ಮಲ್ಪೆ: ಕುಮಟಾ ಸಮೀಪ ಧಾರೇಶ್ವರದ ನಿವಾಸಿ ನಾಗೇಂದ್ರ ಅಂಬಿಗ (39) ಎಂಬ ಯುವಕ ಕಳೆದ ಜೂ. 20ರಂದು ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಕುಮಟಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಪತ್ಬಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಈ ಯುವಕನನ್ನು ಪತ್ತೆ ಹಚ್ಚಲು ಸಾಮಾಜಿಕ ಜಾಲತಾಣದ ಮೂಲಕ ಸಂದೇಶವನ್ನು ರವಾನಿಸಿ ಸಾರ್ವಜನಿಕರಲ್ಲಿ ಪತ್ತೆ ಕಾರ್ಯಕ್ಕೆ ಸಹಕರಿಸಲು ಮನವಿ ಮಾಡಿದ್ದರು.
ಆತ ಮಲ್ಪೆಯ ಹೊಟೇಲೊಂದಕ್ಕೆ ಊಟ ಮಾಡಲು ಬಂದಿರುವುದನ್ನು ಗಮನಿಸಿದ ಓರ್ವರು ಈಶ್ವರ ಮಲ್ಪೆ ಅವರಿಗೆ ಕರೆ ಮಾಡಿ ತಿಳಿಸಿದರು.
ತತ್‌ಕ್ಷಣ ಈಶ್ವರ ಮಲ್ಪೆ ಅವರ ತಂಡ ಆತನನ್ನು ಹಿಡಿದು ಕುಮಟಾ ಪೋಲೀಸ್ ಠಾಣೆಗೆ ಆ್ಯಂಬುಲೆನ್ಸ್ ಮೂಲಕ ಕರೆ ತಂದಿದ್ದಾರೆ.
Advertisement