Advertisement
ಅದು ಹೇಗೆ ಗೊತ್ತೇ?ಪ್ರಾಧಿಕಾರದ ವೆಬ್‌ಸೈಟ್ uidai.gov.in ಲಾಗ್‌ಇನ್ ಆಗಬೇಕು. ಅದರಲ್ಲಿ ಆಧಾರ್ ಸರ್ವಿಸಸ್ ಎಂಬ ಆಯ್ಕೆಯಲ್ಲಿ ಆಧಾರ್ ಅಥೆಂಟಿಕೇಷನ್ ಹಿಸ್ಟ್ರಿ ಆಯ್ಕೆ ಸಿಗುತ್ತದೆ. ಅದನ್ನು ಕ್ಲಿಕ್ ಮಾಡಿ, ಆಧಾರ್ ನಂಬರ್ ನಮೂದಿಸಬೇಕು. ಕೂಡಲೇ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ಬರೆದ ತಕ್ಷಣ, 7 ತಿಂಗಳ ಅವಧಿಯಲ್ಲಿ ಯಾವ ಸೇವೆಗಳಿಗೆ ಆಧಾರ್ ಲಿಂಕ್ ಮಾಡಿದ್ದೀರಿ ಎಂಬ ಮಾಹಿತಿ ಸಿಗುತ್ತದೆ. ಸಂಶಯ ಕಂಡುಬಂದರೆ ಸಹಾಯವಾಣಿ 1947ಕ್ಕೆ ದೂರು ಸಲ್ಲಿಸಬಹುದು.