Advertisement

Guinness Record: 38 ಹಲ್ಲುಗಳಿಂದ ವಿಶ್ವ ದಾಖಲೆ

08:49 PM Nov 21, 2023 | Team Udayavani |

ನವದೆಹಲಿ: ಭಾರತದ 26 ವರ್ಷದ ಮಹಿಳೆ ಕಲ್ಪನಾ ಬಾಲನ್‌ ಎಂಬವರು 38 ಹಲ್ಲುಗಳನ್ನು ಹೊಂದುವ ಮೂಲಕ ಗಿನ್ನೆಸ್‌ ದಾಖಲೆ ಸೃಷ್ಟಿಸಿದ್ದಾರೆ. ಸಾಮಾನ್ಯವಾಗಿ ವಯಸ್ಕರಿಗೆ ಇರುವುದಕ್ಕಿಂತಲೂ 6 ಹಲ್ಲು ಹೆಚ್ಚಿಗೆ ಇರುವುದರಿಂದ ಅತಿಹೆಚ್ಚು ಹಲ್ಲುಗಳನ್ನು ಹೊಂದಿರುವ ಮಹಿಳೆ ಎನ್ನುವ ಸಾಲಿನಲ್ಲಿ ಕಲ್ಪನಾ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

Advertisement

ಹದಿಹರೆಯದಲ್ಲಿ ಹೆಚ್ಚುವರಿ ಹಲ್ಲುಗಳು ಬೆಳೆಯುತ್ತಿರುವುದನ್ನ ಗಮನಿಸಿದ ಕಲ್ಪನಾ ಅವರಿಗೆ ಆತಂಕವಾಗಿತ್ತು. ಆದರೆ, ಅವುಗಳಿಂದ ಯಾವುದೇ ಸಮಸ್ಯೆ ಇರಲಿಲ್ಲ. ಊಟ ಮಾಡುವಾಗ ಮಾತ್ರ ಆಹಾರ ಹಲ್ಲುಗಳ ನಡುವೆ ಸಿಕ್ಕಿಕೊಂಡು ತೊಂದರೆ ನೀಡುತ್ತಿದ್ದ ಕಾರಣ ಹಲ್ಲುಗಳನ್ನು ಕೀಳಿಸಲು ವೈದ್ಯರ ಬಳಿ ಹೋಗುವಂತೆ ಪೋಷಕರು ಸೂಚಿಸಿದ್ದರು. ಆದರೆ, ಭಯದಿಂದ ಆಕೆ ಹಲ್ಲನ್ನು ಕೀಳಿಸಿರಲಿಲ್ಲ. ಈಗ ಅದೇ ಹಲ್ಲುಗಳಿಂದಾಗಿ ಗಿನ್ನೆಸ್‌ ದಾಖಲೆ ಸೃಷ್ಟಿಸಿದ್ದಾರೆ. ಕೆನಡಾದ ಇವೆನೊ ಮಲೋನ್‌ 41 ಹಲ್ಲುಗಳನ್ನು ಹೊಂದುವ ಮೂಲಕ ವಿಶ್ವದಲ್ಲೇ ಅತಿಹೆಚ್ಚು ಹಲ್ಲುಗಳನ್ನು ಹೊಂದಿರುವ ಪುರುಷನೆಂಬ ಖ್ಯಾತಿ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next