Advertisement

ಕಿಸಾನ್‌ ಸ್ಕೀಮ್‌ನ 2ನೇ ಕಂತಿಗೆ ಆಧಾರ್‌ ಕಡ್ಡಾಯ

12:30 AM Feb 05, 2019 | Team Udayavani |

ಹೊಸದಿಲ್ಲಿ: ಕೇಂದ್ರ ಬಜೆಟ್‌ನಲ್ಲಿ ಮಂಡಿಸಲಾದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಅಡಿಯಲ್ಲಿ ಮೊದಲ ಕಂತಿನ ಮೊತ್ತಕ್ಕೆ ಆಧಾರ್‌ ಐಚ್ಛಿಕವಾಗಿದ್ದರೆ, 2ನೇ ಕಂತಿಗೆ ಆಧಾರ್‌ ಕಡ್ಡಾಯವಾಗಿರುತ್ತದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. 75 ಸಾವಿರ ಕೋಟಿ ರೂ. ಮೊತ್ತದ ಈ ಯೋಜನೆ ಅಡಿ ಸಣ್ಣ ಮತ್ತು ಮಧ್ಯಮ ವರ್ಗದ 2 ಹೆಕ್ಟೇರ್‌ಗಿಂತ ಕಡಿಮೆ ಇರುವ ರೈತರಿಗೆ ವಾರ್ಷಿಕ 6 ಸಾವಿರ ರೂ. ನಗದು ನೀಡಲಾಗುತ್ತದೆ. 

Advertisement

ಮಾರ್ಚ್‌ ವೇಳೆಗೆ ಮೊದಲ ಕಂತು ಬಿಡುಗಡೆ ಮಾಡಲಾ ಗುತ್ತದೆ. 2018 ಡಿಸೆಂಬರ್‌ನಿಂದ 2019 ಮಾರ್ಚ್‌ ಅವಧಿಯ ಕಂತಿನ ಮೊತ್ತವನ್ನು ನೀಡುವಾಗ ಆಧಾರ್‌ ಲಭ್ಯವಿದ್ದರೆ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ಆಧಾರ್‌ ಸಂಖ್ಯೆ ಲಭ್ಯವಿಲ್ಲದಿದ್ದರೆ, ಡ್ರೈವಿಂಗ್‌ ಲೈಸೆನ್ಸ್‌, ಮತದಾರರ ಗುರುತಿನ ಚೀಟಿ ಮತ್ತು ನರೇಗಾ ಜಾಬ್‌ ಕಾರ್ಡ್‌ ಅಥವಾ ಸರಕಾರ ನೀಡಿದ ಯಾವುದೇ ಇತರ ದಾಖಲೆಗಳನ್ನು ದಾಖಲೆಯಾಗಿ ಪಡೆಯಲಾಗುತ್ತದೆ. ಆದರೆ ನಂತರದ ಕಂತುಗಳನ್ನು ವರ್ಗಾವಣೆ ಮಾಡಲು ಆಧಾರ್‌ ಕಡ್ಡಾಯವಾಗಿದ್ದು, ನಕಲಿ ಫ‌ಲಾನುಭವಿಗಳನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next