Advertisement

ಮತದಾನ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಕಡ್ಡಾಯ

04:54 PM Jul 26, 2022 | Team Udayavani |

ರಾಯಚೂರು: ಸಾರ್ವಜನಿಕರು ಮತದಾನದ ಗುರುತಿನ ಚೀಟಿಗೆ ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಕಡ್ಡಾಯವಾಗಿ ನೋಂದಣಿ ಮಾಡಿಸುವ ಪ್ರಕ್ರಿಯೆಗೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಅಗತ್ಯ ನೆರವು ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ| ಕೆ.ಆರ್‌.ದುರುಗೇಶ್‌ ತಿಳಿಸಿದರು.

Advertisement

ನಗರದ ಡಿಸಿ ಕಚೇರಿಯ ವಿಡಿಯೋ ಕಾನ್ಪರೆನ್ಸ್‌ ಸಭಾಂಗಣದಲ್ಲಿ ಸೋಮವಾರ ಕೇಂದ್ರ ಚುನಾವಣೆ ಆಯೋಗ ಆದೇಶದ ಪ್ರಕಾರ ಗುರುತಿನ ಚೀಟಿಗೆ ಆಧಾರ್‌ ನೋಂದಣಿಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದರು.

ಆ.1ರಿಂದ ಡಿ.31ವರೆಗೆ ಹೊಸ ಮತದಾರರು ಸೇರ್ಪಡೆ ಹಾಗೂ ಮತದಾನ ಗುರುತಿನ ಚೀಟಿಗೆ ಆಧಾರ್‌ ನೋಂದಣಿ ಮಾಡಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಿಇಒ, ಡಿಇಒ ಹಾಗೂ ಇಆರ್‌ಒಗಳ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಮತ್ತು ವಿಶೇಷ ಶಿಬಿರಗಳನ್ನು ನಡೆಸಲಾಗುವುದು. ಇದಕ್ಕೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸರ್ಕಾರೇತರ ಸಂಸ್ಥೆ (ಎನ್‌ ಜಿಒ) ಗಳು ಸಹಕರಿಸಬೇಕು ಎಂದರು.

ಕೇಂದ್ರ ಹಾಗೂ ರಾಜ್ಯ ಚುನಾವಣೆ ಆದೇಶ ಪ್ರಕಾರ ಮತದಾನ ಗುರುತಿನ ಚೀಟಿಗೆ ಆಧಾರ್‌ ನೋಂದಣಿ ಮಾಡುವುದು ಕಡ್ಡಾಯ. ಗರುಡ ಮತ್ತು ವಿಎಚ್‌ ಆ್ಯಪ್‌ಗ್ಳ ಮೂಲಕ ನೋಂದಣಿ ಮಾಡುವಂತೆ ಸಾರ್ವಜನಿಕರಿಗೆ ಸಲಹೆ ನೀಡಬೇಕು. ಅಲ್ಲದೆ ಈ ಕುರಿತು ಮುಂದಿನ ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಆಫ್‌ಲೈನ್‌ನಲ್ಲಿ 6ಬಿ ಫಾರಂನಲ್ಲಿ ಮತದಾರರಿಂದ ಸ್ವಯಂ ಪ್ರೇರಣೆ ಮೂಲಕ ಆಧಾರ್‌ ಸಂಖ್ಯೆ ಸಂಗ್ರಹಿಸಲು ಮನೆ-ಮನೆಗೆ ಬಿಎಲ್‌ ಒಗಳನ್ನು ನೇಮಿಸುತ್ತೇವೆ. ಆಧಾರ್‌ ಕಾರ್ಡ್‌ ಎಲ್ಲ ಭಾರತೀಯ ನಾಗರಿಕರಿಗೆ ಅತ್ಯಗತ್ಯ ದಾಖಲೆಯಾಗಿದೆ. ಇದು ಗುರುತಿನ ಪ್ರಾಥಮಿಕ ರೂಪವಾಗಿದೆ. ಮತ್ತು ಡ್ರೈವಿಂಗ್‌ ಲೈಸೆನ್ಸ್‌, ಪ್ರಯಾಣ ಟಿಕೆಟ್‌ಗಳು ಮತ್ತು ಮುಂತಾದ ಸೇವೆಗಳ ಸಮೂಹ ಪಡೆಯುವ ಅಗತ್ಯವಿದೆ ಎಂದರು. ವಿವಿಧ ಪಕ್ಷದ ವಕ್ತಾರರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next