Advertisement

Surathkal: ಬೇಡಿಕೆಗಷ್ಟೇ ಸೀಮಿತ ಸುಸಜ್ಜಿತ ಆಸ್ಪತ್ರೆ

02:40 PM Jul 29, 2024 | Team Udayavani |

ಸುರತ್ಕಲ್‌: ಡೆಂಗ್ಯೂ, ಮಲೇರಿಯಾ ಸಹಿತ ಯಾವುದೇ ಜ್ವರ ಬಾಧಿಸಲಿ ಸುರತ್ಕಲ್‌ ಸುತ್ತಮುತ್ತಲಿನ ಜನತೆಗೆ ದುಬಾರಿ ಖಾಸಗಿ ಆಸ್ಪತ್ರೆಯೇ ತತ್‌ಕ್ಷಣದ ಪರಿಹಾರವಾಗಿದೆ. ಕಾರಣ ಸುರತ್ಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರ ಇನ್ನೂ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲು ಸರಕಾರ ಇಚ್ಛಾಶಕ್ತಿ ತೋರಿಲ್ಲ.

Advertisement

ತುಂಬಿ ತುಳುಕುವ ವೆನ್ಲಾಕ್ ಆಸ್ಪತ್ರೆ ಒಂದೆಡೆಯಾದರೆ ಇತ್ತ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ ನಿಯಮಿತವಾಗಿ ಚಿಕಿತ್ಸೆ ನೀಡಲು ಮಾತ್ರ ಸಹಕಾರಿಯಾಗಿದೆ. ಇದರ ನಡುವೆ ಕೈಗಾರಿಕೆ ವಸಾಹುತುವಿನಿಂದ ತುಂಬಿಹೋಗಿರುವ ಸುರತ್ಕಲ್‌ ಕೇಂದ್ರ ಭಾಗದಲ್ಲಿ ಸರಕಾರಿ ಆಸ್ಪತ್ರೆಯ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ.

ತಾಂತ್ರಿಕ ಕಾರಣ ಎಂಬ ಕುಂಟು ನೆವ

ಸುರತ್ಕಲ್‌ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲುರಾಜ್ಯ ಸರಕಾರಕ್ಕೆ ಮನವಿ, ನಿರ್ಣಯ ಕಳುಹಿಸಲಾಗಿದ್ದರೂ ಫಲಶ್ರುತಿ ಇನ್ನೂ ದೊರಕಿಲ್ಲ. ಕೊರೊನೋತ್ತರ ಸಂದರ್ಭ ಎಲ್ಲ ಕ್ರಮವನ್ನು ಸರಕಾರ ಜರಗಿಸುತ್ತದೆ ಎಂದು ವಿಧಾನಸಭೆಯಲ್ಲಿ ಈ ಹಿಂದಿನ ಆರೋಗ್ಯ ಸಚಿವರು ಉತ್ತರ ನೀಡಿದ್ದರೂ ತಾಂತ್ರಿಕ ಕಾರಣ ಎಂಬ ಕುಂಟು ನೆವ ಇಲ್ಲಿನ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವಲ್ಲಿ ಅಡ್ಡಗಾಲು ಹಾಕುತ್ತಿದೆ. 2013ರ ನಗರ ಆರೋಗ್ಯ ಅಭಿಯಾನದಡಿ 50-60 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, 2.5 ಲಕ್ಷ ಜನಸಂಖ್ಯೆಗೆ ನಗರ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕಿದೆ ಎಂಬ ಕಾನೂನು ಇದೀಗ ಬಿಗಡಾಯಿಸುತ್ತಿರುವ ಸಾಂಕ್ರಾಮಿಕ ರೋಗಗಳ ಕಾರಣದಿಂದ ಬದಲಾವಣೆ ಮಾಡಬೇಕಾದ ಸನ್ನಿವೇಶ ಎದುರಾಗಿದೆ.

ಸುರತ್ಕಲ್‌ ಸುತ್ತಮುತ್ತ ಎಂಆರ್‌ಪಿಎಲ್‌, ಎಚ್‌ಪಿಸಿಎಲ್‌, ಬಿಎಎಸ್‌ಎಫ್‌, ಬೈಕಂಪಾಡಿ ಬಳಿ ರಾಜ್ಯದ 2ನೇ ಅತೀ ದೊಡ್ಡ ಕೈಗಾರಿಕೆ ಪ್ರಾಂಗಣವಿದ್ದು, ಆರೋಗ್ಯದ ನಿಟ್ಟಿನಲ್ಲಿ ಅಪಾಯದ ತುರ್ತು ಸ್ಥಿತಿ ಮುಂದಿರಿಸಿ ಸರಕಾರದ ಗಮನ ಸೆಳೆಯಲಾಗಿತ್ತು.

Advertisement

ಜಾಗದ ಸಮಸ್ಯೆಯಿಲ್ಲ

ಈಗಾಗಲೇ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ ಬೃಹತ್‌ ವ್ಯಾಪ್ತಿ ಹೊಂದಿದೆ. ಆದರೆ ಸುರತ್ಕಲ್‌ ಸುತ್ತಮುತ್ತಲಿನ ಜನರ ನಿರೀಕ್ಷೆ ಈಡೇರಿಸಲು ಸಾಧ್ಯವಾಗುತ್ತಿಲ ಈ ಭಾಗದಲ್ಲಿ ಕೈಗಾರಿಕೆ ಪ್ರದೇಶದಲ್ಲಿ ಲಕ್ಷಾಂತರ ಕಾರ್ಮಿಕರು ಉದ್ಯೋಗದಲ್ಲಿರುವುದನ್ನು ಹಾಗೂ ಅಪಾಯಕಾರಿ ಸನ್ನಿವೇಶದಲ್ಲಿ ಕಂಪೆನಿಗಳ ನಡುವೆ ಬದುಕುವುದನ್ನು ಪರಿಗಣನೆಗೆ ತೆಗೆದುಕೊಂಡು ಮೇಲ್ದರ್ಜೆಗೆ ಏರಿಸಬೇಕು. ಜನಸಂಖ್ಯೆ ಆಧಾರದಲ್ಲಿ ಅಲ್ಲ ಎಂಬುದರಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ. ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಾಗದ ಸಮಸ್ಯೆಯಿಲ್ಲ. ಸುಸಜ್ಜಿತ ಕಟ್ಟಡ ನಿರ್ಮಾಣ ಸಾಧ್ಯವಿದೆ.

ಮೇಲ್ದರ್ಜೆಗೆರಿದಲ್ಲಿ ದೊರೆಯುವ ಸೌಲಭ್ಯ

ಸುರತ್ಕಲ್‌ ಆರೋಗ್ಯ ಕೇಂದ್ರ ಮೇಲ್ದರ್ಜೆಗೆರಿದಲ್ಲಿ ಹಲವು ಸೌಲಭ್ಯ ಸ್ಥಳೀಯ ಜನತೆಗೆ ಲಭ್ಯವಾಗಲಿದೆ. ಈಗ ಹೊರಗಿನಿಂದ ದುಬಾರಿ ಬೆಲೆ ತೆತ್ತು ಹಲವು ಟೆಸ್ಟ್‌ ಗಳನ್ನು ಮಾಡಬೇಕಿದ್ದು, ಬಡ ವರ್ಗದ ಜನತೆಗೆ ಅದು ತ್ರಾಸದಾಯಕ. ಈ ಕೇಂದ್ರ ಉನ್ನತೀಕರಣದ ಬಳಿಕ ಸುಸಜ್ಜಿತ 50-60 ಬೆಡ್‌ ಸೌಲಭ್ಯ, ಶಸ್ತ್ರ ಚಿಕಿತ್ಸಾ ಕೊಠಡಿ, ಆಕ್ಸಿಜನ್‌ ವ್ಯವಸ್ಥೆ, ಪ್ರಯೋಗಾಲಯ, ಎಕ್ಸರೇ ವಿಭಾಗ, ತುರ್ತು ನಿಗಾ ಘಟಕ, ಪೋಸ್ಟ್‌ ಮಾರ್ಟಂ ಸೌಲಭ್ಯ, ಆ್ಯಂಬುಲೆನ್ಸ್‌ ಸೇವೆ, ಹೆರಿಗೆ ವಾರ್ಡ್‌, ನೇತ್ರ ಚಿಕಿತ್ಸೆ, ದಂತ ವೈದ್ಯ ವಿಭಾಗ ಸಹಿತ ನುರಿತ ವೈದ್ಯರ ಸೇವೆ ಸಿಗಲಿದೆ. ಇದರೊಂದಿಗೆ ರೋಗಿಗಳಿಗೆ ಉಚಿತ 2 ಹೊತ್ತಿನ ಊಟದ ವ್ಯವಸ್ಥೆ, ಉಪಾಹಾರ ಸಿಗುತ್ತದೆ.ವೆನ್ಲಾಕ್ ಆಸ್ಪತ್ರೆ ಐದು ಜಿಲ್ಲೆ ವ್ಯಾಪ್ತಿ ಹೊಂದಿದ್ದು, ಅನ್ಯ ಜಿಲ್ಲೆಯ ರೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಸುರತ್ಕಲ್‌ ಈ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿದರೆ ಸ್ಥಳೀಯರಿಗೂ ಉಚಿತ ಚಿಕಿತ್ಸೆಗೆ, ಸೌಲಭ್ಯ ಸಿಗಲಿದೆ. ಪ್ರಸ್ತುತ ಪ್ರಾಥಮಿಕ ಆರೋಗ್ಯ ಕೇಂದ್ರವಿರುವಲ್ಲಿ ಸಮುದಾಯ ಕೇಂದ್ರ ಸ್ಥಾಪನೆ ಸ್ಥಳಾವಕಾಶವಿದೆ.

ಈ ಭಾಗದಲ್ಲಿ ಕೈಗಾರಿಕೆ ಪ್ರದೇಶದಲ್ಲಿ ಲಕ್ಷಾಂತರ ಕಾರ್ಮಿಕರು ಉದ್ಯೋಗದಲ್ಲಿರುವುದನ್ನು ಹಾಗೂ ಅಪಾಯಕಾರಿ ಸನ್ನಿವೇಶದಲ್ಲಿ ಕಂಪೆನಿಗಳ ನಡುವೆ ಬದುಕುವುದನ್ನು ಪರಿಗಣನೆಗೆ ತೆಗೆದುಕೊಂಡು ಮೇಲ್ದರ್ಜೆಗೆ ಏರಿಸಬೇಕು. ಜನಸಂಖ್ಯೆ ಆಧಾರದಲ್ಲಿ ಅಲ್ಲ ಎಂಬುದರ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ. ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಾಗದ ಸಮಸ್ಯೆಯಿಲ್ಲ. ಸುಸಜ್ಜಿತ ಕಟ್ಟಡ ನಿರ್ಮಾಣ ಸಾಧ್ಯವಿದೆ. ಮೇಲ್ದರ್ಜೆಗೆರಿದಲ್ಲಿ ದೊರೆಯುವ ಸೌಲಭ್ಯ ಸುರತ್ಕಲ್‌ ಆರೋಗ್ಯ ಕೇಂದ್ರ ಮೇಲ್ದರ್ಜೆಗೆರಿದಲ್ಲಿ ಹಲವು ಸೌಲಭ್ಯ ಸ್ಥಳೀಯ ಜನತೆಗೆ ಲಭ್ಯವಾಗಲಿದೆ. ಈಗ ಹೊರಗಿನಿಂದ ದುಬಾರಿ ಬೆಲೆ ತೆತ್ತು ಹಲವು ಟೆಸ್ಟ್‌ ಗಳನ್ನು ಮಾಡಬೇಕಿದ್ದು, ಬಡ ವರ್ಗದ ಜನತೆಗೆ ಅದು ತ್ರಾಸದಾಯಕ. ಈ ಕೇಂದ್ರ ಉನ್ನತೀಕರಣದ ಬಳಿಕ ಸುಸಜ್ಜಿತ 50-60 ಬೆಡ್‌ ಸೌಲಭ್ಯ, ಶಸ್ತ್ರ ಚಿಕಿತ್ಸಾ ಕೊಠಡಿ, ಆಕ್ಸಿಜನ್‌ ವ್ಯವಸ್ಥೆ, ಪ್ರಯೋಗಾಲಯ, ಎಕ್ಸರೇ ವಿಭಾಗ, ತುರ್ತು ನಿಗಾ ಘಟಕ, ಪೋಸ್ಟ್‌ ಮಾರ್ಟಂ ಸೌಲಭ್ಯ, ಆ್ಯಂಬುಲೆನ್ಸ್‌ ಸೇವೆ, ಹೆರಿಗೆ ವಾರ್ಡ್‌, ನೇತ್ರ ಚಿಕಿತ್ಸೆ, ದಂತ ವೈದ್ಯ ವಿಭಾಗ ಸಹಿತ ನುರಿತ ವೈದ್ಯರ ಸೇವೆ ಸಿಗಲಿದೆ. ಇದರೊಂದಿಗೆ ರೋಗಿಗಳಿಗೆ ಉಚಿತ 2 ಹೊತ್ತಿನ ಊಟದ ವ್ಯವಸ್ಥೆ, ಉಪಾಹಾರ ಸಿಗುತ್ತದೆ.ವೆನ್ಲಾಕ್ ಆಸ್ಪತ್ರೆ ಐದು ಜಿಲ್ಲೆ ವ್ಯಾಪ್ತಿ ಹೊಂದಿದ್ದು, ಅನ್ಯ ಜಿಲ್ಲೆಯ ರೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಸುರತ್ಕಲ್‌ ಈ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿದರೆ ಸ್ಥಳೀಯರಿಗೂ ಉಚಿತ ಚಿಕಿತ್ಸೆಗೆ, ಸೌಲಭ್ಯ ಸಿಗಲಿದೆ. ಪ್ರಸ್ತುತ ಪ್ರಾಥಮಿಕ ಆರೋಗ್ಯ ಕೇಂದ್ರವಿರುವಲ್ಲಿ ಸಮುದಾಯ ಕೇಂದ್ರ ಸ್ಥಾಪನೆ ಸ್ಥಳಾವಕಾಶವಿದೆ.

ಆರೋಗ್ಯ ಸಚಿವರ ಗಮನ ಸೆಳೆಯುತ್ತೇನೆ
ಪ್ರಸ್ತುತ ಸುರತ್ಕಲ್‌ನಲ್ಲಿ ಅಪಾಯಕಾರಿ ಕೈಗಾರಿಕೆ ಘಟಕಗಳು ಇರುವುದರಿಂದ ವಿಶೇಷ ಪ್ರಾತಿನಿಧ್ಯ ನೀಡಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದೇನೆ. ಕೊರೊನಾ ಸಂದರ್ಭ ಮೇಲ್ದರ್ಜೆಯ ಪ್ರಕ್ರಿಯೆ ವಿಳಂಬಗೊಂಡಿದೆ. ಇದೀಗ ಮತ್ತೆ ವಿಧಾನಸಭೆಯಲ್ಲಿ ವಿಚಾರ ಪ್ರಸ್ತಾವಿಸಿ ಆರೋಗ್ಯ ಸಚಿವರ ಗಮನ ಸೆಳೆಯುತ್ತೇನೆ.
-‌ ಡಾ| ಭರತ್‌ ಶೆಟ್ಟಿ ವೈ., ಶಾಸಕರು, ಮಂಗಳೂರು ನಗರ ಉತ್ತರ

Advertisement

Udayavani is now on Telegram. Click here to join our channel and stay updated with the latest news.

Next