Advertisement

ಆಧಾರ್‌ ಅರ್ಜಿ ಸಂವಿಧಾನ ಪೀಠಕ್ಕೆ?

09:37 AM Jul 08, 2017 | Team Udayavani |

ಹೊಸದಿಲ್ಲಿ: ಆಧಾರ್‌ ಜೋಡಣೆಗೆ ಸಂಬಂಧಿಸಿದ ಎಲ್ಲ ಅರ್ಜಿಗಳ ವಿಚಾರಣೆಯು ಸಂವಿಧಾನ ಪೀಠಕ್ಕೆ ವರ್ಗವಾಗುವ ನಿರೀಕ್ಷೆಯಿದೆ. ಆಧಾರ್‌ ಕುರಿತು ಯಾವುದೇ ಸಮಸ್ಯೆ ಎದುರಾದರೂ ಅದನ್ನು ಅಂತಿಮವಾಗಿ ಸಂವಿಧಾನ ಪೀಠ ನಿರ್ಧರಿಸಬೇಕು ಎಂದು ಸ್ವತಃ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ಆಧಾರ್‌ ಕುರಿತ ಗೊಂದಲಗಳನ್ನು ಪರಿಹರಿ ಸುವಂತೆ ಹಲವರು ಸುಪ್ರೀಂಗೆ ಮನವಿ ಸಲ್ಲಿಸಿ ದ್ದರು. ಈ ಅರ್ಜಿಗಳನ್ನು ಪರಿಶೀಲಿಸಿದ ತ್ರಿಸದಸ್ಯ ಪೀಠ, “ಅರ್ಜಿದಾರರು ಮತ್ತು ಸರಕಾರ ಆಧಾರ್‌ ಕುರಿತ ಸಮಸ್ಯೆಗಳನ್ನು ಬಗೆಹರಿಸಲು ಸಂವಿಧಾನ ಪೀಠ ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ಗಳಿಗೆ ಮನವಿ ಮಾಡಿ’ ಎಂದು ಸಲಹೆ ನೀಡಿದೆ. ಇದಕ್ಕೆ ಅರ್ಜಿದಾರರ ಪರ ವಕೀಲರು ಹಾಗೂ ಕೇಂದ್ರದ ಅಟಾರ್ನಿ ಜನರಲ್‌ ಸಮ್ಮತಿಸಿದರು.

ಸುಪ್ರೀಂನಲ್ಲಿ “ನಿರಂಕುಶ’ ಸಮರ: ಇದಕ್ಕೂ ಮುನ್ನ ಆಧಾರ್‌ ಕುರಿತ ವಿಚಾರಣೆ ವೇಳೆ ಅರ್ಜಿದಾರರು ಕೇಂದ್ರ ಸರಕಾರದ ಆಧಾರ್‌ ಯೋಜನೆಯನ್ನು “ನಿರಂಕುಶ’ ಎಂದು ಕರೆದಿದ್ದು, ಇದಕ್ಕೆ ಸರಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್‌ ದಿವಾನ್‌ ಅವರು, “ನಿರಂಕುಶ ಸರಕಾರ’ ಎಂಬ ಪದ ಬಳಸುತ್ತಿದ್ದಂತೆ, ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಸಿಡಿದೆದ್ದರು. “ದಯವಿಟ್ಟು ಇಂಥ ಪದ ಬಳಕೆ ಮಾಡಬೇಡಿ. ಆಧಾರ್‌ನಿಂದಾಗಿ ಎಷ್ಟೋ ಬಡವರು ಯೋಜನೆಗಳ ಲಾಭ ಪಡೆಯಲಿದ್ದಾರೆ. ನೀವಿಂದು ಸರ್ಕಾ ರವನ್ನು ನಿರಂಕುಶ ಎಂದರೆ ನಾಳೆ ಮಾಧ್ಯಮಗಳೂ ನಿರಂಕುಶ ಸರಕಾರವೆಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸುತ್ತದೆ’ ಎಂದು ಹೇಳಿದರು. ಆದರೆ, ಇದಕ್ಕೆ ಒಪ್ಪದ ನ್ಯಾ| ದಿವಾನ್‌ ಅವರು, “ನಾನು ಅಫಿದವಿಟ್‌ನಲ್ಲೂ ಇದನ್ನೇ ಹೇಳಿದ್ದೇನೆ. ಮುಂದೆಯೂ ಹೇಳುತ್ತೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next