ಕಾಂಗ್ರೆಸ್ ಹೈಕಮಾಂಡ್ ಡಿಸೆಂಬರ್ 23ರಂದು ನನ್ನನ್ನು ಎಐಸಿಸಿ ಕಾರ್ಯ ದರ್ಶಿಯಾಗಿ ನೇಮಿಸಿ ಕೇರಳ ಉಸ್ತುವಾರಿಯಾಗಿ ನಿಯೋಜಿ ಸಿತು. ತತ್‌ಕ್ಷಣದಿಂದಲೇ ನಾನು ಕಾರ್ಯಾರಂಭ ಮಾಡಿದೆ. ಬರುವ ಮೊದಲು ಮಾನಸಿಕವಾಗಿ ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡೇ ಬಂದೆ.
ಕೇರಳ ವೈವಿಧ್ಯಮಯ ರಾಜ್ಯ. ಇಲ್ಲಿನ ಆಚಾರ- ವಿಚಾರ, ಸಂಸ್ಕೃತಿ, ಜನರ ಜೀವನ, ಪದ್ಧತಿ ಎಲ್ಲವೂ ಸುಂದರ. ಚುನಾವಣ ಉಸ್ತು ವಾರಿ ಯಾಗಿ ಬಂದ ನನಗೆ ಮೊದಲು ಎದುರಾಗಿದ್ದು ಭಾಷೆಯ ಸಮಸ್ಯೆ.
ಕರಾವಳಿ ಗಡಿ ಭಾಗದ ನನಗೆ ಮಲಯಾಳ ಟಚ್ ಇತ್ತಾದರೂ ಕಲಿತಿರಲಿಲ್ಲ. ಆದರೆ ನಾನು ಇಲ್ಲಿ ಬಂದ ಅನಂತರ ಭಾಷೆ ಕಲಿಯಲು ಪ್ರಾರಂಭಿಸಿ ಸಂಪೂರ್ಣವಾಗಿ ಕಲಿತುಬಿಟ್ಟೆ. ಇದೀಗ ಪ್ರಚಾರ ಸಭೆ, ಪಕ್ಷದ ಮುಖಂಡರ ಸಭೆಗಳಲ್ಲಿ ಮಲಯಾಳದಲ್ಲಿಯೇ ಮಾತನಾಡುತ್ತೇನೆ. ನಾನು ಹೊರಗಿನವನು ಎಂದು ಅವರಿಗೆ ಅನಿಸುವುದೇ ಇಲ್ಲ. ಆ ರೀತಿ “ಮಿಕ್ಸ್ ಅಪ್’ ಆಗಿದ್ದೇನೆ. ಭಾಷೆ ಅನಂತರ ಇಲ್ಲಿನ ಕಾರ್ಯಕರ್ತರ ಮನಸ್ಥಿತಿ ಅರ್ಥ ಮಾಡಿಕೊಂಡರೆ, ಇಲ್ಲಿ ಬಂದ ಮೇಲೆ ನನಗೆ ಗೊತ್ತಾಯಿತು, ಇಲ್ಲಿನ ಪರಿಸ್ಥಿತಿಗೂ ನಮ್ಮ ಕರ್ನಾಟಕದ ಪರಿಸ್ಥಿತಿಗೂ ಅಜಗಜಾಂತರ ಎಂಬುದು. ಕೇರಳದಲ್ಲಿ ಕೇಡರ್ ಬೇಸ್ ಸಿಸ್ಟಂ. ಇಲ್ಲಿನ ಕಾರ್ಯ ಕರ್ತರಿಗೆ ಬದ್ಧತೆ ಇದೆ. ಪಕ್ಷದ ಕೆಲಸ ಅಚ್ಚುಕಟ್ಟಾಗಿ ಮತ್ತು ಮುಕ್ತ ಮನಸ್ಸಿನಿಂದ ಶ್ರದ್ಧೆಯಿಂದ ಮಾಡುತ್ತಾರೆ. ಇಲ್ಲಿ ಪಕ್ಷ ವೇ ಸುಪ್ರೀಂ. ನಮ್ಮಲ್ಲಿ ಶಾಸಕರು ಅಥವಾ ಸಂಸದರು ಸುಪ್ರೀಂ ಎಂಬಂತಿರುತ್ತದೆ. ಇಲ್ಲಿ ಪಕ್ಷವೇ ಬೇರೆ ಜನ ಪ್ರತಿ ನಿಧಿ ಅಥವಾ ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯ ರ್ಥಿಗಳು ಬೇರೆ ಬೇರೆಯಾಗಿ ಕೆಲಸ ಮಾಡುವುದು. ಪಕ್ಷಕ್ಕೆ ಬೇರೆ ಜವಾಬ್ದಾರಿ, ಅಭ್ಯರ್ಥಿಗಳಿಗೆ ಬೇರೆ ಜವಾ ಬ್ದಾರಿ.
ಕೇರಳದ ಜನರು ತುಂಬಾ ಉತ್ತಮ ಜನ, ಮುಕ್ತವಾ ಗಿರುತ್ತಾರೆ. ಬೇರೆ ಕಡೆಯಿಂದ ಬಂದವರಿಗೆ ಆತಿಥ್ಯ ನೀಡುವುದರಲ್ಲಿ ಮತ್ತು ಸ್ಪಂದನೆಯಲ್ಲಿ ಅವರದ್ದೇ ಆದ ವಿಶೇಷತೆ ಹೊಂದಿದ್ದಾರೆ. ಚುನಾವಣೆ ಉಸ್ತುವಾರಿಯಾಗಿ ಬಂದ ನಾನು ಇಲ್ಲಿ ಫುಲ್‌ಟೈಂ ಕೇರಳದವನಾಗಿಯೇ ಕೆಲಸ ಮಾಡುತ್ತಿದ್ದೇನೆ. ಸೆಂಟ್ರಲ್ ಟ್ರಾವೆಂಕೂರ್ ನನಗೆ ಪ್ರಮುಖ ಜವಾಬ್ದಾರಿ. ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ಪಟ್ಟನಂತಿಟ್ಟ, ತ್ರಿಶೂರ್ ಜಿಲ್ಲೆಗಳ 48 ವಿಧಾನಸಭೆ ಕ್ಷೇತ್ರಗಳು ಈ ವ್ಯಾಪ್ತಿಗೆ ಬರುತ್ತವೆ. ಸರಕಾರ ರಚನೆಗೆ ಬೇಕಾದ ಹೆಚ್ಚು ಸೀಟುಗಳು ಈ ವ್ಯಾಪ್ತಿಯಿಂದಲೇ ದೊರಕಿಸಿಕೊಡುವ ಹೊಣೆಗಾರಿಕೆ ನೀಡಲಾಗಿದೆ. ಕ್ರಿಶ್ಚಿಯನ್ ಸಮುದಾಯದವರು ಇಲ್ಲಿ ಹೆಚ್ಚು ಇದ್ದಾರೆ. ಬೇರೆ ಸಮುದಾಯದವರೂ ಇದ್ದಾರೆ.
ನಾನು ಇಲ್ಲಿನ ಧಾರ್ಮಿಕ ಮುಖಂಡರು, ಸಮಾಜ ಸೇವಕರು, ಸಂಘ-ಸಂಸ್ಥೆಗಳು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಹೀಗೆ ಪ್ರತೀ ವರ್ಗದ ಜತೆಯೂ ಸಂವಾದ ನಡೆಸಿದ್ದೇನೆ. ಹಿರಿಯ ನಾಯಕರ ಜತೆ ಸಮಾಲೋಚನೆ ನಡೆಸಿದ್ದೇನೆ. ಚುನಾವಣೆ ಹಾಗೂ ಅದಕ್ಕೆ ಜನರ ಪಲ್ಸ್ ತಿಳಿಯುವುದು ಒಂದು ಕಡೆ. ಆದರೆ ಮತ್ತೂಂದೆಡೆ ಕೇರಳ ಅರ್ಥ ಮಾಡಿಕೊಳ್ಳಬೇಕಾದರೆ ಜನಸಾಮಾನ್ಯರ ಜತೆ ಬೆರೆಯಬೇಕು. ಆಚಾರ-ವಿಚಾರ ತಿಳಿದುಕೊಳ್ಳಬೇಕು. ಆಹಾರ ಸಂಸ್ಕೃತಿ ಸೇರಿ ಸಾಂಸ್ಕೃತಿಕ ಹಿರಿಮೆ, ದೇಗುಲಗಳ ಇತಿಹಾಸ ಪ್ರತಿಯೊಂದು ತಿಳಿದುಕೊಳ್ಳುವ ಕುತೂಹಲ ನನಗೆ. ಆ ನಿಟ್ಟಿನಲ್ಲಿ ಈ ಜವಾಬ್ದಾರಿ ನನಗೆ ಸಾಕಷ್ಟು ಕಲಿಸಿದೆ.
ನಿತ್ಯ ನಾನು ಬೆಳಗ್ಗೆ ಎದ್ದರೆ ರಾತ್ರಿವರೆಗೂ ನಿರಂತರವಾಗಿ ಕಾರ್ಯಕರ್ತರು ಮುಖಂಡರ ಜತೆ ಇರುತ್ತೇನೆ. ಅವರ ಜತೆಯೇ ಊಟ, ತಿಂಡಿ. ರಾಜ್ಯದ ಚುನಾವಣೆ ಅಷ್ಟೇ ಅಲ್ಲದೆ, ದೇಶದ ಸ್ಥಿತಿಗತಿ, ಕೊರೊನಾ ಪರಿಣಾಮ, ರಾಜ್ಯದ ಅಭಿವೃದ್ಧಿ ಮತ್ತಿತರ ವಿಷಯಗಳ ಬಗ್ಗೆ ಜನರು ಆಸಕ್ತಿಯಿಂದ ಚರ್ಚಿಸುತ್ತಾರೆ. ಇದು ನನಗೆ ಖುಷಿಯ ಸಂಗತಿ. ಚುನಾವಣೆ ಉಸ್ತುವಾರಿಯಾಗಿ ನನಗೆ ಇದು ಒಂದು ರೀತಿಯ ವಿಶಿಷ್ಟ ಅನುಭವ. ಒಂದು ರಾಜ್ಯವನ್ನು ಅಲ್ಲಿನ ಜನ ಸಂಸ್ಕೃತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವ ಅವಕಾಶ ಎಂದೇ ಭಾವಿಸಿದ್ದೇನೆ.
– ಐವನ್ ಡಿಸೋಜಾ, ಕೇರಳ ಕಾಂಗ್ರೆಸ್ ಉಸ್ತುವಾರಿ