Advertisement

ರೋಗಗಳನ್ನು ಆಹ್ವಾನಿಸುತ್ತಿರುವ ತ್ಯಾಜ್ಯ ರಾಶಿ !

06:15 AM May 26, 2018 | Team Udayavani |

ಕುಂಬಳೆ: ಡೆಂಗ್ಯೂ ಮಲೇರಿಯಾ ಮುಂತಾದ ಮಾರಕ ರೋಗಗಳ‌ ಭಯ ಎಲ್ಲೆಡೆ ಕಾಡುತ್ತಿದೆ. ಪ್ರಾಣಿ ಪಕ್ಷಿಗಳಿಂದ ಈ ರೋಗಗಳು ಪಸರಿಸುತ್ತಿವೆ ಎಂದೂ ಬೆಟ್ಟು ಮಾಡಲಾಗುತ್ತಿದೆ.

Advertisement

ಆದರೆ ಯಾವುದೇ ಮಾರಕ ರೋಗಗಳಿಗೂ ಪ್ರಾಣಿ ಪಕ್ಷಿಗಳಿಗಿಂತ ನಾವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲೆಂದರಲ್ಲಿ ಲಂಗು ಲಗಾಮಿ ಲ್ಲದೆ ತ್ಯಾಜ್ಯ ಸುರಿಯುವುದರಿಂದ ಈ ಪ್ರದೇಶದಲ್ಲಿ ಗಬ್ಬು ವಾಸನೆಯಲ್ಲದೆ ಮಾರಕ ರೋಗಾಣು ಸೃಷ್ಟಿಯಾಗುತ್ತಿದೆ.

ಅಂಗಡಿ, ಹೋಟೆಲ್‌, ಮಾಂಸ ದಂಗಡಿಯ ಮಾಲಿನ್ಯವನ್ನು ಕೆಲವೆಡೆ ರಾಶಿ ಹಾಕುವುದರಿಂದ ಈ ಪ್ರದೇಶ ಮಾತ್ರವಲ್ಲ ಸುತ್ತಮುತ್ತಲ ಪರಿಸರವೂ ಮಲಿನವಾಗುವುದು. ಪ್ರಾಣಿ ಪಕ್ಷಿಗಳು ಮಾಲಿನ್ಯರಾಶಿಯನ್ನು ಹರಡಿ ಗಲೀಜು ಮಾಡುವುದನ್ನು ಎಲ್ಲೆಡೆ ಕಾಣಬಹುದು. ಇದೀಗ ಹೆದ್ದಾರಿಯಿಂದ ತೊಡಗಿ ಗ್ರಾಮೀಣ ಪ್ರದೇಶಗಳ ರಸ್ತೆ ಪಕ್ಕದಲ್ಲಿ ತ್ಯಾಜ್ಯ ಮಾಲಿನ್ಯದ ಪೊಟ್ಟಣವನ್ನು ಎಸೆಯುವ ದಂಧೆ ಸಕ್ರಿಯವಾಗಿದೆ. ಇದರಲ್ಲಿ ಕೋಳಿಯ ತ್ಯಾಜ್ಯಗಳೇ ಅಧಿಕವಾಗಿರುವುದು. ಇದರಿಂದ ಜನರು ಭಯಭೀತರಾಗಿದ್ದಾರೆ. ರಾತ್ರಿ ಕಾಲದಲ್ಲಿ ವಾಹನಗಳ ಮೂಲಕ ಮಾಂಸ ತ್ಯಾಜ್ಯವನ್ನು ತಂದು ರಸ್ತೆ ಪಕ್ಕದ ಪೊದರಿನಲ್ಲಿ ಎಸೆದು ಪರಾರಿಯಾಗುವ ತಂಡ ಸಕ್ರಿಯವಾಗಿದೆ. ಈ ತಂಡ ವನ್ನು ವಿಚಾರಿಸಲೂ ಯಾರೂ ಮುಂದಾಗು ತ್ತಿಲ್ಲ. ಮಾರಕಾಯುಧ ಗಳೊಂದಿಗೆ ಹಲ್ಲೆಗೆ ಸಿದ್ಧರಾಗಿ ಆಗಮಿಸುವ ತಂಡ ದಿಂದ ಭಯಭೀತರಾಗಿ ತಂಡವನ್ನು ತಡೆಯಲು ಮುಂದಾಗುವುದಿಲ್ಲ. ಪೊಲೀಸರೂ ಇದನ್ನು ನಿಗ್ರಹಿಸಲು ಕ್ರಮ ಕೈಗೊಳ್ಳುವುದಿಲ್ಲವೆಂಬ ಆರೋಪ ಸಾರ್ವಜನಿಕರದು.

ಕೆಲವು ಕಡೆಗಳಲ್ಲಿ ಕಾಟಾಚಾರಕ್ಕೆ ಮಾಲಿನ್ಯದ ರಾಶಿ ಮೇಲೆ ಲಾರಿಯಲ್ಲಿ ಮಣ್ಣು ತಂದು ಸುರಿಯುತ್ತಿದ್ದಾರೆ. ಆದರೆ ಇದಕ್ಕೆ ಶಾಶ್ವತ ಪರಿಹಾರವಿಲ್ಲ. ಕೆಲದಿನಗಳ ಬಳಿಕ ಮತ್ತೆ ಇಲ್ಲಿ ಮಾಲಿನ್ಯ ರಾಶಿ ತುಂಬಿ ತುಳುಕುವುದನ್ನು ಕಾಣಬಹುದು.ಆದುದರಿಂದ ಮಾಲಿನ್ಯ ರಾಶಿ ತಡೆಗೆ ಶಾಶ್ವತ ಪರಿಹಾರ ಕಾಣಬೇಕಾಗಿದೆ.

ಕರ್ನಾಟಕ ಗಡಿಪ್ರದೇಶವಾದ ತಲಪಾಡಿಯಿಂದ ಮಂಜೇಶ್ವರ ಉಪ್ಪಳ, ಕೈಕಂಬ, ಮಂಗಲ್ಪಾಡಿ, ನಯಾಬಜಾರ್‌, ಬಂದ್ಯೋಡು, ಕುಂಬಳೆ, ಮೊಗ್ರಾಲ್‌, ಚೌಕಿ, ಕಾಸರಗೋಡು ಸಹಿತ ರಸ್ತೆ ಪಕ್ಕದಲ್ಲಿ ತ್ಯಾಜ್ಯ ರಾಶಿಗಳನ್ನು ಕಾಣಬಹುದು. ಅದರಲ್ಲೂ ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ ಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ರಸ್ತೆ ಪಕ್ಕದಲ್ಲಿ ಮಾಲಿನ್ಯ ರಾಶಿಯನ್ನು ನಿತ್ಯ ಕಾಣಬಹುದು. ಆದರೆ ಇಲ್ಲಿನ ವೈದ್ಯರಿಗೆ ಮತ್ತು ಸ್ಥಳೀಯಾಡಳಿತಕ್ಕೆ ಇದು ಕ್ಯಾರೇ ಅಲ್ಲವೆಂಬಂತಿದೆ. 

Advertisement

– ಅಚ್ಯುತ ಚೇವಾರ್‌

Advertisement

Udayavani is now on Telegram. Click here to join our channel and stay updated with the latest news.

Next