Advertisement

2018ರ ನೀಟ್‌ ಪರೀಕ್ಷೆಗೆ ಆಧಾರ್‌ ಕಡ್ಡಾಯ ಇಲ್ಲ: ಸುಪ್ರೀಂ

04:35 PM Mar 07, 2018 | Team Udayavani |

ಹೊಸದಿಲ್ಲಿ  : 2018 ನೀಟ್‌ ಮತ್ತು ಇತರ ಅಖೀಲ ಭಾರತ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳ ನೋಂದಾವಣೆಗೆ  ಆಧಾರ್‌ ನಂಬರ್‌ ಕಡ್ಡಾಯ ಮಾಡ ಕೂಡದು ಎಂದು ಸುಪ್ರೀಂ ಕೋರ್ಟ್‌ , ಸಿಬಿಎಸ್‌ಇ ಗೆ ನಿರ್ದೇಶ ನೀಡಿದೆ. 

Advertisement

ಚೀಫ್ ಜಸ್ಟಿಸ್‌ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ, ಸಿಬಿಎಸ್‌ಇಗೆ ತನ್ನ ವೆಬ್‌ ಸೈಟಿನಲ್ಲಿ  ನೀಟ್‌ 2018ರ ಅಭ್ಯರ್ಥಿ ನೋಂದಾವಣೆ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಬೇಕೆಂದು ಸೂಚಿಸಿತು.

ಇದಕ್ಕೆ ಮೊದಲು ಯುಐಡಿಎಐ (ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ) ತಾನು ಸಿಬಿಎಸ್‌ಇಗೆ 2018ರ ನೀಟ್‌ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳ ನೋಂದಾವಣೆಗೆ  ಆಧಾರ್‌ ನಂಬರ್‌ ಕಡ್ಡಾಯ ಮಾಡುವಂತೆ ತಾನು ಹೇಳಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next