Advertisement

ಆಧಾರ್‌ ಖಾಸಗಿತನ ಅರ್ಜಿ: 9 ಜಡ್ಜ್ಗಳ ಪೀಠಕ್ಕೆ ವರ್ಗ

03:45 AM Jul 19, 2017 | Harsha Rao |

ಹೊಸದಿಲ್ಲಿ: ಖಾಸಗಿತನ ಎನ್ನುವುದು ಮೂಲಭೂತ ಹಕ್ಕೇ? ಇದು ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನಡಿ ಬರುತ್ತದೆಯೇ ಎಂಬ ಕುರಿತ ಮಹತ್ವದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್‌, 9 ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠಕ್ಕೆ ವಹಿಸಿದೆ. 

Advertisement

ಆಧಾರ್‌ನಿಂದ ಖಾಸಗಿತನದ ಉಲ್ಲಂಘನೆಯಾಗುತ್ತಿದೆ ಎಂಬ ಬಗ್ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಕುರಿತಂತೆ ಖಾಸಗಿತನದ ಹಕ್ಕಿನ ಬಗ್ಗೆ ಸುಪ್ರೀಂನ  9 ನ್ಯಾಯಮೂರ್ತಿಗಳುಳ್ಳ ಪೀಠ ತೀರ್ಪು ನೀಡಲಿದೆ. ಈ ಮೊದಲು 1950 ಮತ್ತು 1960ರಲ್ಲಿ ಖರಕ್‌ ಸಿಂಗ್‌ ಮತ್ತು ಎಂ.ಪಿ.ಶರ್ಮಾ ಪ್ರಕರಣಗಳಲ್ಲಿ ಸಂವಿಧಾನ ಪೀಠ, ಖಾಸಗಿತನವೆಂಬುದು ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳಡಿ ಬರುವುದಿಲ್ಲ ಎಂದಿತ್ತು. ಆದಾಗ್ಯೂ ಆಧಾರ್‌ ಕುರಿತ ಖಾಸಗಿತನ ಹಕ್ಕು ಉಲ್ಲಂಘನೆಯ ಪ್ರಕರಣಗಳನ್ನು ವಿಸ್ತೃತ ಪೀಠಕ್ಕೆ ಸಿಜೆಐ ಜೆ.ಎಸ್‌.ಖೆಹರ್‌ ಅವರಿದ್ದ ಪಂಚ ನ್ಯಾಯಾಧೀಶರ ನ್ಯಾಯಪೀಠ ವರ್ಗಾಯಿಸಿದೆ. 2015ರಲ್ಲಿ ಸರ್ಕಾರದ ಪರ ವಾದಿಸಿದ್ದ ಮಾಜಿ ಅಟಾರ್ನಿ ಜನರಲ್‌ ರೋಹrಗಿ, ಖಾಸಗಿತನ ಹಕ್ಕಲ್ಲ ಎಂದು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next