Advertisement
ಜೈಪುರದಲ್ಲಿ ನಡೆಯುತ್ತಿರುವ ಸಾಹಿತ್ಯೋತ್ಸವದಲ್ಲಿ ಲೇಖಕ ಪಂಕಜ್ ದುಬೆ ಈ ಮಾಹಿತಿ ನೀಡಿದ್ದಾರೆ. ಅದರ ಜತೆಗೆ “ಮಿತ್ರೋಂ’, “ನೋಟ್ ಬಂದಿ’,” ಗೋ ರಕ್ಷಕ್’ ಶಬ್ದಗಳನ್ನು ಆಯ್ಕೆ ಮಾಡಿ ಪರಿಶೀಲನೆಗೆ ಒಳಪಡಿಸಲಾಗಿತ್ತು. ಆದರೆ ಆಧಾರ್ ಕಾರ್ಡ್ ಬಗ್ಗೆ ಎಲ್ಲರೂ ಮಾತನಾಡುತ್ತಿರುವುದರಿಂದ ಮತ್ತು ಬಹುವಾಗಿ ಚರ್ಚೆಗೆ ಒಳಗಾಗಿದ್ದರಿಂದ ಅದನ್ನು “ವರ್ಷದ ಪದ’ ಎಂದು ಆಯ್ಕೆ ಮಾಡಲಾಯಿತು ಎಂದು ದುಬೆ ವಿವರಿಸಿದರು. “ಸ್ಲಿàಪ್‌ಅವಸ್ತಾ’ (ನಿದ್ರಾವಸ್ಥೆ), “ಮೌಕತಾರಿಯನ್’ (ಅವಕಾಶವಾದಿ) ಎಂಬ ಹೊಸ ಶಬ್ದಗಳನ್ನು ರಚಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಎಂದು ದುಬೆ ಪ್ರತಿಪಾದಿಸಿದರು. ಆದರೆ ಮತ್ತೂಬ್ಬ ಬರಹಗಾರ್ತಿ ಚಿತ್ರಾ ಮುದ್ಗಲ್ ಅದಕ್ಕೆ ಆಕ್ಷೇಪಿಸಿ, ಸರಿಯಾದ ರೀತಿಯಲ್ಲೇ ಶಬ್ದಗಳ ಉಚ್ಚಾರಣೆ ನಡೆಯಬೇಕು ಎಂದರು. ಕವಿ ಮತ್ತು ಲೇಖಕ ಅಶೋಕ್ ವಾಜಪೇಯಿ, ರಾಜಕಾರಣಿಗಳು ಬಳಕೆ ಮಾಡುವ “ಮಿತ್ರೋಂ’ ಎಂಬ ಶಬ್ದ ವ್ಯಾಕರಣ ಪ್ರಕಾರ ಸರಿಯಾದುದಲ್ಲ ಎಂದರು. ಈ ಮೂಲಕ ಪರೋಕ್ಷವಾಗಿ ಪ್ರಧಾನಿ ಮೋದಿಯವರು ಬಳಸುವ ಪದಕ್ಕೆ ಆಕ್ಷೇಪಿಸಿದ್ದಾರೆ.
Advertisement
2017ರ ವರ್ಷದ ಪದ “ಆಧಾರ್’
11:22 AM Jan 28, 2018 | |
Advertisement
Udayavani is now on Telegram. Click here to join our channel and stay updated with the latest news.