Advertisement
ಜನವರಿ 1ರಿಂದ ಜಿಎಸ್‌ಟಿ ನೋಂದಣಿ ಸಂಖ್ಯೆ ಪಡೆಯುವವರಿಗೆ ಇದು ಅನ್ವಯವಾಗುತ್ತದೆ. ಆಧಾರ್ ಸಲ್ಲಿಸದಿದ್ದರೆ ಭೌತಿಕವಾಗಿ ವ್ಯಾಪಾರ – ವ್ಯವಹಾರದ ಸ್ಥಳ, ಸ್ವರೂಪ ಪರಿಶೀಲನೆ ಬಳಿಕವಷ್ಟೇ ಜಿಎಸ್‌ಟಿ ನೋಂದಣಿ ಸಂಖ್ಯೆ ಮಂಜೂರಾಗಲಿದೆ ಎಂದು ಜಿಎಸ್‌ಟಿ ನೆಟ್‌ವರ್ಕ್ ಸಚಿವರ ತಂಡದ ಮುಖ್ಯಸ್ಥರಾದ ಬಿಹಾರ ಡಿಸಿಎಂ ಸುಶೀಲ್ ಮೋದಿ ಹೇಳಿದ್ದಾರೆ.
ಈಗಾಗಲೇ ನೋಂದಣಿ ಯಾಗಿರುವ ಡೀಲರ್‌ಗಳಿಗೂ ಆಧಾರ್ ಸಲ್ಲಿಕೆ ಕಡ್ಡಾಯ ಮಾಡ ಲಾಗುವುದು. ಇದ ರಿಂದ ಅನಧಿಕೃತ ನೋಂದಣಿ ಗಳ ಪತ್ತೆ, ನಿಯಂತ್ರಣ ಸಾಧ್ಯ ವಾಗ ಲಿದೆ ಎಂದರು.
Related Articles
ವ್ಯಾಪಾರ- ವಹಿವಾಟುದಾರರ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ವಿಚಾರದಲ್ಲಿ, ಸೆ.24ರಿಂದ ಆನ್‌ಲೈನ್ ಮೂಲಕವೇ ಏಕ ಮೂಲದಡಿ ಇದರ ಮರುಪಾವತಿ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.
Advertisement
ಆಟೊಮೊಬೈಲ್ ಜಿಎಸ್‌ಟಿ ಇಳಿಕೆ ಕಷ್ಟಆಟೊಮೊಬೈಲ್ ಸಹಿತ ಶೇ.28 ಜಿಎಸ್‌ಟಿ ವ್ಯಾಪ್ತಿಯ ಸರಕುಗಳ ತೆರಿಗೆ ಇಳಿಕೆ ಪ್ರಸ್ತಾವ ಸೆ.20ರ ಜಿಎಸ್‌ಟಿ ಕೌನ್ಸಿಲ್ ಸಭೆಯ ವಿಷಯ ಪಟ್ಟಿಯಲ್ಲಿಲ್ಲ. ರಾಜ್ಯಗಳಿಗೂ ತೆರಿಗೆ ಇಳಿಸುವ ಇಂಗಿತವಿಲ್ಲ ಎಂದು ಸುಶೀಲ್ ಹೇಳಿದರು. ಇ-ವೇ ಬಿಲ್ ಸ್ಥಗಿತ: ಎಚ್ಚರಿಕೆ
ಸತತ ಎರಡು ತಿಂಗಳು 3ಬಿ (ವಹಿವಾಟು ವಿವರ), ಆರ್1 (ಮಾರಾಟ ವಿವರ) ರಿಟರ್ನ್ಸ್ ಸಲ್ಲಿಸದವರ ಇ-ವೇ ಬಿಲ್ ವ್ಯವಸ್ಥೆ ಸ್ಥಗಿತಗೊಳಿಸಲು ಸಿದ್ಧತೆ ನಡೆದಿದೆ. ದೇಶಾದ್ಯಂತ 27.22 ಲಕ್ಷ ಮಂದಿ ಜೂನ್, ಜುಲೈ ರಿಟರ್ನ್ಸ್
ಸಲ್ಲಿಸಿಲ್ಲ. ಆದರೂ 5.25 ಲಕ್ಷ ಮಂದಿ ಇ-ವೇ ಬಿಲ್ ಬಳಸುತ್ತಿದ್ದಾರೆ. ಕರ್ನಾಟಕದಲ್ಲಿ 1,75,294 ಡೀಲರ್‌ಗಳು ಸತತ 2 ತಿಂಗಳು ರಿಟರ್ನ್ಸ್
ಸಲ್ಲಿಸಿಲ್ಲ. ಈ ಪೈಕಿ 35,033 ಮಂದಿ ಇ-ವೇ ಬಿಲ್ ಬಳಸುತ್ತಿ ದ್ದಾರೆ. ಈ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಲಾಗುತ್ತಿದೆ. ಸ್ಪಂದಿಸದಿದ್ದರೆ ಇ-ವೇ ಬಿಲ್ ಸ್ಥಗಿತವಾಗಲಿದೆ ಎಂದರು.