Advertisement

ಸ್ಪಾ, ಸೆಲೂನ್‌ಗೆ ಹೋಗಲು ಆಧಾರ್‌ ಕಡ್ಡಾಯ

02:58 AM Jun 03, 2020 | Sriram |

ಚೆನ್ನೈ: ತಮಿಳುನಾಡಿನಾದ್ಯಂತ ಇರುವ ಸಲೂನ್‌ಗಳು, ಬ್ಯೂಟಿ ಪಾರ್ಲರ್‌ಗಳು, ಸ್ಪಾಗಳಿಗೆ ಹೋಗುವ ವರು ತಮ್ಮ ಆಧಾರ್‌ ಸಂಖ್ಯೆ, ಮೊಬೈಲ್‌ ನಂಬರ್‌ ನೀಡಬೇಕು. ಹೀಗೆಂದು ತಮಿಳುನಾಡು ಸರಕಾರ ಬಿಡುಗಡೆ ಮಾಡಲಾಗಿರುವ ನಿರ್ದಿಷ್ಟ ಕಾರ್ಯ ಸೂಚಿ (ಎಸ್‌ಒಪಿ)ಯಲ್ಲಿ ಉಲ್ಲೇಖೀಸಲಾ ಗಿದೆ. ಇದರ ಜತೆಗೆ ಮಳಿಗೆಗೆ ಭೇಟಿ ನೀಡಿದ ಗ್ರಾಹಕರ ಹೆಸರು, ವಿಳಾಸವನ್ನು ಬರೆದು ಇರಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

Advertisement

ಲಾಕ್‌ಡೌನ್‌ ನಿಯಮಗಳನ್ನು ಸರಳಗೊಳಿ ಸಿದ ಬಳಿಕ ಆಂಶಿಕವಾಗಿ ವಾಣಿಜ್ಯ ಮಳಿಗೆ ಗಳು ತೆರೆದಿರುವ ಹಿನ್ನೆಲೆಯಲ್ಲಿ ಮತ್ತು ಬಸ್‌ ಸಂಚಾರ ಶುರುವಾಗಿರುವ ಹಿನ್ನೆಲೆಯಲ್ಲಿ ಸಮಗ್ರವಾಗಿ ಎಸ್‌ಒಪಿ ಬಿಡುಗಡೆ ಮಾಡಲಾಗಿದೆ. ಇದರ ಜತೆಗೆ ದೇಶದಲ್ಲಿ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ತಮಿಳುನಾಡು ದ್ವಿತೀಯ ಸ್ಥಾನದಲ್ಲಿದೆ. ಹೀಗಾಗಿ, ಸ್ಪಾ, ಸಲೂನ್‌, ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡಿದವರ ವಿವರ ದಾಖಲಿಸಿಕೊಳ್ಳಬೇಕೆಂದು ತಾಕೀತು ಮಾಡಲಾಗಿದೆ.

ಇಂಥ ಕ್ರಮದ ಮೂಲಕ ಕೋವಿಡ್-19 ಸೋಂಕಿತರನ್ನು ಪತ್ತೆ ಮಾಡಲು ನೆರವಾಗಲಿದೆ ಎಂದು ತಮಿಳುನಾಡು ಕಂದಾಯ ಮತ್ತು ವಿಪತ್ತು ನಿರ್ವಹಣಾ ಆಯುಕ್ತ ಜೆ.ರಾಧಾ ಕೃಷ್ಣನ್‌ ಎಲ್ಲಾ ಚೆನ್ನೈ ಮಹಾನಗರ ಪಾಲಿಕೆ ಮತ್ತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಒಟ್ಟು ಏಳು ಪುಟಗಳ ನಿರ್ದಿಷ್ಟ ಕಾರ್ಯಸೂಚಿ
(ಎಸ್‌ಒಪಿ)ಯಲ್ಲಿ ಸಲೂನ್‌, ಬ್ಯೂಟಿ ಪಾರ್ಲರ್‌, ಸ್ಪಾಗಳಲ್ಲಿ ಕೆಲಸ ಮಾಡುವವರು ಗ್ಲೌಸ್‌, ಮಾಸ್ಕ್ ಧರಿಸಬೇಕು. ಗ್ರಾಹಕರನ್ನು ಮುಟ್ಟುವ ಮೊದಲು ಕೈಗಳನ್ನು ಕಡ್ಡಾಯ ವಾಗಿ ತೊಳೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಇದರ ಜತೆಗೆ ನ್ಯಾಪ್‌ಕಿನ್‌, ಬ್ಲೇಡ್‌ಗಳನ್ನು ಮರು ಬಳಕೆ ಮಾಡು ವಂತೆಯೇ ಇಲ್ಲ. ಶೀತ- ನೆಗಡಿ, ಜ್ವರದಿಂದ ಬಳತ್ತಿರುವ ಕೆಲಸಗಾರರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡು ವಂತೆಯೇ ಇಲ್ಲ ವೆಂದು, ಅಂಥವರು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ- ಸಲಹೆ ಪಡೆದುಕೊಳ್ಳ ಬೇಕು ಎಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next