Advertisement

ಪ್ರಗತಿ ಪಥದ ಹೊಸ ತಿರುವೇ ಆಧಾರ್‌

11:04 AM Apr 10, 2017 | Team Udayavani |

ನವದೆಹಲಿ: ಭಾರತವು ಡಿಜಿಟಲ್‌ ಕ್ರಾಂತಿಯ ತುತ್ತತುದಿಯಲ್ಲಿದ್ದು, ಆಧಾರ್‌ ಕಾರ್ಡ್‌ ಯೋಜನೆಯೆಂಬುದು ದೇಶದ ಅಭಿವೃದ್ಧಿಯ ಹಾದಿಯಲ್ಲಿನ ಹೊಸ ತಿರುವು ಆಗಿದೆ ಎಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಭಾನುವಾರ ಕೇಂದ್ರ ಸರ್ಕಾರದ ಲಕ್ಕಿ ಗ್ರಾಹಕ ಯೋಜನೆ ಮತ್ತು ಡಿಜಿ ಧನ ವ್ಯಾಪಾರ ಯೋಜನೆಯ ಮೆಗಾ ಡ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ. “ಭಾರತವು ಆಲಿಂಗಿಸಿಕೊಂಡಿರುವ ಡಿಜಿಟಲ್‌ ಪಾವತಿ ಚಳವಳಿಯ ಭಾಗವಾಗಿರುವುದಕ್ಕೆ ನಾನು ಸಂತೋಷ ಪಡುತ್ತೇನೆ. ಕಡಿಮೆ ನಗದಿನ ಸಮಾಜ ರೂಪುಗೊಳ್ಳಬೇಕೆಂದರೆ ಇನ್ನೂ ದೀರ್ಘ‌ಕಾಲ ಬೇಕು. ಆದರೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಟ್ಟಿರುವ ಹೆಜ್ಜೆಯನ್ನು ಶ್ಲಾ ಸಲೇಬೇಕು. ಇದೇ ವೇಳೆ, ಚಲಾವಣೆಯಲ್ಲಿರುವ ನಗದಿನ ಪ್ರಮಾಣವನ್ನು ತಗ್ಗಿಸುವ ಮತ್ತು ಸುರಕ್ಷಿತ ಡಿಜಿಟಲ್‌ ಪಾವತಿ ವ್ಯವಸ್ಥೆ ಜಾರಿಮಾಡುವ ಅಗತ್ಯವಿದೆ,’ ಎಂದಿದ್ದಾರೆ ಪ್ರಣಬ್‌.

ಇದೇ ಸಂದರ್ಭದಲ್ಲಿ ಆಧಾರ್‌ ಕುರಿತೂ ಪ್ರಸ್ತಾಪಿಸಿದ ಅವರು, “ಸುಮಾರು 100 ಕೋಟಿ ಭಾರತೀಯರು ಈಗಾಗಲೇ ಆಧಾರ್‌ ಸಂಖ್ಯೆ ಪಡೆದಿದ್ದಾರೆ. ಕಡಿಮೆ ಜನಸಂಖ್ಯೆಯಿರುವ, ಸುಧಾರಿತ ತಂತ್ರಜ್ಞಾನ ಹೊಂದಿರುವ ರಾಷ್ಟ್ರಗಳಲ್ಲೂ ಇಂತಹುದೊಂದು ವ್ಯವಸ್ಥೆಯಿಲ್ಲ. ಆಧಾರ್‌ ಕಾರ್ಡ್‌ ಎನ್ನುವುದು ದೇಶದ ಅಭಿವೃದ್ಧಿಯ ಪಥದಲ್ಲಿನ ಕವಲುಗೆರೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next