Advertisement

ಆಧಾರ್‌ ಅಪ್‌ಡೇಟ್‌ ಇನ್ನು ದುಬಾರಿ: ಶೇ.18 ಜಿಎಸ್‌ಟಿ ಅನ್ವಯ

11:51 AM Feb 06, 2018 | udayavani editorial |

ಹೊಸದಿಲ್ಲಿ : ಆಧಾರ್‌ ಕಾರ್ಡ್‌ ಅಪ್‌ಡೇಟ್‌ಗೆ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ಈಗಿನ್ನು ಶೇ.18 ಜಿಎಸ್‌ಟಿ ವಿಧಿಸಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

Advertisement

ಆಧಾರ್‌ ಕಾರ್ಡ್‌ನಲ್ಲಿನ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಮೊಬೈಲ್‌ ಸಂಖ್ಯೆ, ಲಿಂಗ್‌ ಮತ್ತು ಇಮೇಲ್‌ ಇತ್ಯಾದಿ ಡೆಮೋಗ್ರಾಫಿಕ್‌ ವಿವರಗಳನ್ನು ಅಪ್‌ಡೇಟ್‌ ಮಾಡಲು ಪ್ರಕೃತ 25 ರೂ. ಶುಲ್ಕ ವಿಧಿಸುತ್ತಿದೆ. ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡಲೂ ಕೂಡ ಇಷ್ಟೇ ಶುಲ್ಕವನ್ನು ವಿಧಿಸಲಾಗುತ್ತದೆ. 

ಹಾಗಿದ್ದರೂ ಹೊಸದಾಗಿ ಆಧಾರ್‌ ಕಾರ್ಡ್‌ ಮಾಡಿಸುವುದು ಮತ್ತು ಮಕ್ಕಳ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡಿಸಿಕೊಳ್ಳುವುದು ಈಗಲೂ ಉಚಿತವಾಗಿಯೇ ಇದೆ. 

ಆಧಾರ್‌ ಸೇವಾ ಕೇಂದ್ರದವರು ಜನರಿಗೆ ಹೆಚ್ಚು ಮೊತ್ತದ ಶುಲ್ಕ ವಿಧಿಸದಂತೆ ನೋಡಿಕೊಳ್ಳಲು ಯುಐಡಿಎಐ – ಕಂಪ್ಲಾಯಂಟ್‌ ಫೋರಮ್‌ ರೂಪಿಸಿದ್ದು  ಸಂತ್ರಸ್ತ ಜನರು ಈ ಬಗ್ಗೆ 1947 (ಟೋಲ್‌ ಫ್ರೀ) ಸಂಖ್ಯೆಗೆ ಕರೆ ಮಾಡಿ ದೂರಬಹುದಾಗಿದೆ ಇಲ್ಲವೇ ಹೆಲ್ಪ್ ಗೆ ಬರೆಯಬಹುದಾಗಿದೆ.

ಆಧಾರ್‌ ಗುರುತುಪತ್ರ ದೃಢೀಕರಣಕ್ಕೆ ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ: 1. ಪಾಸ್‌ ಪೋರ್ಟ್‌, 2 ಪ್ಯಾನ್‌ ಕಾರ್ಡ್‌, 3. ರೇಶನ್‌/ಪಿಡಿಎಸ್‌ ಫೋಟೋ ಕಾರ್ಡ್‌, 4. ವೋಟರ್‌ ಕಾರ್ಡ್‌, 5. ಡ್ರೈವಿಂಗ್‌ ಲೈಸನ್ಸ್‌, 6. ಸರಕಾರಿ ಫೋಟೋ ಐಡಿ ಕಾರ್ಡ್‌/ಪಿಎಸ್‌ಯು ನೀಡಿರುವ ಸರ್ವಿಸ್‌ ಫೋಟೋ ಐಡಿ ಕಾರ್ಡ್‌,

Advertisement

ಎನ್‌ಆರ್‌ಇಜಿಎಸ್‌ ಜಾಬ್‌ ಕಾರ್ಡ್‌, ಮ್ಯಾನತೆ ಪಡೆದ ಶಿಕ್ಷಣಾಲಯ ನೀಡಿರುವ ಫೋಟೋ ಐಡಿ ಕಾರ್ಡ್‌, ಶಸ್ತ್ರಾಸ್ತ್ರ ಪರವಾನಿಗೆ, ಫೋಟೋ ಕ್ರೆಡಿಟ್‌ ಕಾರ್ಡ್‌, ಫೋಟೋ ಬ್ಯಾಂಕ್‌ ಎಟಿಎಂ ಕಾರ್ಡ್‌, ಪೆನ್‌ಶನರ್‌ ಫೋಟೋ ಕಾರ್ಡ್‌, ಫ್ರೀಡಂ ಫೈಟರ್‌ ಕಾರ್ಡ್‌, ಕಿಸಾನ್‌ ಫೋಟೋ ಪಾಸ್‌ ಬುಕ್‌, ಸಿಜಿಎಚ್‌ಎಸ್‌/ಇಸಿಎಚ್‌ಎಸ್‌ ಫೋಟೋ ಕಾರ್ಡ್‌ ಇತ್ಯಾದಿ.

Advertisement

Udayavani is now on Telegram. Click here to join our channel and stay updated with the latest news.

Next