Advertisement

ಅಸಹಾಯಕ ಮಹಿಳೆಯ ಸುತ್ತ ತಲಾಖ್‌ ನೇತ್ರಾ ನಟನೆಯ ಚಿತ್ರ

08:53 AM Jul 24, 2020 | mahesh |

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ತಲಾಖ್‌ ತಲಾಖ್‌ ತಲಾಖ್‌ ಎಂಬ ಚಿತ್ರವೂ ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್‌ 19 ಎಂಬ ಮಹಾಮಾರಿಯು ಪ್ರಳಯಾವತಾರಕ್ಕೆ ಇಡೀ ವಿಶ್ವವೇ ನಲುಗಿ ಹೋದ್ದರಿಂದ ಚಿತ್ರದ ಬಿಡುಗಡೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಆದರೆ, ಈ ಚಿತ್ರ ಬಿಡುಗಡೆಗೆ ಮುನ್ನವೇ ಒಂದಷ್ಟು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ದಿ ಲಿಫ್ಟ್ ಆಫ್ ಸೆಷನ್ಸ್ ಹಾಲಿವುಡ್‌ 2020 ಹಾಗೂ ದಿ ಲಿಸ್ಟ್ ಆಫ್ ಯು ಕೆ 2020 ಸಿನಿಮೋತ್ಸವಗಳಲ್ಲಿ ಪ್ರವೇಶ ಪಡೆದಿದೆ.

Advertisement

ಕಾಸ್ಮೋ ಫಿಲಂ ಫೆಸ್ಟಿವಲ್‌ 2020 ಸಿನಿಮೋತ್ಸವದಲ್ಲಿ ಬೆಸ್ಟ್ ಇಂಡಿಯನ್‌ ಫಿಚರ್‌ ಫಿಲಂ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದಲ್ಲದೇ ಇತ್ತೀಚೆಗೆ ನಡೆದ ಇಂಡೋ ಗ್ಲೋಬಲ್‌ ಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿಯನ್ನು ತನ್ನ ಮುಕುಟಕ್ಕೇರಿಸಿಕೊಂಡಿದೆ. ಚಿತ್ರವನ್ನು ವೈದ್ಯನಾಥ್‌ ನಿರ್ದೇಶಿಸಿದ್ದಾರೆ. ನಿರ್ಮಾಣ ಕೂಡ ಅವರದೇ. ಇನ್ನು, ಈ ಚಿತ್ರದ ಮುಖ್ಯ ಆಕರ್ಷಣೆ ರೇಡಿಯೋ ಜಾಕಿ ನೇತ್ರಾ. ಹೌದು, ನೇತ್ರಾ ಇಲ್ಲಿ ನೂರ್‌ ಜಹಾನ್‌ ಎಂಬ ಪಾತ್ರ ಮಾಡಿದ್ದಾರೆ. ಇಡೀ ಸಿನಿಮಾ ಕಥೆ ಅವರ ಸುತ್ತವೇ ಸಾಗುತ್ತದೆ. ಇದೊಂದು ಮುಸ್ಲಿಂ ಕುಟುಂಬವೊಂದರ ಕಥೆ ಮತ್ತು ವ್ಯಥೆ ಒಳಗೊಂಡ ಚಿತ್ರ. ಆಗುಂಬೆ, ತೀರ್ಥಹಳ್ಳಿ ಸಮೀಪ ಚಿತ್ರೀಕರಣ ನಡೆದಿದೆ. ಆ ಭಾಗದ ಒಂದು ಮುಸ್ಲಿಂ ಕುಟುಂಬದಲ್ಲಿ ನಡೆಯುವ ಸ್ಟೋರಿ ಇಲ್ಲಿದೆ.

ಇಂಗ್ಲೀಷ್‌ ನಾವೆಲ್‌ವೊಂದನ್ನು ಕನ್ನಡಕ್ಕೆ ಅಬ್ದುಲ್‌ ರೆಹಮಾನ್‌ ಅವರು ಅನುವಾದಿಸಿದ “ಅಲ್ಲಾನಿಂದ ನಿರಾಕೃತರು’ ಎಂಬ ಪುಸ್ತಕದಲ್ಲಿ ಮುಸ್ಲಿಂ ಧರ್ಮದ ಅಸಹಾಯಕ ಮಹಿಳೆಯರ ಕಥೆಗಳು ದಾಖಲಾಗಿವೆ. ಅದರಲ್ಲಿ ಒಂದು ಕಥೆ ಆಯ್ಕೆ ಮಾಡಿಕೊಂಡು ಮಾಡಿದ ಚಿತ್ರವಿದು. ಮನಸ್ತಾಪದಿಂದಾಗಿ ಧರ್ಮವನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಸಂದರ್ಭದಲ್ಲಿ ಏನೆಲ್ಲಾ ಘಟನೆ ನಡೆಯುತ್ತೆ ಎಂಬುದರ ಮೇಲೆ ಚಿತ್ರ ಸಾಗುತ್ತದೆ. ನೇತ್ರಾ ಅವರು ನೂರ್‌ಜಹಾನ್‌ ಎಂಬ ಪಾತ್ರ ನಿರ್ವಹಿಸಿದ್ದು, ಇಡೀ ಕಥೆ ಅವರ ಮೇಲೆಯೇ ನಡೆಯುತ್ತದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next