Advertisement

ಎಗ್ಗಿಲ್ಲದೆ ಸಾಗುತ್ತಿದೆ ಆಧಾರ್‌ ಸುಲಿಗೆ

12:49 PM Nov 22, 2017 | Team Udayavani |

ನಂಜನಗೂಡು: ಈಗ ಆಧಾರ್‌ ಕಾಲ ಪ್ರಸ್ತುತ ಸಮಾಜದ ಎಲ್ಲ ವ್ಯವಹಾರಗಳೀಗೂ ಆಧಾರ್‌ ಕಡ್ಡಾಯ ಮಾಡಿ ನಮ್ಮನ್ನಾಳುವ ಸರ್ಕಾರವೇ ಆದೇಶ ಹೊರಡಿಸಿರುವುದು ಜನರ ಸುಲಿಗೆಗೆ ದಾರಿಯಾಗಿದೆ.

Advertisement

ಆಧಾರ್‌ ನೋಂದಣಿ ಉಚಿತವಾಗಿದ್ದು ತಿದ್ದುಪಡಿಯಾದಲ್ಲಿ 25 ರೂ ಶುಲ್ಕ ಪಡೆಯಬಹುದು ಎಂಬ ನಿಯಮಾವಳಿಯೂ ಜಾರಿಯಲ್ಲಿದೆ
ಆದರೆ ಆಧಾರ್‌ ಈ ರಿಯಾಯಿತಿ ಪಡೆಯಬೇಕಾದ ಗ್ರಾಹಕ ಸುಲಿಗೆಗೆ ಒಳಗಾಗುತ್ತಿರುವುದು ನಮ್ಮ ವ್ಯವಸ್ಥೆಯ ದುಧೈವ.

ನಂಜನಗೂಡಿನಲ್ಲಿ ಆಧಾರ್‌ ನೋಂದಣಿ ಹಾಗೂ ತಿದ್ದುಪಡಿಗೆ 100 ಸುಲಿಗೆ ಮಾಡಲಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದಲ್ಲಿ ಅಂಚೆ ಕಚೇರಿಯಲ್ಲಿ ತಿದ್ದುಪಡಿಗೆ ಮಾತ್ರ ಅವಕಾಶವಿದ್ದು ರೂ 25 ಮಾತ್ರ ಪಡೆಯಲಾಗುತ್ತಿದೆ .ಆದರೆ ಖಾಸಗಿಯವರಲ್ಲಿ ಇದಕ್ಕೆ 100 ವಸೂಲಿ ಮಾಡಲಾಗುತ್ತಿದೆ.

ಸೇವೆಗೆ ಉಚಿತ ಜಾಗ ಆದರೆ ನಡೆಯುತ್ತಿರುವದು ಸುಲಿಗೆ. ಬ್ಯಾಂಕಿನ ಗ್ರಾಹಕರೂ ಸೇರಿದಂತೆ ಸಾರ್ವಜನಿಕರಿಗೆ ಆಧಾರ್‌ ನೋಂದಣಿ ಅಥವಾ ತಿದ್ದು ಪಡಿಯ ಸೇವೆ ಸುಗಮವಾಗಲಿ ಎಂಬ ಸದುದ್ದೇಶದಿಂದ ಪಟ್ಟಣದ ಕೆನರಾ ಬ್ಯಾಂಕಿನಲ್ಲಿ ಜಾಗ ನೀಡಲಾಗಿದೆ ಆದರೆ ಬ್ಯಾಂಕಿನಿಂದ ಉಚಿತವಾಗಿ ಜಾಗ ಪಡಿದಿದ್ದರೂ ಇಲ್ಲಿ ಆಧಾರ್‌ ಫ‌ಲಾನುಭವಿಗಳಿಂದ ತಲಾ 100 ಪೀಕಲಾಗುತ್ತಿದೆ.

ಸೇವೆಗಾಗಿ ಜಾಗ ಸುಲಿಗೆಗಲ್ಲ: ಕೆನಾರಾ ಬ್ಯಾಂಕ್‌ ವ್ಯವಸ್ಥಾಪಕಿ ಭ್ಯಾಗ್ಯಲಕ್ಷ್ಮೀ ಬ್ಯಾಂಕಿನ ಆವರಣದಲ್ಲೇ ಸುಲಿಗೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಇಲ್ಲಿ ಸೇವೆಗೆ ಮಾತ್ರ ಅವಕಾಶ ಸುಲಿಗೆಗೆ ಅಲ್ಲ ಎಂದು ಆಧಾರ್‌ ಸಿಬ್ಬಂದಿ ಕರೆದು ಛಿಮಾರಿ ಹಾಕಿದರು. ಗ್ರಾಹಕರಿಂದ 100 ರೂ. ಪಡೆಯುತ್ತಿರುವುದು ನಿಜ ರಸೀದಿ ಎಲ್ಲಿ ಎಂದಾಗ,

Advertisement

100 ರೂಗಳಲ್ಲಿ 25 ರೂ ಶುಲ್ಕ ಹಾಗೂ ಜಿ ಎಸ್‌ ಟಿ 5 ರೂ ಯಂತೆ ಲೆಕ್ಕ ಹಾಕಿ ಕಂಪನಿಯ ಖಾತೆ ಗೆ ಆಯಾ ದಿನದಲ್ಲೆ ಜಮಾ ಮಾಡಲಾಗುತ್ತಿದೆ ಎಂದಾಗ ಉಳಿದ 70 ರೂ ಎಲ್ಲಿ ಎಂದು ಅವರೆಂದಾಗ ಮಾಲಿಕರನ್ನೇ ಕೇಳಿ ಎಂಬ ಉತ್ತರ ಹೊರಬಿತ್ತು. ಯಾಕೆ ಈ ಪಾಟಿ ವಸೂಲಿ ಸುಲಿಗೆ ಎಂದು ಸಿಬ್ಬಂದಿಗೆ ದಬಾಯಿಸಿದರು. ಮೆಲಧಿಕಾರಿಯನ್ನು ವಿಚಾರಿಸುವುದಾಗಿ ತಿಳಿಸಿದರು.

ತಬ್ಬಿಬಾದ ಉಸ್ತುವಾರಿ: ತಕ್ಷಣ ಆಧಾರ್‌ದ ಉಸ್ತುವಾರಿ ವೀರಭದ್ರ ಸ್ವಾಮಿ ಸ್ಥಳಕ್ಕೆ ದೌಡಾಯಿಸಿ ಬಂದವರೆ ನಿಜ 100 ರೂ ಪಡೆಯಲಾಗಿದೆ ಅದು ತಪ್ಪು ನಾಳೆಯಿಂದ ಹೀಗಾಗಲು ಬಿಡುವುದಿಲ್ಲ ಎಂದರು. ಸರ್ಕಾರದ ಕೆಲಸಕ್ಕೂ ಜಿಎಸ್‌ಟಿ ಇದೆಯೇ ಎಂದು ಭಾಗ್ಯಲಕ್ಷ್ಮೀ ಪ್ರಶ್ನಿಸಿದಾಗ, ವೀರಭದ್ರಸ್ವಾಮಿ ತಡಬಡಾಯಿಸಿ ಕಲರ್‌ ಪ್ರಿಂಟ್‌ 50 ರೂ ಲ್ಯಾಮಿನೇಷನ್‌ ಗೆ 20 ರೂ ಸೇರಿಸಿ ಪಡೆಯಲಾಗುತ್ತಿದೆ, ಹಾಗದರೆ ಆ 70 ರೂಗಳಿಗೆ ಜಿ ಎಸ್‌ಟಿ ಯಾರು ಕಟ್ಟುತ್ತಾರೆ ಎಂಬ ಪ್ರಶ್ನೆಗೆ ನಿರುತ್ತರರಾದರು.

ಪರವಾನಗಿ ರದ್ದು: ಆಧಾರ್‌ ಗ್ರಾಹಕರಿಂದ 25 ರೂ ಪಡೆಯುವಲ್ಲಿ 100 ಪಡೆಯಲಾಗಿದೆ ಎಂಬ ದೂರು ಬಂದಲ್ಲಿ ಅವರ ಪರವಾನಗಿಯನ್ನು ರದ್ದು ಪಡಿಸಲಾಗುವುದು ಎಂದು ಆಧಾರ್‌ದ ಜಿಲ್ಲಾ ಸಂಯೋಜಕಿ ಲಕ್ಷ್ಮೀ ಉದಯವಾಣಿಗೆ ತಿಳಿಸಿದರು ಹಾಗಾದರೆ ನಂಜನಗೂಡು ಗ್ರಾಹಕರಿಂದ ನಿಮ್ಮ ಏಜನ್ಸಿಯವರು ತಲಾ 100 ವಸೂಲಿ ಮಾಡಿದ್ದಾರೆ  ಅವರ ಹಣ ಹಿಂತಿರುಗಿಸಿ ಎಂಬ ಪಶ್ನೆಗೆ ಮೌನವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next