Advertisement
ಬಿಳಿಕೆರೆ-ಕೆ.ಆರ್.ನಗರ ಹೆದ್ದಾರಿಯ ಮುಖ್ಯ ರಸ್ತೆ ಪಕ್ಕದಲ್ಲೇ ಇರುವ ಹೊಸ ರಾಮೇನಹಳ್ಳಿಯ ಈರಣ್ಣೇಶ್ವರಸ್ವಾಮಿ ದೇವಾಲಯದ ಬಳಿಯ ಮುಂಭಾಗದ ಆವರಣದಲ್ಲಿ ಒಂಭತ್ತು ಬನ್ನಿಮರದ ಕಂಬಗಳ ನಡುವೆ ನಿಂತಿರುವ ಶೂಲದಯ್ಯನೆನ್ನುವ ಹೆಸರಿನಿಂದಲೂ ಕರೆಯಿಸಿಕೊಳ್ಳುವ ಈರಣ್ಣೇಶ್ವರಸ್ವಾಮಿಗೆ ನಾಲ್ಕು ದಿನಗಳ ಕಾಲ ಸಂಪ್ರದಾಯ ಬದ್ಧವಾಗಿ ವಿವಿಧ ಪೂಜಾ ಕೈಂಕರ್ಯ ಗಳನ್ನು ನೆರವೇರಿಸಲಾಯಿತು.
Related Articles
Advertisement
ಲಕ್ಷದೀಪೋತ್ಸವ: ರಾತ್ರಿ ಭಕ್ತರು ಒಂಭತ್ತು ಕಂಬದಯ್ಯನಿಗೆ ಮಣ್ಣಿನ ಹಣತೆಯಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ ಲಕ್ಷ ದೀಪೋತ್ಸವ ನೆರವೇರಿದರು. ಈ ವೇಳೆ ಸ್ಥಳೀಯ ಜಾನಪದ ಕಲಾತಂಡಗಳ ಗುಡ್ಡರ ಕುಣಿತ, ಮಾರಿ ಕುಣಿತ ಮುಂತಾದ ಕಲಾತಂಡಗಳು ಪ್ರದರ್ಶನ ನೀಡಿದ ನಂತರ ಮಾರನೆಯ ಮುಂಜಾನೆ ಹರಕೆಗೆ ಕಟ್ಟಿದ್ದ ಬಾಳೆಗೊನೆ ಗಳನ್ನು ಭಕ್ತರಿಗೆ ನೀಡಲಾಯಿತು.
ಹಬ್ಬಕ್ಕೆಂದು ದೂರದ ಉರುಗಳಿಂದ ಬಂದಿದ್ದ ನೆಂಟರಿಗೆ ಗ್ರಾಮದ ಮನೆ ಮನೆಗಳಲ್ಲಿ ಹಬ್ಬದ ಅಡುಗೆ ತಯಾರಿಸಿ ಉಣಬಡಿಸಿದರು.
ಪ್ರತಿವರ್ಷ ಗೆದ್ದಲು ಹಿಡಿದ ಮರ ವನ್ನು ಬದಲಿಸಿ ಹೊಸಮರ ತಂದು ನೆಡುವುದು ವಾಡಿಕೆ. ಕಳೆದ ಸಾಲಿನಲ್ಲಿ ನೆಟ್ಟ ಬನ್ನಿಮರವೊಂದು ಚಿಗುರಿದ್ದು, ಹಸಿರು ಎಲೆಗಳಿಂದ ಕಂಗೊಳಿಸುತ್ತಿರು ವುದು ಗ್ರಾಮಸ್ಥರಲ್ಲಿ ಹರ್ಷ ತಂದಿದೆ. ಇದು ಗ್ರಾಮದ ಜನರಿಗೆ ಶುಭ ಸಂಕೇತವೆಂದು ಭಾವಿಸುತ್ತಾರೆ.