Advertisement

ಸಂಗೀತೋಪಕರಣ ಅಪೂರ್ವ ಸಂಗ್ರಹ

10:39 AM Nov 24, 2017 | |

ಉಡುಪಿ: ಧರ್ಮಸಂಸದ್‌ ಆವರಣದಲ್ಲಿ ನಡೆಯುವ ಅಪೂರ್ವ ಹಿಂದೂ ವೈಭವ ಪ್ರದರ್ಶಿನಿಯಲ್ಲಿ ವಿಶಿಷ್ಟ ಸಂಗೀತೋಪಕರಣಗಳ ಸಂಗ್ರಹ ಅನಾವರಣಗೊಂಡಿದೆ.

Advertisement

ಇವು ಹುಬ್ಬಳ್ಳಿಯ ಡಾ| ಗಂಗೂಬಾಯಿ ಹಾನಗಲ್‌ ಸಂಗೀತ ವಸ್ತು ಸಂಗ್ರಹಾಲಯದ ಸಂಗೀತೋಪಕರಣಗಳು. ಉಡುಪಿಗೆ ತಂದವರು ಗಂಗೂಬಾಯಿ ಅವರ ಮೊಮ್ಮಗ ಮನೋಜ ಬಾಬೂರಾವ್‌ ಹಾನಗಲ್‌. ಇದರಲ್ಲಿ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ವಾದ್ಯಗಳು ಇವೆ. ತಂತಿವಾದ್ಯ, ಚರ್ಮವಾದ್ಯ, ಹವಾ ವಾದ್ಯ, ಮಣ್ಣಿನ ವಾದ್ಯ, ಗಾಜಿನ ವಾದ್ಯ, ಬಾಬೂ ವಾದ್ಯ, ಲೋಹ ವಾದ್ಯ ಹೀಗೆ 200 ವಾದ್ಯಗಳನ್ನು ನೋಡಬಹುದಾಗಿದೆ.

ತಾನಪುರ, ತಂಬೂರಿ, ವೀಣೆ, ಸಿತಾರ, ಸಾರಂಗಿ, ವಯಲಿನ್‌, ರುದ್ರ ವೀಣೆ, ಕಚುವಾ ಸಿತಾರ, ಸರೋದ್‌, ದಿಲ್‌ರುಬ, ಮೆಂಡೊಲಿನ್‌, ಸ್ವರಮಂಡಳ, ಬೀನ, ಬಲ್‌ಬುಲ್‌ ತರಂಗ, ಸುರ ಪೆಟ್ಟಿಗೆ, ಘಟಂ, ಭಜನ ತಾನಪುರ, ತಬಲ, ಡಗ್ಗಾ, ಹಾರ್ಮೋನಿಯಂ, ತಾವುಸ, ಸುರಸೋಟ, ಜಲತರಂಗ, ಏಕತಾರಾ, ಡೊಳ್ಳು, ನಗಾರಿ, ಕುಡಕಿ, ಚೆಂಡೆ, ಶಂಖ, ಸಾಂಬಾಳ, ಸುರಪೆಟ್ಟಿಗೆ, ಕಹಳೆ, ತುಂತುನಿ, ಪುಂಗಿ, ಶಹನಾಯಿ, ಟ್ರಂಪ್‌ಪ್ಯಾಡ್‌, ಬ್ಯಾಂಡ್‌ಸೆಟ್‌, ಬಿಗುಲು, ಗೆಜ್ಜೆ, ಘಂಟೆ, ಕೊಳಲು, ಬೆಂಗಾಲಿ, ಏಕತಾರಾ, ಹಲಗೆ, ಡುಕ್ಕಡ, ಗುಮ್ಮುಟಿ, ಸುರಸೋಟ, ಜಗ್ಗಲಗೆ ಹೀಗೆ ವಿವಿಧ ಚರ್ಮವಾದ್ಯ, ಬುಡಕಟ್ಟು ವಾದ್ಯಗಳಿವೆ.

ವಾದ್ಯ ಸಂಗ್ರಹ ಪ್ರದರ್ಶನಕ್ಕೆ ಸ್ಟೀಫಿನ್‌ ಲುಂಜಾಳ, ರಾಧಿಕಾ ಬನ್ಸೋಡೆ, ಭಾರತಿ ಪತ್ತಾರ, ಓಂಪ್ರಸಾದ ಪತ್ತಾರ, ಅಪೂರ್ವ ಪತ್ತಾರ ಮತ್ತಿತರರು ಶ್ರಮಿಸಿದ್ದಾರೆ. ನೂರಕ್ಕೂ ಹೆಚ್ಚು ವರ್ಷಗಳ ಹಿಂದಿನ ವಾದ್ಯಗಳೂ ಇವೆ. ಉ.ಪ್ರ., ಬಿಹಾರ ಮೊದಲಾದ ರಾಜ್ಯಗಳಿಂದ ಸಂಗ್ರಹಿಸಲಾಗಿದೆ. 2013ರಲ್ಲಿ ಹುಬ್ಬಳ್ಳಿಯಲ್ಲಿ ಆರೆಸ್ಸೆಸ್‌ ಯೋಜಿಸಿದ ಹಿಂದೂ ಸಂಗಮದಲ್ಲಿ 1.5 ಲಕ್ಷ ಜನರು ಸಂಗೀತ ಪರಿಕರಗಳನ್ನು ವೀಕ್ಷಿಸಿ ಸಂತಸ ಪಟ್ಟಿದ್ದರು. ಉಡುಪಿಗೆ ಇದೇ ಪ್ರಥಮ ಬಾರಿಗೆ ಬಂದಿದ್ದೇವೆ ಎಂದು ಮನೋಜ್‌ ಹಾನಗಲ್‌ ತಿಳಿಸಿದ್ದಾರೆ.

ಇದು ಕೇವಲ ಸಂಗೀತಾಸಕ್ತರಿಗೆ ಮಾತ್ರವಲ್ಲದೆ ಇತಿಹಾಸ, ಸಂಸ್ಕೃತಿಪ್ರಿಯರಿಗೂ ಜ್ಞಾನ ವೃದ್ಧಿಗೆ ಪೂರಕ. ನ. 24ರಿಂದ 26ರ ವರೆಗೆ ಈ ಅಪೂರ್ವ ಸಂಗ್ರಹವನ್ನು ವೀಕ್ಷಿಸಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next