ಕನ್ನಡ ಚಿತ್ರರಂಗದಲ್ಲಿ ಈ ಮೊದಲು “ಪಂಚಮವೇದ’, “ಶ್ರೀಗಂಧ’, “ಅರಗಿಣಿ’, “ಅರುಣೋದಯ’, “ಅಂಡಮಾನ್’ ಮೊದಲಾದ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ಪಿ. ಹೆಚ್ ವಿಶ್ವನಾಥ್ ನಿರ್ದೇಶನದಲ್ಲಿ ಮೂಡಿಬಂದಿರುವ “ಆಡೇ ನಮ್ ಗಾಡ್’ ಸಿನಿಮಾ ಈ ವಾರ ಬಿಡುಗಡೆಯಾಗಿ ತೆರೆಗೆ ಬಂದಿದೆ.
“ಆಡೇ ನಮ್ ಗಾಡ್’ ಸಿನಿಮಾದ ಶೀರ್ಷಿಕೆಯಲ್ಲಿರುವಂತೆ, ಒಂದು ಆಡು ಮತ್ತು ಅದರ ಹಿಂದೆ ಬಿದ್ದ ಹುಡುಗರ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಸಾಮಾನ್ಯ ವರ್ಗದ ಕುಟುಂಬದ ನಾಲ್ಕು ಜನ ಯುವಕರ ಬದುಕಲ್ಲಿ ಒಂದು ಆಡು ಬಂದಾಗ ಲೈಫ್ ಹೇಗೆ ಟ್ವಿಸ್ಟ್ ಆ್ಯಂಡ್ ಟರ್ನ್ ಪಡೆದುಕೊಳ್ಳುತ್ತದೆ, ಆ ಆಡಿನ ಜತೆ ಯುವಕರ ಬದುಕು ಹೇಗೆಲ್ಲ ಸಾಗುತ್ತದೆ, ಆಡನ್ನು ದೇವರಾಗಿ ಪೂಜೆ ಮಾಡಿದಾಗ ಏನೆಲ್ಲಾ ಆಗುತ್ತದೆ ಎನ್ನುವುದು “ಆಡೇ ನಮ್ ಗಾಡ್’ ಸಿನಿಮಾದ ಒನ್ ಲೈನ್ ಸ್ಟೋರಿ.
ಒಂದು ಗಂಭೀರ ವಿಷಯವನ್ನು ಇಟ್ಟುಕೊಂಡು, ಅದನ್ನು ಎಲ್ಲೂ ಬೋರ್ ಹೊಡೆಸದಂತೆ ಹಾಸ್ಯಭರಿತವಾಗಿ ಕಟ್ಟಿಕೊಟ್ಟಿರು ವುದು “ಆಡೇ ನಮ್ ಗಾಡ್’ ಸಿನಿಮಾದ ಹೆಗ್ಗಳಿಕೆ.
ನಟರಾಜ್ ಸಿನಿಮಾದಲ್ಲಿ ಮಧ್ಯವರ್ತಿಯ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನೂಪ್ ಶೂನ್ಯ ಅವರ ಸಂಭಾಷಣೆ, ಕಾಮಿಡಿ ದೃಶ್ಯಗಳು ನೋಡುಗರಿಗೆ ಆಗಾಗ್ಗೆ ನಗುತರಿಸುತ್ತದೆ.
ಬಿ. ಸುರೇಶ್, ಸಾರಿಕ ರಾವ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಿರಿಯ ಛಾಯಾಗ್ರಹಕ ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ಬಿ. ಎಸ್. ಕೆಂಪರಾಜು ಸಂಕಲನ ಗಮನ ಸೆಳೆಯುತ್ತದೆ