ಕೆಯ್ಯೂರು: ದೇಯಿ ಬೈದ್ಯೆತಿ ವಿಗ್ರಹವನ್ನು ಅವಮಾನಿಸಿ, ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಡುವ ಮೂಲಕ ಹಿಂದೂ ಸಮಾಜದ ಭಕ್ತರ ಭಾವನೆಗಳ ವಿರುದ್ಧವಾಗಿ ವರ್ತಿಸಿದ ಮತಾಂಧ ವ್ಯಕ್ತಿಗಳ ವಿರುದ್ಧ ಮತ್ತು ಜಿಲ್ಲೆಯ ಶ್ರದ್ಧಾ ಕೇಂದ್ರಗಳ ರಕ್ಷಣೆಗಾಗಿ ಭಾರತೀಯ ಜನತಾ ಪಾರ್ಟಿಯ ನೇತೃತ್ವದಲ್ಲಿ ಅ. 10ರಂದು ಶ್ರೀ ಮಹಾಲಿಂಗೇಶ್ವರ ದೇಗುಲದ ಗದ್ದೆಯಿಂದ ದೇಯಿ ಬೈದ್ಯೆತಿ ಔಷಧ ವನದ ತನಕ ಬೃಹತ್ ಪಾದಯಾತ್ರೆ ನಡೆಯಲಿದೆ.
ಇದರ ಪೂರ್ವಭಾವಿ ಸಭೆಯು ಬಾಲಕೃಷ್ಣ ರೈ ಗೋಕುಲ ಕುಂಬ್ರ ಅವರ ನಿವಾಸದಲ್ಲಿ ಚನಿಲ ತಿಮ್ಮಪ್ಪ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಪಾದಯಾತ್ರೆಯ ಬಗ್ಗೆ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾಹಿತಿ ನೀಡಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಸಂಜೀವ ರಾಧಾಕೃಷ್ಣ ಆಳ್ವ, ಕೆದಂಬಾಡಿ ಉಸ್ತುವಾರಿ ನಿತೀಶ್ ಕುಮಾರ್ ಶಾಂತಿವನ, ನೆಟ್ಟಣಿಗೆ ಮುಟ್ನೂರು ಶಕ್ತಿ ಕೇಂದ್ರದ ಅಧ್ಯಕ್ಷ ಲೋಕೇಶ್ ಚಾಕೋಟೆ, ಕಾರ್ಯದರ್ಶಿ ವಿಜಯ ಕುಮಾರ್ ರೈ ಕೋರಂಗ,. ಬಿಜೆಪಿ ಗ್ರಾ.ಪಂ. ಸಮಿತಿ ಕೆದಂಬಾಡಿ ಅಧ್ಯಕ್ಷ ರತನ್ ರೈ ಕುಂಬ್ರ, ಕಾರ್ಯದರ್ಶಿ ಭಾಸ್ಕರ್ ಬಲ್ಲಳ್, ಕೆ.ಎಂ. ಎಫ್. ನಿರ್ದೇಶಕಿ ವೀಣಾ ಆರ್. ರೈ, ಬೂತ್ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಯಶೋಧರ ಚೌಟ, ಕಾರ್ಯದರ್ಶಿ ಮಹಾಬಲ ರೈ ಕುಕ್ಕುಜೋಡು, ತಾಲೂಕು ರೈತ ಮೋರ್ಚಾ ಪ್ರಭಾರಿ ಕರುಣಾಕರ ರೈ ಅತ್ರೆಜಾಲು, ತಾಲೂಕು ಸಮಿತಿ ಸದಸ್ಯ ಜಯರಾಮ ರೈ ಮಿತ್ರಂಪಾಡಿ, ಪಂಚಾಯತ್ ಸದಸ್ಯೆ ಪುಷ್ಪಾ ಎಂ. ಬೊಳ್ಳೋಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ನಿಮಿತಾ ರೈ, ಉದಯ ಕುಮಾರ್ ಇದ್ಯಪ್ಪೆ ಉಪಸ್ಥಿತರಿದ್ದರು. ರತನ್ ರೈ ಕುಂಬ್ರ ಅವರು ಸ್ವಾಗತಿಸಿ, ಭಾಸ್ಕರ್ ಬಲ್ಲಾಳ್ ವಂದಿಸಿದರು.