ಕಿನ್ನಿಗೋಳಿ : ಪುರಾಣ ಕಾಲದಿಂದಲೂ ಸಮಾಜದಲ್ಲಿ ಹೆಣ್ಣಿಗೆ ಮಾನ್ಯತೆ ಇದೆ. ಮಹಿಳೆ ಸುಶಿಕ್ಷಿತಳಾಗಿ ಸುಸಂಸ್ಕೃತರಾಗಿ ಬೆಳೆಯಬೇಕು ಎಂದು ಡೈಜಿವಲ್ªì ಕಾರ್ಯಕ್ರಮ ನಿರೂಪಕಿ ದೀಪ್ತಿ ಬಾಲಕೃಷ್ಣ ಹೇಳಿದರು.
ಅವರು ಮಾ. 11ರಂದು ತೋಕೂರು ಕಂಬಳಬೆಟ್ಟು ಶ್ರೀದೇವಿ ಮಹಿಳಾ ಮಂಡಲದ ವಠಾರದಲ್ಲಿ ಶ್ರೀ ದೇವಿ ಮಹಿಳಾ ಮಂಡಲ, ಕಂಬಳಬೆಟ್ಟು ತೋಕೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಲಯನ್ಸ್ ಕ್ಲಬ್ ಮೂಲ್ಕಿ ಹಾಗೂ ಕಿನ್ನಿಗೋಳಿ ಇವುಗಳ ಆಶ್ರಯದಲ್ಲಿ ಜರಗಿದ ಪೊಂಜೊವುಲೆನ ತುಡರ ಪರ್ಬದಲ್ಲಿ “ಹೆಣ್ಣು ಸಮಾಜದ ಕಣ್ಣು – ಅದು ಹೇಗೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಮೂಡಬಿದಿರೆ ಆಳ್ವಾಸ್ ಪ. ಪೂ. ಕಾಲೇಜಿನ ಉಪನ್ಯಾಸಕಿ ಸುಧಾರಾಣಿ ಉದ್ಘಾಟಿಸಿ ಮಾತನಾಡಿ, ಇಲ್ಲಿನ ಮಹಿಳಾ ಮಂಡಲ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ತೋಕೂರು ಎಂ.ಆರ್. ಪೂಂಜ ಐಟಿಐ ಸಂಸ್ಥೆಯ ಪ್ರಾಚಾರ್ಯ ಯಶವಂತ್ ಎನ್. ಸಾಲ್ಯಾನ್ ಅವರು ಅಧ್ಯಕ್ಷತೆ ವಹಿಸಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಯೋಗೀಶ್ ರಾವ್, ಮೂಲ್ಕಿ ಸುವರ್ಣ ಆರ್ಟ್ಸ್ ಸಂಸ್ಥೆಯ ಚಂದ್ರಶೇಖರ ಸುವರ್ಣ, ರಿಧಮ್ ಸಾಂಸ್ಕೃತಿಕ ವೇದಿಕೆಯ ನಿರ್ದೇಶಕ ಸುಧಾಕರ, ನಿವೃತ್ತ ಶಿಕ್ಷಕಿ ಗಾಯತ್ರಿ ಎಸ್. ಉಡುಪ , ಮಹಿಳಾ ಮಂಡಲದ ಅಧ್ಯಕ್ಷೆ ವಿಲಾಸಿನಿ ಮೆಂಡನ್ ಮತ್ತಿತರರು ಉಪಸ್ಥತರಿದ್ದರು.
ಅಂಚೆ ವಿತರಕ ಶಂಕರ ಸಾಲ್ಯಾನ್ ಅವರನ್ನು ಗೌರವಿಸಲಾಯಿತು. 60 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಆರ್ಥಿಕ ಸಹಾಯ ನೀಡಲಾಯಿತು. ಪ್ರೇಮಲತಾ ಸ್ವಾಗತಿಸಿದರು. ವಿಮಲಾ ಬಂಗೇರ ವರದಿ ವಾಚಿಸಿದರು. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಗೀತಾ ವಂದಿಸಿದರು.