ಮೂಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯತ್‌ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಕೊಲ್ನಾಡುಗುತ್ತು ಬಳಿಯ ಮನೆಯೊಂದಕ್ಕೆ ಅಪರಿಚಿತನೋರ್ವ ನುಗ್ಗಿ ಮನೆಯೊಳಗಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿ ಐದು ಲಕ್ಷ ರೂ.ಗಳಿಗೂ ಹೆಚ್ಚಿನ ಮೊತ್ತದ ಚಿನ್ನಾಭರಣಗಳನ್ನು ದರೋಡೆ ಮಾಡಿರುವುದಾಗಿ ಮೂಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆನ್ನಿಗೆ ಚೀಲ ಹಾಕಿ ಕೊಂಡು ಬಂದಿದ್ದ ಯುವಕನೊಬ್ಬ ಕೊಲಾ°ಡುಗುತ್ತು ಬಳಿಯ ನಿವಾಸಿ ಪ್ರಭಾಕರ ಶೆಟ್ಟಿ ಅವರ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದ್ದ. ಬಾಗಿಲು ತೆರೆದ ಮನೆಯೊಡತಿ ಶಾರದಾ ಶೆಟ್ಟಿ ಬಾಗಿಲು ತೆರೆದು ಸಂಶಯಗೊಂಡು ಮುಚ್ಚಬೇಕೆನಿಸುವಷ್ಟರಲ್ಲಿ ತಾನು ಕೆಇಬಿಯವನು. ನಿಮ್ಮ ಬಿಲ್ ಚೆಕ್ ಮಾಡಬೇಕಾಗಿದೆ ಎಂದು ಏಕಾಏಕಿ ಯಾಗಿ ಮನೆಯೊಳಗೆ ನುಗ್ಗಿ ಅವರ ಕುತ್ತಿಗೆ ಒತ್ತಿ ಯಾವುದೋ ವಸ್ತುವಿನಿಂದ ಬಲವಾಗಿ ತಲೆಗೆ ಹೊಡೆದು ಅವರ ಕುತ್ತಿಯಲ್ಲಿದ್ದ ಮಾಂಗಲ್ಯ ಸರ ಹಾಗೂ ಮನೆಯ ಲ್ಲಿದ್ದ ಸುಮಾರು 28 ಪವನು ಚಿನ್ನಾಭರಣ ದರೋಡೆಮಾಡಿ ಪರಾರಿಯಾಗಿದ್ದಾನೆ.
ಮನೆಯ ಟಿ.ವಿ. ವಾಲ್ಯೂಮ್ ಜಾಸ್ತಿ ಇದ್ದುದರಿಂದ ಪಕ್ಕದ ಮನೆಯವರಿಗೆ ಇವರ ಬೊಬ್ಬೆ ಕೇಳಿಸದೇ ದರೋಡೆ ಮಾಡಿ ಪರಾರಿಯಾಗಿದ್ದಾನೆ. ಈತನೇ ಟಿ.ವಿ. ವಾಲ್ಯೂಮ್ ಜಾಸ್ತಿ ಮಾಡಿರಬೇಕು ಎಂದು ಸಂಶಯಿಸಲಾಗಿದೆ.
ಇತ್ತ ಈತನ ಹಲ್ಲೆಯಿಂದ ಬಿದ್ದಿದ್ದ ಮಹಿಳೆ ಸ್ವಲ್ಪ ಹೊತ್ತಿನಲ್ಲಿ ಎಚ್ಚೆತ್ತು ಉಡುಪಿಗೆ ಹೋಗಿದ್ದ ತನ್ನ ಪತಿಗೆ ದೂರವಾಣಿ ಮೂಲಕ ವಿವರ ತಿಳಿಸಿದ್ದು ಅವರು ಬಂದು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಅವರ ಮಗಳ ವಿವಾಹ ಇದ್ದುದರಿಂದ ಮನೆಯಲ್ಲಿ ಚಿನ್ನಾಭರಣ ತಂದಿರಿಸಿದ್ದರು. ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಸಹಿತ ಸುಮಾರು 28 ಪವನಿನಷ್ಟು ಚಿನ್ನಾಭರಣ ದರೋಡೆ ಮಾಡಲಾಗಿದೆ.
ಮಂಗಳೂರು ಕ್ರೈಂ ವಿಭಾಗದ ಡಿಸಿಪಿ ಉಮಾ, ಪಣಂಬೂರು ಎಸಿಪಿ ರಾಜೇಂದ್ರ ಹಾಗೂ ಮೂಲ್ಕಿ ಇನ್‌ಸ್ಪೆ³ಕ್ಟರ್ ಅನಂತಪದ್ಮನಾಭ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕೆ ಆಗಮಿಸಿದ್ದು ತನಿಖೆ ಕಾರ್ಯ ನಡೆದಿದೆ.
ರಾತ್ರಿ ವೇಳೆ ಮಾಮೂಲಾಗಿರುವ ಕಳ್ಳತನ ಈಗ ಹಗಲು ಮನೆಯೊಳಗೆ ಬಂದು ದರೋಡೆ ನಡೆಸುವಂತಹ ಪರಿಸ್ಥಿತಿಗೆ ತಲುಪಿರುವ ಘಟನೆ ಯಿಂದ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಮೂಲ್ಕಿ ಠಾಣಾ ವ್ಯಾಪ್ತಿಯ ವಿವಿಧೆಡೆ ಕಳ್ಳತನ ಮತ್ತು ಕಳ್ಳತನ ಯತ್ನಗಳು ಸರಣಿಯಂತೆ ನಡೆಯು ತ್ತಿರುವಾಗಲೇ ಈ ಹಗಲು ದರೋಡೆ ಪ್ರಕರಣ ಪೊಲೀಸರಿಗೂ ತಲೆ ನೋವಾಗಿ ಪರಿಣಮಿಸಿದೆ.