ಮಂಗಳೂರು: ಎತ್ತಿನಹೊಳೆ ಕಾಮಗಾರಿ ಪ್ರದೇಶಕ್ಕೆ ಎ. 18ರಂದು ಭೇಟಿ ನೀಡಿ ಅಲ್ಲಿನ ವಾಸ್ತವಾಂಶಗಳ ಪರಿಶೀಲನೆ ನಡೆಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದ ಕುಮಾರ ಸ್ವಾಮಿ, ಮಂಗಳವಾರ ಕಾಡುಮನೆ ಪ್ರದೇಶದಿಂದ ಪರಿಶೀಲನೆ ಆರಂಭಿಸಿ ವಾಸ್ತವಿಕಾಂಶಗಳ ಬಗ್ಗೆ ವಿವರ ಪಡೆಯಲಿದ್ದೇನೆ. ಈ ಸಂದರ್ಭ ಕೋಲಾರ ಭಾಗದ ಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ ಎಂದರು.
ಎತ್ತಿನಹೊಳೆ ಯೋಜನೆಯಿಂದ ಕೋಲಾರ ಭಾಗದ ಜನರಿಗೆ ಕುಡಿಯುವ ನೀರಿಗೆ ಸಂಬಂಧಪಟ್ಟು ಹೆಚ್ಚಿನ ಪ್ರಯೋಜನವಾಗದು. ಇದೊಂದು ದುಡ್ಡು ಹೊಡೆಯುವ ಯೋಜನೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಆಗ ನನ್ನ ಹೇಳಿಕೆ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಈಗ ಅಲ್ಲಿ ಕಾಮಗಾರಿಯ ಚಿತ್ರಣ ನೋಡಿದ ಬಳಿಕ ಅವರಿಗೆ ನನ್ನ ಹೇಳಿಕೆ ವಾಸ್ತವಾಂಶಗಳಿಂದ ಕೂಡಿದೆ ಎಂದು ಅರಿವಾಗತೊಡಗಿದೆ ಎಂದರು.
ಎತ್ತಿನಹೊಳೆ ಯೋಜನೆಯಿಂದ ಅತ್ತ ಕೋಲಾರ ಭಾಗಕ್ಕೂ ನೀರು ಲಭಿಸದು. ಇತ್ತ ಕರಾವಳಿ ಭಾಗಕ್ಕೂ ಧಕ್ಕೆಧಿಯಾಗಲಿದೆ. ಇದರ ಜತೆಗೆ ಈ ಯೋಜನೆ ಪರಿಸರ ನಾಶಕ್ಕೂ ಕಾರಣಧಿವಾಗಿದೆ. ಕಾಮಗಾರಿ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಮರ ಕಡಿಯಲಾಗಿದೆ. ಈಗಾಗಲೇ ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಪರಿಸರ ನಾಶಕ್ಕೆ ಕಾರಣಧಿವಾಗುವ ಯಾವುದೇ ಯೋಜನೆ ಇದ್ದರೂ ಅದನ್ನು ನಾನು ವಿರೋಧಿಸುತ್ತೇನೆ ಎಂದರು.
ರಾಜ್ಯದಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿಕೊಂಡು ಮಳೆ ನೀರು ಸಂಗ್ರಹ ಮಾಡಿದರೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಧಿಕೊಳ್ಳಲು ಸಾಧ್ಯವಿದೆ ಎಂದು ಅವರು ಹೇಳಿದರು.