Advertisement

Fraud Case ಯುವಕನಿಗೆ ಲಕ್ಷಾಂತರ ರೂ.ವಂಚನೆ

11:35 PM Jul 18, 2024 | Team Udayavani |

ಸುಳ್ಯ: ಬೆಳ್ಳಾರೆಯ ಯುವಕನೊಬ್ಬನಿಗೆ ಇನ್‌ಸ್ಟಾಗ್ರಾಮ್‌ ಮೂಲಕ ಲಕ್ಷಾಂತರ ರೂ. ವಂಚಿಸಿದ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬೆಳ್ಳಾರೆ ನಿವಾಸಿ ದಿಲ್‌ಸಾದ್‌ ಎಸ್‌. (24) ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಕಳೆದ ಮಂಗಳವಾರ ಸಂಜೆ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ “ವರ್ಕ್‌ ಆಫ್‌ ದಿ ಹೋಮ್‌ ವಿದ್‌ಔಟ್‌ ಇನ್ವೆಸ್ಟ್ಮೆಂಟ್ ‘ ಎಂಬ ಲಿಂಕ್‌ ಇರುವ ವೀಡಿಯೋ ಬಂದಿದೆ.ಅದನ್ನು ಓಪನ್‌ ಮಾಡಿ, ಅದರಲ್ಲಿನ ಸೂಚನೆಗಳನ್ನು ಪಾಲಿಸಿದಾಗ, ಅನಿತಾ ಸಿಂಗ್‌ ಹೆಸರಿನ ಟೆಲಿಗ್ರಾಮ್‌ ಐಡಿ ಕಳುಹಿಸಿ ಸೇರ್ಪಡೆಗೊಳಿಸಿದ್ದಾರೆ.

ಬಳಿಕ ಅಪರಿಚಿತ ಆರೋಪಿಗಳು ವಿವಿಧ ಟಾಸ್ಕ್ ಗಳ ಹೆಸರಿನಲ್ಲಿ ಹಾಗೂ ಇತರ ಕಾರಣಗಳನ್ನು ಒಡ್ಡಿ ಗೂಗಲ್‌ ಪೇ ಮೂಲಕ ಹಂತಹಂತವಾಗಿ ಒಟ್ಟು ರೂ. 2,74,000 ವರ್ಗಾಯಿಸಿಕೊಂಡು ತನಗೆ ವಂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next