Advertisement

ಮನೆ ನಿರ್ಮಾಣಕ್ಕೆ ಮುಂದಾದ ಯುವಕರ ತಂಡ

12:18 AM May 16, 2020 | Sriram |

ಮುಂಡಾಜೆ: ಕೂಲಿ ಕಾರ್ಮಿಕರ ಕುಟುಂಬವೊಂದಕ್ಕೆ ಬೆಳ್ತಂಗಡಿ ತಾ|ನ ಚಾರ್ಮಾಡಿಯ ವಿಹಿಂಪ-ಬಜರಂಗ ದಳ ಘಟಕ ಮನೆ ನಿರ್ಮಿಸಿಕೊಡಲು ಮುಂದಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೇರೆಡೆ ಇದ್ದ ಯುವಕರು ಊರಿಗೆ ಬಂದು, ಊರಿನ ಯುವಕರ ಜತೆ ಸೇರಿ 25 ಜನರ ತಂಡ ಈ ಕಾರ್ಯಕ್ಕೆ ಮುಂದಾಗಿದೆ.

Advertisement

ಅರಣ್ಯ ಇಲಾಖೆ ಜಾಗದಲ್ಲಿ ಟೆಂಟ್‌ ಹಾಕಿ ಜೀವನ ಸಾಗಿಸುತ್ತಿದ್ದ ಚಾರ್ಮಾಡಿ ಗ್ರಾಮದ ಪಾಂಡಿಕಟ್ಟ ದಲ್ಲಿ ಪ್ರಸಾದ್‌ ಕುಟುಂಬಕ್ಕೆ 500 ಅಡಿ ವಿಸ್ತೀರ್ಣದ ಮನೆ ನಿರ್ಮಿಸಿ ಕೊಡಲು ಮುಂದಾದಯುವಕರು ಈಗಾಗಲೇ ಅಡಿ ಪಾಯದ ಕೆಲಸವನ್ನು ಪೂರ್ಣ ಗೊಳಿಸಿದ್ದಾರೆ.

ಶೀಘ್ರ ನಿರ್ಮಾಣದ ಕನಸು
ಸುಮಾರು 6 ಲ.ರೂ. ವೆಚ್ಚದ ಮನೆಯ ಕೂಲಿ ಕೆಲಸಕ್ಕೆ ಸಂಬಂಧ ಪಟ್ಟಂತೆ ಎಲ್ಲ ಕೆಲಸಗಳನ್ನು ಯುವ ಕರೇ ಸ್ವತಃ ಮಾಡಲಿದ್ದಾರೆ. ಆದರೆ ಗೋಡೆ ಕಟ್ಟುವುದು, ಸಿಮೆಂಟ್‌ ಹಾಕುವುದು, ಛಾವಣಿ ನಿರ್ಮಾಣ ಇತ್ಯಾದಿ ಕೆಲಸಗಳಿಗೆ ನುರಿತ ಕಾರ್ಮಿಕರ ಅಗತ್ಯವಿದೆ. ಇವರಿಗೆ ಸಂಬಳ ನೀಡಲು, ಮನೆ ನಿರ್ಮಾ ಣಕ್ಕೆ ಬೇಕಾಗುವ ಸಾಮಗ್ರಿಗಳ ಖರೀದಿಗೆ ಹಣದ ಅಡಚಣೆ ಇದೆ. ಆದರೆ ಛಲಬಿಡದ ಯುವಕರು ಹಲವಾರು ದಾನಿಗಳನ್ನು ನಿರಂತರ ಸಂಪರ್ಕಿಸುತ್ತಿದ್ದಾರೆ. ಇತ್ತೀಚೆಗೆ ಶಾಸಕ ಹರೀಶ್‌ ಪೂಂಜ ಸ್ಥಳಕ್ಕೆ ತೆರಳಿ ಧನಸಹಾಯ ನೀಡಿದ್ದಾರೆ.

ಜೂನ್‌ ಅಂತ್ಯದೊಳಗೆ ನಿರ್ಮಾಣ
ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬ ತಮ್ಮ ಉಳಿತಾಯದ ಹಣದಲ್ಲಿ ಮನೆ ಕಟ್ಟುವಷ್ಟು ಜಾಗ ಖರೀದಿಸಿತ್ತು. ಆದರೆ ಮನೆ ಕಟ್ಟಲು ಆರ್ಥಿಕ ಶಕ್ತಿ ಇರಲಿಲ್ಲ. ನಮ್ಮ ಯುವಕರ ತಂಡ ಜೂನ್‌ ಅಂತ್ಯದೊಳಗೆ ನಿರ್ಮಾಣ ಪೂರ್ಣಗೊಳಿಸುವ ಇರಾದೆ ಹೊಂದಿದ್ದು, ದಾನಿಗಳ ಸಹಕಾರ ಅಗತ್ಯವಿದೆ ಎಂದು ವಿಹಿಂಪ-ಬಜರಂಗ ದಳದ ಚಾರ್ಮಾಡಿ ಘಟಕದ ಅಧ್ಯಕ್ಷ ಜಗದೀಶ ಬೀಟಿಗೆ ತಿಳಿಸಿದ್ದಾರೆ.

ದಾಖಲೆ ಕೊರತೆ
ಸ್ಥಳೀಯ ಯುವಕರ ಕಾರ್ಯ ಪ್ರಶಂಸನೀಯ. ಪ್ರಸಾದ್‌ ಕುಟುಂಬದವರ ಬಳಿ ಕೆಲವು ದಾಖಲೆಗಳ ಕೊರತೆ ಇದೆ. ಅಗತ್ಯ ದಾಖಲೆಗಳನ್ನು ನೀಡಿದರೆ ಪಂ. ವತಿಯಿಂದ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಬಹುದು.
 -ಶೈಲಜಾ, ಅಧ್ಯಕ್ಷರು, ಗ್ರಾ.ಪಂ., ಚಾರ್ಮಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next