Advertisement

ಸುಸಜ್ಜಿತ ತಾಯಿ-ಮಕ್ಕಳ ಆಸ್ಪತ್ರೆ ಇಂದು ಲೋಕಾರ್ಪಣೆ

02:20 PM Nov 19, 2017 | |

ಉಡುಪಿ : ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಬಿಆರ್‌ಎಸ್‌ ಸ್ವಾಸ್ಥ್ಯ ಮತ್ತು ಸಂಶೋಧನ ಸಂಸ್ಥೆ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಕರ್ನಾಟಕ ಸರಕಾರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನೆ ನ. 19ರ ಅಪರಾಹ್ನ 2.30ಕ್ಕೆ ಜರಗಲಿದೆ.

Advertisement

ಉಡುಪಿ ಸರಕಾರಿ ಪ.ಪೂ.ಕಾಲೇಜು (ಬೋರ್ಡ್‌ ಹೈಸ್ಕೂಲ್‌) ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.

ಆರೋಗ್ಯ ಸಚಿವ ರಮೇಶ ಕುಮಾರ್‌, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಆರೋಗ್ಯ
ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಅಜಯ್‌ ಸೇಠ್ಠ, ಶಿಕ್ಷಣ ಇಲಾಖೆ ಪ್ರ.ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್‌, ಕೃಷಿ ಇಲಾಖೆ ಕಾರ್ಯದರ್ಶಿ ಮಹೇಶ್ವರ ರಾವ್‌, ಆರೋಗ್ಯ ಇಲಾಖೆ ಆಯುಕ್ತ ಮನೋಜಕುಮಾರ್‌ ಮೀನಾ, ಬಿಆರ್‌ಎಸ್‌ ಸಂಸ್ಥೆ ಅಧ್ಯಕ್ಷ ಡಾ| ಬಿ.ಆರ್‌. ಶೆಟ್ಟಿ, ಉಪಾಧ್ಯಕ್ಷ ಡಾ|
ಸಿ.ಆರ್‌. ಶೆಟ್ಟಿ, ಸಲಹೆಗಾರ ಬಿ.ಎಸ್‌. ಶೆಟ್ಟಿ, ಉಡುಪಿ ಸ.ಪ.ಪೂ. ಕಾಲೇಜು ನಿವೃತ್ತ ಪ್ರಾಂಶುಪಾಲ ನಾಗಪ್ಪಯ್ಯ ಮೊದಲಾದವರು ಪಾಲ್ಗೊಳ್ಳುವರು.

ಸಚಿವ ಪ್ರಮೋದ್‌ ಮಧ್ವರಾಜ್‌ ಅಧ್ಯಕ್ಷತೆ ವಹಿಸುವರು. ಸರಕಾರ-ಬಿಆರ್‌ಎಸ್‌ ಒಪ್ಪಂದ ಸರಕಾರದೊಂದಿಗೆ ಒಪ್ಪಂದ ಮೂಲಕ ಬಿಆರ್‌ಎಸ್‌ ಸಂಸ್ಥೆಯವರು 200 ಹಾಸಿಗೆಯ ಆಸ್ಪತ್ರೆ ನಿರ್ಮಿಸಿದ್ದಾರೆ. 

ಎರಡು ತಳ ಅಂತಸ್ತು, ನೆಲ ಅಂತಸ್ತು, ಮೇಲೆ ಆರು ಮಹಡಿ ಒಟ್ಟು ಒಂಬತ್ತು ಅಂತಸ್ತುಗಳ ಕಟ್ಟಡ ಇದಾಗಿದೆ. ಸದ್ಯವೇ ಹೊರರೋಗಿ ವಿಭಾಗ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಜನವರಿಯಲ್ಲಿ ಪೂರ್ಣಪ್ರಮಾಣದ ಸೇವೆಯನ್ನು ಒದಗಿಸಲಾಗುವುದು. ಇದಾದ ಬಳಿಕ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಡದ ಕಾಮಗಾರಿ ಆರಂಭವಾಗಲಿ¨

Advertisement
Advertisement

Udayavani is now on Telegram. Click here to join our channel and stay updated with the latest news.

Next