Advertisement

5 ಅಡಿ ಗೋಡೆಗಳ ನಡುವೆ ಆಧಾರ್‌ ಮಾಹಿತಿ ಸುರಕ್ಷಿತ!

06:00 AM Mar 22, 2018 | Team Udayavani |

ಹೊಸದಿಲ್ಲಿ: ದೇಶದ ಎಲ್ಲಾ ನಾಗರಿಕರ ಆಧಾರ್‌ ಮಾಹಿತಿಗಳು 13 ಅಡಿ ಎತ್ತರದ ಕಟ್ಟಡವೊಂದರ 5 ಅಡಿ ದಪ್ಪದ ಗೋಡೆಗಳ ನಡುವೆ ಸುರಕ್ಷಿತವಾಗಿದೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. 

Advertisement

ದಿಲ್ಲಿಯ ಮನೇಸರ್‌ನಲ್ಲಿರುವ ಆಧಾರ್‌ ಮಾಹಿತಿ ಸಂರಕ್ಷಣಾ ಕೇಂದ್ರದ ಕಟ್ಟಡದ 4 ನಿಮಿಷಗಳ ವಿಡಿಯೋ ಕ್ಲಿಪ್‌ ಅನ್ನು ನ್ಯಾಯಪೀಠದಲ್ಲಿದ್ದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರುಳ್ಳ ನೇತೃತ್ವದ ನ್ಯಾಯಪೀಠದ ಪ್ರದರ್ಶಿಸಿದ ವೇಣುಗೋಪಾಲ್‌, ಆಧಾರ್‌ ಮಾಹಿತಿ ಸುರಕ್ಷಿತವಾಗಿದೆ ಎಂದಿದ್ದಾರೆ. 

ವಿಚಾರಣೆ ವೇಳೆ, ನಾಗರಿಕರ ಗುರುತು ಪತ್ತೆಯ ಉದ್ದೇಶಕ್ಕಾಗಿಯೇ ಆಧಾರ್‌ ನೀಡಿರುವಾಗ, ಆ ಆಧಾರ್‌ ಸಂಖ್ಯೆಗೆ ನಾಗರಿಕರ ಇತರ ಮಾಹಿತಿಗಳನ್ನು ಸೇರಿಸಿ, ಅದನ್ನು ಕೇಂದ್ರೀಕೃತ ಕೋಶದಲ್ಲಿ ಸಂಗ್ರಹಿಸಿಡುವ ಅಗತ್ಯವೇನಿದೆ ಎಂದು ನ್ಯಾಯಪೀಠ ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ವೇಣುಗೋಪಾಲ್‌, ಭಾರತೀಯ ವಿಶೇಷ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಮುಖ್ಯಸ್ಥ ಅಜಯ್‌ ಭೂಷಣ್‌ ಪಾಂಡೆ, ಎಲ್ಲಾ ಪ್ರಶ್ನೆಗಳಿಗೆ ಗುರುವಾರ, ಪವರ್‌ ಪಾಯಿಂಟ್‌ ಪ್ರಸೆಂಟೇಷನ್‌ ಮೂಲಕ ಉತ್ತರಿಸಲಿದ್ದಾರೆ ಎಂದು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next