Advertisement
ತೆಂಕನಿಡಿಯೂರು ಗ್ರಾಮದ ವಿನೀತಾ (35) ಅವರು ಕಂಪೆನಿಯೊಂದರಲ್ಲಿ ಬಿಸಿನೆಸ್ ಪಾರ್ಟ್‌ನರ್ ಆಗಿ ಕೆಲಸ ಮಾಡಿಕೊಂಡಿದ್ದರು. ಈ ನಡುವೆ ಜ. 24ರಂದು ಅಪರಿಚಿತ ವ್ಯಕ್ತಿಯೊಬ್ಬ ತಾನು ಡಾಕ್ಟರ್ ಎಂಬದಾಗಿ ಪರಿಚಯ ಮಾಡಿಕೊಂಡು ವಾಟ್ಸಾಪ್ ಮೂಲಕ ಚಾಟ್ ಮಾಡುತ್ತಿದ್ದ. ಅನಂತರ ಆತನು ತಾನು ಲಂಡನ್‌ನಿಂದ ಭಾರತಕ್ಕೆ ಬರುವುದಾಗಿ ಹೇಳಿದ್ದನು. ಫೆ. 16ರಂದು ವಿನೀತಾ ಅವರಿಗೆ ಬೇರೆ ಒಂದು ನಂಬರಿನಿಂದ ಕರೆ ಬಂದಿದ್ದು, ನಿಮ್ಮ ಸ್ನೇಹಿತ ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಮ್ಮ ಕಸ್ಟಡಿಯಲ್ಲಿದ್ದಾರೆ. ಅವರನ್ನು ಬಿಡುಗಡೆ ಮಾಡಬೇಕಾದರೆ ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾನೆ ಎನ್ನಲಾಗಿದೆ. ಸರಕಾರದಿಂದ ತಮ್ಮ ಮೇಲೆ ಕಾನೂನು ಕ್ರಮ ಆಗಬಹುದೆಂದು ಹೆದರಿ ವಿನೀತಾ ಅವರು ಹಣವನ್ನು ಪಾವತಿ ಮಾಡಿದರು. ಅವರು ಹೀಗೆ ಫೆ. 16ರಿಂದ 20ರ ವರೆಗೆ ಒಟ್ಟು 4,96,000 ರೂ. ಹಣವನ್ನು ಕೆನರಾ ಬ್ಯಾಂಕ್ ಖಾತೆ ಮತ್ತು ಪೋನ್‌ಪೇ ಮೂಲಕ ವರ್ಗಾಯಿಸಿ ವಂಚನೆಗೆ ಒಳಗಾಗಿದ್ದಾರೆ. Advertisement
Fraud: ಮಲ್ಪೆ; ಲಂಡನಿನ ವೈದ್ಯ ಎಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ
08:51 PM Feb 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.