Advertisement

ವೋಟರ್‌ ಐಡಿಗೆ ಆಧಾರ್‌ ಲಿಂಕ್‌ ಯಾಕೆ ? ಹೇಗೆ ?

10:04 AM Aug 21, 2019 | mahesh |

ಮಣಿಪಾಲ: ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಕಾರ್ಡ್‌ ನೊಂದಿಗೆ ಲಿಂಕ್‌ ಮಾಡುವ ಕೇಂದ್ರ ಚುನಾವಣ ಆಯೋಗದ ಕನಸಿಗೆ ಮತ್ತೆ ಮರುಜೀವ ಬಂದಿದೆ. ವರ್ಷಗಳ ಹಿಂದೆಯೇ ಇಂತಹ ದೊಂದು ಪ್ರಸ್ತಾವನೆ ಆಯೋಗದ ಮುಂದೆ ಇತ್ತು. ಆದರೆ ಸುಪ್ರೀಂ ಕೋರ್ಟ್‌ ಇದಕ್ಕೆ ಬ್ರೇಕ್‌ ಹಾಕಿದ ಪರಿಣಾಮ ಸ್ವಲ್ಪ ಹಿನ್ನಡೆಯಾಗಿತ್ತು.ಇದೀಗ ಕಾನೂನಿನ ತೊಡಕು ನಿವಾರಿ ಸಲು ಕೇಂದ್ರದ ಮೊರೆ ಹೋಗಿದೆ.

ಸುಪ್ರೀಂ ಕೋರ್ಟ್‌ ತೀರ್ಪು
ಆಯೋಗದ ಈ ಕ್ರಮಕ್ಕೆ ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿತ್ತು. 1951ರ ಜನಪ್ರತಿನಿಧಿ ಕಾಯಿದೆಗೆ ಇದು ಅಡ್ಡಿಯಾಗುತ್ತದೆ.ಸರಕಾರಿ ಯೋಜನೆಗೆ ಮಾತ್ರ ಆಧಾರ್‌ ಕಡ್ಡಾಯ ಮಾಡಬೇಕು. ಬೇರೆ ಯೋಜನೆಗಳಿಗೆ ಕಡ್ಡಾಯ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಈಗ ಈ ಕಾಯಿ ದೆಗೆ ತಿದ್ದುಪಡಿ ತಂದು ಈ ಯೋಜನೆ ಜಾರಿಗೊಳಿಸಲು ಚುನಾವಣ ಆಯೋಗ ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಿದೆ.
ಏನಿದು ಯೋಜನೆ?
ಆಯೋಗ ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಕಾರ್ಡ್‌ ಜತೆ ಲಿಂಕ್‌ ಮಾಡುವ ಇರಾದೆ ಹೊಂದಿದೆ. ಈಗಾಗಲೇ ಆಧಾರ್‌ಗೆ ಪಾನ್‌ ಲಿಂಕ್‌ ಮಾಡಲಾಗಿದ್ದು, ಈ ಪ್ರಕ್ರಿಯೆಗೆ ವೋಟರ್‌ ಐಡಿಯನ್ನು ಒಳಪಡಿಸಲು ಆಯೋಗ ಆಸಕ್ತಿ ಹೊಂದಿದೆ. ಈಗಾಗಲೇ ಹೊಸ ಮತದಾರರ ಆಧಾರ್‌ ಸಂಖ್ಯೆ ಪಡೆಯಲಾಗುತ್ತದೆ.
ಸುಲಭ ವಿಧಾನ

ಎಲ್ಲವೂ ಸರಿಯಾದರೆ ಪಾನ್‌ ಮಾದರಿಯಲ್ಲೇ ವೋಟರ್‌ ಐಡಿ ಯನ್ನು ಲಿಂಕ್‌ ಮಾಡಬಹುದಾಗಿದೆ. ಆನ್‌ಲೈನ್‌, ಎಸ್‌ಎಂಎಸ್‌ ಮೂಲಕ ಜನರು ಮಾಡಿಸಬಹುದಾಗಿದೆ. ಆಧಾರ್‌ ನಂಬರ್‌, ವೋಟರ್‌ ಐಡಿ ನಂಬರ್‌, ನೋಂದಾಯಿಸಿದ ಮೊಬೈಲ್ ಸಂಖ್ಯೆ ಬೇಕಾಗುತ್ತದೆ.
2015ರಲ್ಲಿ ಆಯೋಗಏನು ಮಾಡಿತ್ತು?
ಚುನಾವಣ ಆಯೋಗವು 2015ರಲ್ಲಿ ವೋಟರ್‌ ಐಡಿ ಜತೆ ಆಧಾರ್‌ ಕಾರ್ಡ್‌ ಅನ್ನು ಸ್ವಯಂ ಪ್ರೇರಿತವಾಗಿ ಲಿಂಕ್‌ ಮಾಡಿಸುವವರಿಗೆ ಅವಕಾಶ ಕಲ್ಪಿಸಿತ್ತು. ಈ ವೇಳೆ 32 ಸಾವಿರ ಜನರು ಲಿಂಕ್‌ ಮಾಡಿಸಿಕೊಂಡಿದ್ದರು ಎಂಬ ಮಾಹಿತಿ ಇದೆ. ಆದರೆ ಸುಪ್ರೀಂ ಕೋಟ್ ಕಳೆದ ಅಕ್ಟೋಬರ್‌ನಲ್ಲಿ ಇದಕ್ಕೆ ತಡೆ ನೀಡಿತ್ತು. ಬಳಿಕ ಆಯೋಗ ಮುಂದುವರಿಯಲಿಲ್ಲ.ಆದರೆ ಆಧಾರ್‌ ಜತೆ ವೋಟರ್‌ ಐಡಿ ಲಿಂಕ್‌ ಆಗಲು ಈಗಿರುವ ಕಾನೂನಿನ ತೊಡಕು ನಿವಾರಣೆ ಆಗುವ ಸಾಧ್ಯತೆ ಇದೆ.
Advertisement

122 ಕೋಟಿ ಆಧಾರ್‌ ಕಾರ್ಡ್‌ ಹೊಂದಿರುವವರು
90 ಕೋಟಿ ವೋಟರ್‌ ಐಡಿ ಹೊಂದಿರುವವರು

Advertisement

Udayavani is now on Telegram. Click here to join our channel and stay updated with the latest news.

Next