Advertisement

ಆಧಾರ್‌ ಕಾರ್ಡ್‌: ಬಗೆಹರಿಯದ ಸಮಸ್ಯೆ

08:20 AM Nov 17, 2019 | Team Udayavani |

ವಿಟ್ಲ: ಆಧಾರ್‌ ಕಾರ್ಡ್‌ ಸಮಸ್ಯೆ ಇನ್ನೂ ಬಗೆಹರಿಯಲಿಲ್ಲ. ಸರ್ವರ್‌ ಸಮಸ್ಯೆಯೂ ಇದೆ. ನಾಗರಿಕರ ಓಡಾಟ ನಿರಂತರವಾಗಿ ಮುಂದುವರಿದಿದೆ. ಉದಯವಾಣಿ ಸುದಿನದಲ್ಲಿ ಪ್ರಕಟವಾದ ವರದಿ ಗಮನಿಸಿದ ಓದುಗರು ಒಂದಿ ಲ್ಲೊಂದು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುತ್ತಲೇ ಇದ್ದಾರೆ. ಆದರೆ ಅಂಚೆ ಇಲಾಖೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲೆಗಳಲ್ಲಿ ಅದಾಲತ್‌ ನಡೆಸಿ, ಆಧಾರ್‌ ಕಾರ್ಡ್‌ ಪಡೆಯಲು ಮತ್ತು ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳುತ್ತಿದೆ.

Advertisement

7 ಬಾರಿ ಓಡಾಡಿದರೂ ಇನ್ನೂ ಕಾರ್ಡ್‌ ಆಗಿಲ್ಲ
ವಿಟ್ಲ ಸಮೀಪದ ನಿವಾಸಿ ಪ್ರಶಾಂತಿ ಎಸ್‌. ಅವರು ಆಧಾರ್‌ ಕಾರ್ಡ್‌ಗಾಗಿ ಏಳು ಬಾರಿ ಓಡಾಡಿದ್ದಾರೆ. ಇನ್ನೂ ಕಾರ್ಡ್‌ ದಾಖಲೆ ಓಕೆಯಾಗಲಿಲ್ಲ. ಆರಂಭದಲ್ಲಿ ಅವರು ತನ್ನ ಮಾವನ ಜತೆಗೆ ಆಧಾರ್‌ ಕೇಂದ್ರಕ್ಕೆ (ವಿಟ್ಲ) ತೆರಳಿದ್ದರು. ಮಾವನ ದಾಖಲೆ ನೀಡಿದ ಬಳಿಕ ತನ್ನ ದಾಖಲೆ ಒದಗಿಸಿ, ಮನೆಗೆ ಹಿಂದಿರುಗಿದ್ದರು. ಆಮೇಲೆ ಮಾವನ ಕಾರ್ಡ್‌ ಮನೆಗೆ ತಲುಪಿದೆ. ಈಕೆಗೆ ಸಿಗಲಿಲ್ಲ. ಕಾರಣ ಕೇಳಿ ಆಧಾರ್‌ ಕೇಂದ್ರಕ್ಕೆ ಮತ್ತೆ ತೆರಳಿ ದಾಖಲೆ ನೀಡಿದರು. ಪ್ರಯೋಜನವಾಗಲಿಲ್ಲ. ಈ ಮಧ್ಯೆ ಮಾವನವರು ನಿಧನ ಹೊಂದಿ ದರು. ತಿಂಗಳ ಬಳಿಕ ಮತ್ತೆ ಮಂಗಳೂರಿನ ಕೇಂದ್ರಕ್ಕೆ ತೆರಳಿದರು. ಸಿಗಲಿಲ್ಲ. ಹತ್ತು ದಿನಗಳ ಹಿಂದೆ ಮಂಗಳೂರು ಕೇಂದ್ರಕ್ಕೆ ಮತ್ತೆ ತೆರಳಿದಾಗ ಸಿಬಂದಿ ಆರಂಭದಲ್ಲಿ ಮಾವನ ಹಸ್ತದ ದಾಖಲೆಯನ್ನು ಸೊಸೆಯ ದಾಖಲೆಯಾಗಿ ಪರಿಗಣಿಸಿದ್ದು ಬೆಳಕಿಗೆ ಬಂತು. ಇದೀಗ ಮಾವನವರ ಮರಣ ಪ್ರಮಾಣಪತ್ರ ಇತ್ಯಾದಿ ದಾಖಲೆಗಳನ್ನು ಕೊಂಡೊಯ್ಯಲು ಹೇಳಿದ್ದು, ಇನ್ನೇನು ಕಾದಿದೆಯೋ ಎಂದು ಕೊರಗುತ್ತಿದ್ದಾರೆ.

ಶಾಲೆಗೆ ಬೇಕು
ವಿಟ್ಲ ಅಂಚೆ ಕಚೇರಿಯಲ್ಲಿ ಸರದಿ ಸಾಲಲ್ಲಿ ನಿಲ್ಲಬೇಕಾದ ಸ್ಥಿತಿಯ ವರದಿ ಉದಯವಾಣಿ ಸುದಿನದಲ್ಲಿ ಪ್ರಕಟ ವಾದುದನ್ನು ಗಮನಿಸಿದ, ಎಲ್ಲ ಶಾಲೆ ಗಳ ಮುಖ್ಯಸ್ಥರು ಹೌಹಾರಿದ್ದಾರೆ. ಮಕ್ಕಳ ದಾಖಲೆಗೆ ಆಧಾರ್‌ ಪಡೆಯಲೇಬೇಕು. ಈಗಿನ ವ್ಯವಸ್ಥೆ ಗಮನಿಸಿದಾಗ ವಿದ್ಯಾ ರ್ಥಿಗಳ ಕಾರ್ಡ್‌ ತತ್‌ಕ್ಷಣ ಸಿಗುವುದು ಅಸಾಧ್ಯವೆಂದು ಅರಿವಾಗಿದೆ. ಇದೀಗ ಮುಖ್ಯೋಪಾಧ್ಯಾಯರು ಪುತ್ತೂರು ಅಂಚೆ ಕಚೇರಿಗೆ ತೆರಳಿ, ನಮ್ಮ ಶಾಲೆ ಯಲ್ಲಿ ಅದಾಲತ್‌ ಮಾಡಲು ಮನವಿ ಮಾಡಿದರು. ವಿಟ್ಲದ ಕೆಲವು ಶಾಲೆಗಳಲ್ಲಿ ಅದಾಲತ್‌ ನಡೆಯಿತು. ಆದರೆ ಹೆಚ್ಚು ನಾಗರಿಕರನ್ನು ಅದು ತಲುಪಲಿಲ್ಲ. ವಿಟ್ಲ ಮೇಗಿನ ಪೇಟೆ ಹಾರೈಝನ್‌ ಶಾಲೆಯ ಮುಖ್ಯಸ್ಥರೂ ಪುತ್ತೂರು ಅಂಚೆ ಇಲಾಖೆಗೆ ಮನವಿ ಮಾಡಿ ಬಂದಿದ್ದಾರೆ.

ನ.18-20: ವಿಟ್ಲ ಮಾದರಿ ಶಾಲೆಯಲ್ಲಿ ಅದಾಲತ್‌
ವಿಟ್ಲ ನಗರ ಬಿಜೆಪಿ ಮತ್ತು ಭಾರತೀಯ ಅಂಚೆ ಇಲಾಖೆ ಸಹಯೋಗದೊಂದಿಗೆ ನ. 18ರಿಂದ 20ರ ವರೆಗೆ ವಿಟ್ಲ ದ.ಕ. ಜಿ.ಪಂ. ಮಾ. ಹಿ.ಪ್ರಾ.ಶಾಲೆಯ ಶತಮಾನೋತ್ಸವ ಕಟ್ಟಡದಲ್ಲಿ ಆಧಾರ್‌ ಕಾರ್ಡ್‌ ಹೊಸ ಅರ್ಜಿ ಮತ್ತು ತಿದ್ದುಪಡಿಗಳ ಅದಾಲತ್‌ ನಡೆಯಲಿದೆ. ವಾಸ್ತವ್ಯದ ದಾಖಲೆ,
ಪಡಿತರ ಚೀಟಿ, ತಿದ್ದುಪಡಿಗೆ ಅವಶ್ಯ ದಾಖಲೆ ಹಾಜರುಪಡಿಸಿ, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ವಿಟ್ಲ ನಗರ ಬಿಜೆಪಿ ಪ್ರಕಟನೆ ತಿಳಿಸಿದೆ.

ಅದಾಲತ್‌ಗಳಿಗೆ ಪ್ರಚಾರ ಕೊಡಿ
ಆಧಾರ್‌ ಕಾರ್ಡ್‌ ಎಲ್ಲದಕ್ಕೂ ಬೇಕು. ಅದನ್ನು ನಾಗರಿಕರಿಗೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ವರ್‌ ಸಮಸ್ಯೆಯನ್ನೇ ಹೇಳುತ್ತ ಎಷ್ಟು ಕಾಲ ಮುಂದೂಡಬಹುದು ? ಇದಕ್ಕೆ ಸೂಕ್ತ ಪರಿಹಾರವನ್ನೂ ಇನ್ನೂ ಕಂಡುಹಿಡಿಯಲಿಲ್ಲ ಯಾಕೆ ? ಇದೀಗ ಅಲ್ಲಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಅದಾಲತ್‌ಗಳು ನಡೆಯುತ್ತವೆ. ಅದನ್ನು ನಡೆಸುವ ಸ್ಥಳ ಮತ್ತು ಸಮಯದ ಮಾಹಿತಿಯ ಬಗ್ಗೆ ಪ್ರಚಾರವೂ ಸಾಲುತ್ತಿಲ್ಲ. ಸಂಘಟಕರು ಆ ಬಗ್ಗೆ ಕ್ರಮ ಕೈಗೊಳ್ಳಬೇಕು.
– ಶ್ರೀಧರ ಕುಕ್ಕೆಮನೆ, ನ್ಯಾಯವಾದಿ

Advertisement

 ಅದಾಲತ್‌ ಮಾಹಿತಿ ಇಲ್ಲ
ವಿಟ್ಲ ಶಾಲೆಯಲ್ಲಿ ಅದಾಲತ್‌ ನಡೆಯುವ ಮಾಹಿತಿ ನಮಗೆ ಬಂದಿಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಮ ಕೈಗೊಂಡಿದ್ದಲ್ಲಿ ನಮಗೆ ಮಾಹಿತಿ ಬರುತ್ತಿತ್ತು. ಆದರೆ ನಾಗರಿಕರಿಗೆ ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು.
– ರಶ್ಮಿ ಎಸ್‌.ಆರ್‌. ತಹಶೀಲ್ದಾರ್‌

 ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next