Advertisement
ವಿವಿಧ ರಾಷ್ಟ್ರಗಳ ವಿದ್ಯಾರ್ಥಿಗಳು ಅಲ್ಲಿ ವಾಸಿಸುತ್ತಿದ್ದಾರೆ. ಇಟಲಿಯ ರಾಜಧಾನಿಯಲ್ಲಿ ಓದುತ್ತಿರುವ ಪ್ರಸ್ತುತ ಇಂದೋರ್ನ ವಿದ್ಯಾರ್ಥಿಯೊಬ್ಬ ತನ್ನಿಂದ ಕೋವಿಡ್ ವೈರಸ್ ಸೋಂಕು ಬೇರೆಯವರಿಗೆ ಹರಡಬಾರದು ಎಂಬ ಕಾರಣಕ್ಕೆ ಭಾರತಕ್ಕೆ ಬರದೇ ಅಲ್ಲೇ ಉಳಿದಿದ್ದಾನೆ. ಇಂದೋರ್ ನ ವಿದ್ಯಾರ್ಥಿ ಅನಂತ್ ಶುಕ್ಲಾ ಅವರು ಇಟಲಿಯ ರಾಜಧಾನಿ ರೋಮ್ನಲ್ಲಿ ವಾಸಿಸುತ್ತಿದ್ದಾರೆ.
Related Articles
ಇಲ್ಲಿನ ನಾಗರಿಕರು ಮಾಡಿದ ತಪ್ಪನ್ನು ನೀವು ಮಾಡುವುದು ಬೇಡ ಎಂದು ಇಟಲಿಯಲ್ಲಿರುವ ಭಾರತೀಯರು ಹೇಳುವ ಮಾತು. ಇದಕ್ಕೆ ಅನಂತ್ ಶುಕ್ಲಾ ಧ್ವನಿಗೂಡಿಸಿದ್ದು, ತಮ್ಮ ಮತ್ತು ಕುಟುಂಬದ ಹಿತದೃಷ್ಟಿಯಿಂದ ಮನೆಯಿಂದ ದಯವಿಟ್ಟು ಹೊರಹೋಗಬೇಡಿ ಎಂದು ಜನರಿಗೆ ಕೈ ಮುಗಿದು ಮನವಿ ಮಾಡಿದ್ದಾರೆ.
Advertisement
ನೀವು ಇದನ್ನು ನಿರ್ಲಕ್ಷ್ಯ ಮಾಡಿದರೆ ಇಟಲಿಯಂತೆ ಭಾರತವೂ ಶ್ಮಶಾನವಾಗಲಿದೆ ಎಂದು ಹೇಳಿದ್ದಾರೆ. ಸೈನಿಕರಾಗಿ ದೇಶ ಸೇವೆ ಮಾಡುವುದೊಂದೆ ದೇಶಸೇವೆಯಲ್ಲ. ದೇಶದ ಒಳಿತಿಗಾಗಿ ಮನೆಯಲ್ಲೇ ಇದ್ದುಬಿಡುವುದು ಒಂದು ದೇಶಸೇವೆ ಎಂದು ಹೇಳಿದ್ದಾರೆ.
ನಿರ್ಲಕ್ಷ್ಯಕ್ಕೆ ಬೆಲೆ ತೆತ್ತ ಇಟಲಿ:
ಈ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟಲು ಇಟಲಿಯಲ್ಲಿ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿರಲಿಲ್ಲ. ಚೀನದಲ್ಲಿ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಇಟಲಿಯಲ್ಲೂ ಕಾಣಿಸಿಕೊಂಡಿದೆ. ಆದರೆ ಚೀನದಲ್ಲಿ 3ನೇ ಹಂತದಲ್ಲಿರಬೇಕಾದರೆ ಇಟಲಿ 2ನೇ ಹಂತದಲ್ಲಿತ್ತು. ಆದರೆ ಅಲ್ಲಿನ ಸರಕಾರ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ.
ಒಂದು ವೇಳೆ ಸರಕಾರ ಆರಂಭದಲ್ಲಿ ಕ್ರಮಕೈಗೊಂಡಿದ್ದರೆ ಇಂದಿನ ಸ್ಥಿತಿಗೆ ಇಟಲಿ ತಲುಪುತ್ತಿರಲಿಲ್ಲ ಎಂಬುದು ಬಹುತೇಕ ಇಟಲಿಯನ್ನರ ಅಭಿಪ್ರಾಯವಾಗಿದೆ. ಇಟಲಿ ತನ್ನಲ್ಲಿನ ಆರೋಗ್ಯ ಸೇವೆಯ ಮೇಲೆ ಇರಿಸಿದ್ದ ಅತಿಯಾದ ಆತ್ಮವಿಶ್ವಾಸವೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಇಟಲಿಯಲ್ಲಿ ಹೆಣವನ್ನು ಹೂಳಲು ಸ್ಥಳಾವಕಾಶ ಇಲ್ಲದೇ ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಅಲ್ಲಿನ ಆಸ್ಪತ್ರೆಯಲ್ಲಿ ಸೂಕ್ತ ಸೌಕರ್ಯ ಇಲ್ಲದೇ ಜನರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಸುಸಜ್ಜಿತ ಆಸ್ಪತ್ರೆಗಳಿದ್ದರು ಸೋಂಕು ಪೀಡಿತರ ಸಂಖ್ಯೆ ಹೆಚ್ಚಾದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿವೆ.