತ್ತು. ಬಳಿಕ ಕಾಪು ತಾಲೂಕು ಘೋಷಣೆಯಾದ ಬಳಿಕ ತಾಲೂಕು ಕಚೇರಿಯೊಂದಿಗೇ ಇತ್ತು. ಆದರೆ ಕಳೆದೆರಡು ತಿಂಗಳ ಹಿಂದೆ ತಾಲೂಕು ಕಚೇರಿ ಹಳೆ ಪುರಸಭೆ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದರೂ ಜನಸ್ನೇಹಿ ಕೇಂದ್ರ ಸ್ಥಳಾಂತರಗೊಂಡಿರಲಿಲ್ಲ. ಇದೀಗ ಕಚೇರಿ ಸ್ಥಳಾಂತರಗೊಂಡಿರುವುದರಿಂದ ಕಂದಾಯ ಇಲಾಖೆ ಸಂಬಂಧಿತ ಹಾಗೂ ಇನ್ನಿತರ ಅರ್ಜಿಗಳ ಸೇವೆಯನ್ನು ಸಾರ್ವಜನಿಕರು ಒಂದೇ ಕಡೆ ಪಡೆಯಲು ಅವಕಾಶ ಮಾಡಿಕೊಟ್ಟಂತಾಗಿದೆ. ಕಾಪು ಪುರಸಭಾ ವ್ಯಾಪ್ತಿಯ ಮಲ್ಲಾರು, ಪಡು, ಉಳಿಯಾರಗೋಳಿ ಮತ್ತು ಮೂಳೂರು ಗ್ರಾಮಗಳ ಜನರ ಸೇವೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಆಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಕಾಪು ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳ ಕಂದಾಯ ಇಲಾಖೆ ಸಂಬಂಧಿತ ವಿವಿಧ ಅರ್ಜಿಗಳ ಸ್ವೀಕಾರ ಮತ್ತು ವಿಲೇವಾರಿಯೂ ನಡೆಯಲಿದೆ.
ಸ್ಥಳಾಂತರಗೊಂಡಿರುವ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆರ್‌ಟಿಸಿ, ಆಧಾರ್ ನೋಂದಣಿ, ತಿದ್ದುಪಡಿ, ವಾಸ್ತವ್ಯ ದೃಢ ಪತ್ರ, ಮೋಜಿನಿ ಅರ್ಜಿ, 94ಸಿ, 94ಸಿಸಿ, ಜನನ ಮತ್ತು ಮರಣ ಪ್ರಮಾಣ, ವಿವಿಧ ಪಿಂಚಣಿ ಯೋಜನೆಗಳ ಸಹಿತ ಸರಕಾರದ 36 ಸೇವೆಗಳು ಲಭ್ಯವಿವೆ ಎಂದು ಇಲಾಖಾ ಮೂಲಗಳು ತಿಳಿಸಿವೆ. ಒಂದೇ ಕಡೆ ಅವಕಾಶ
ಕಂದಾಯ ಇಲಾಖೆಗೆ ಸಂಬಂಧಿತ ಹಾಗೂ ಇನ್ನಿತರ ಅರ್ಜಿಗಳ ಸೇವೆಯನ್ನು ಒಂದೇ ಕಡೆ ಪಡೆಯಲು ಸಾರ್ವಜನಿಕರಿಗೆ ಅವಕಾಶ.